ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಹೋಯ್ತು ನಾಲ್ವರ ಪ್ರಾಣ.. ಇದಕ್ಕೆ ಕೊನೆ ಯಾವಾಗ..?

author-image
Ganesh
Updated On
ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಹೋಯ್ತು ನಾಲ್ವರ ಪ್ರಾಣ.. ಇದಕ್ಕೆ ಕೊನೆ ಯಾವಾಗ..?
Advertisment
  • ನಾಳೆ ಬೆಳಗ್ಗೆ ಮಹತ್ವದ ಸಭೆ ಕರೆದ ರಾಜ್ಯ ಸರ್ಕಾರ
  • ಯಾವುದೇ ಕ್ರಮ ಇಲ್ಲದಿದ್ದಕ್ಕೆ ಕುಮಾರಸ್ವಾಮಿ ಆಕ್ರೋಶ
  • ಗೃಹ ಸಚಿವ ಪರಮೇಶ್ವರ್​ ಇವತ್ತು ಏನು ಹೇಳಿದರು?

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್​​ ಕಿರುಕುಳಕ್ಕೆ ಪ್ರಾಣ ಕಳೆದುಕೊಳ್ಳುತ್ತಿರೋರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಬೀದರ್​ನಲ್ಲಿ ಸಾಲ ತೀರಿಸಲಾಗದೇ ಮಹಿಳೆಯೊಬ್ಬಳು ಉಸಿರು ನಿಲ್ಲಿಸಿದ್ದಾಳೆ.

ರೇಷ್ಮಾ ಸುನಿಲ್ ಸೂರ್ಯವಂಶಿ (25) ಬದುಕು ಮುಗಿಸಿದವಳು. ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. 6ಕ್ಕೂ ಅಧಿಕ ವಿವಿಧ ಸಂಘಗಳಲ್ಲಿ ಸುಮಾರು 3 ಲಕ್ಷಗಳಷ್ಟು ಸಾಲ ಮಾಡಿದ್ದಳು. ಸಂಘಗಳಲ್ಲಿ ಸಾಲ ಪಡೆದು ಮನೆಗೆ ಶೆಡ್ ಹಾಕಿಸಿದ್ದಳು. ಸಾಲ‌ ತೀರಿಸಲಾಗದೇ ಇದೀಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: CET ಯಲ್ಲಿ ಅಕ್ರಮ ತಡೆಯಲು ಹೊಸ ಪ್ಲಾನ್.. AI ಆಧಾರಿತ ಅರ್ಜಿ ಪ್ರಕ್ರಿಯೆ ಜಾರಿ

publive-image

ರಾಜ್ಯದಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಜೋರಾಗಿದೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮಾತನಾಡಿ.. ಒಂದು ತಿಂಗಳಿನಿಂದ ರಾಜ್ಯದಲ್ಲಿ ಈ ಸಮಸ್ಯೆ ಇದೆ. ಜನ ಹಳ್ಳಿ ಹಳ್ಳಿಯನ್ನ ಬಿಟ್ಟು ಹೋಗುತ್ತಿದ್ದಾರೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಏನು ಕ್ರಮ ಆಗಿದೆ? ಮೈಕ್ರೋ ಫೈನಾನ್ಸ್ ಯಾವುದೇ ಅನುಮತಿ ಪಡೆಯದೇ ಅಣಬೆ ರೀತಿ ಹುಟ್ಟಿಕೊಂಡಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಭೆ ಕರೆದ ಸರ್ಕಾರ..

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮೂಗುದಾರ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಇಂದು ಮಾತನಾಡಿರುವ ಸಚಿವ ಪರಮೇಶ್ವರ್.. ಈ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಕಾನೂನು ಇಬ್ಬರಿಗೂ ಇದೆ. ಬ್ಯಾಂಕ್ ನಿಯಮದ ಪ್ರಕಾರ ರಿಕವರಿ ಮಾಡೋಕೆ ಕಾನೂನು ಇದೆ. ಅವರ ರಕ್ಷಣೆ ಮಾಡೋಕೂ ಕಾನೂನು ಇದೆ. ಆ ಕಾನೂನು ಕಠಿಣವಾಗಿಲ್ಲ ಅಂತಾ ವರದಿ ಬಂದಿದೆ. ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡುವ ಅಗತ್ಯ ಇದೆ, ಸರ್ಕಾರ ಅದನ್ನ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಗುರುವನ್ನೇ ಮೀರಿಸೋ ಫಿಯರ್​​ಲೆಸ್ ಬ್ಯಾಟಿಂಗ್.. ಯುವಿ ಗರಡಿಯ ಅಭಿಷೇಕ್​ಗೆ ಭಯವೇ ಇಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment