/newsfirstlive-kannada/media/post_attachments/wp-content/uploads/2024/11/SIDDU-VS-MODI.jpg)
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಯಲ್ಲೂ ರಾಜ್ಯ ಕಾಂಗ್ರೆಸ್​ ಸರ್ಕಾರದ ಮೇಲಿನ ಆರೋಪಗಳೇ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ.. ಮೋದಿ ಹೂಡಿದ 700 ಕೋಟಿ ಲೂಟಿ ಬಾಣಕ್ಕೆ ರಾಜ್ಯ ಕಾಂಗ್ರೆಸ್​ ನಾಯಕರು ಕಂಗಲಾಗಿದ್ದಾರೆ.. ಇತ್ತ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಎಸೆದ ಸವಾಲ್​ ಮತ್ತೊಂದು ವಾಗ್ಯುದ್ಧಕ್ಕೆ ಮುನ್ನುಡಿ ಬರೆದಂತಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣಾ ಅಖಾಡ ರಂಗೇರುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ಮೋದಿ, ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಲ್ಲದೇ ಹರಿಯಾಣ ಪ್ರಚಾರ ಸಭೆಗಳಲ್ಲೂ ಮೋದಿ ಮುಡಾ ಹಗರಣವನ್ನ ಪ್ರಸ್ತಾಪಿಸಿದ್ರು. ಕೊನೆಯ ಹಂತದ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್‌ಗೆ ಇದು ಭಾರೀ ಹೊಡೆತವನ್ನೇ ಕೊಟ್ಟಿತ್ತು. ಸದ್ಯ ಮಹರಾಷ್ಟ್ರ ಚುನಾವಣಾ ಅಖಾಡದಲ್ಲಿ ಮೋದಿ ಹೂಡಿದ 700 ಕೋಟಿ ಅಸ್ತ್ರ ರಾಜ್ಯ ಕಾಂಗ್ರೆಸ್​ ನಾಯಕರಿಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ:ಮುಡಾಗೆ ಪ್ರತಿಯಾಗಿ ಬಿಜೆಪಿ ವಿರುದ್ಧ ಸಿಎಂ ಹೊಸ ಅಸ್ತ್ರ; ಬಿಎಸ್​ವೈ, ರಾಮುಲು ಸಿಕ್ಕಿಸಲು ಪ್ಲಾನ್..!
ಮೋದಿಯ 700 ಕೋಟಿ ಬಾಣಕ್ಕೆ ‘ಕೈ’ ಪಡೆ ಥಂಡಾ!
ಮಹಾರಾಷ್ಟ್ರದ ಅಕೋಲಾದಲ್ಲಿ ಮೋದಿ ಬಿಟ್ಟ ಬಾಣ, ಕಾಂಗ್ರೆಸ್​ ನಾಯಕರನ್ನ ಥಂಡಾ ಹೊಡೆಸಿದೆ.. ಕರ್ನಾಟಕದಲ್ಲಿ ಮದ್ಯದ ವ್ಯವಹಾರದಿಂದ 700 ಕೋಟಿ ರೂಪಾಯಿ ಸುಲಿಗೆ ಮಾಡಲಾಗಿ ಅಂತ ಮೋದಿ ಗಂಭೀರ ಆರೋಪ ಮಾಡಿದ್ರು. ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳೂ ಈ ಶಾಹಿ ಪರಿವಾರದ ಎಟಿಎಂಗಳಾಗಿ ಮಾರ್ಪಟ್ಟಿವೆ ಎಂದು ಮೋದಿ ಆರೋಪಿಸಿದ್ರು.
ಪ್ರಧಾನಿ ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸವಾಲ್
ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪವನ್ನು ಪ್ರಧಾನಿ ಮೋದಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಿಗ್ಗಾಂವಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಆರೋಪ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ನೇರ ಸವಾಲು ಹಾಕಿದ್ದಾರೆ.
‘ಸ್ವತಂತ್ರ ಭಾರತದಲ್ಲಿ ಇಂಥ ಸುಳ್ಳು ಹೇಳೋ ಪ್ರಧಾನಿ ನೋಡಿಲ್ಲ’- ಸಿದ್ದರಾಮಯ್ಯ
ಆರೋಪ ಸಾಬೀತು ಪಡಿಸುವಂತೆ ಸವಾಲು ಹಾಕಿದ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ಇಂತಹ ಸುಳ್ಳು ಹೇಳುವಂತಹ ಪ್ರಧಾನಿ ಇತಿಹಾಸದಲ್ಲಿ ಬಂದಿರಲಿಲ್ಲ.. ಹೋದಲ್ಲಿ ಬಂದಲ್ಲಿ ಮೋದಿಯವರು ಕರ್ನಾಟಕವನ್ನು ಮತ್ತೆ ಮತ್ತೆ ತಮ್ಮ ಭಾಷಣದಲ್ಲಿ ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಟ್ನಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರ ಮೈನಸ್​​ಗಳನ್ನೇ ಅನ್ಯ ರಾಜ್ಯದ ಚುನಾವಣೆಗಳಲ್ಲಿ ಪ್ಲಸ್​​ ಮಾಡಿಕೊಳ್ತಿರೋ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್​ನ ಕಟ್ಟಿಹಾಕುವ ತಂತ್ರ ಹಣೆದಿದೆ. ಮೋದಿ ಹೂಡ್ತಿರೋ ಆರೋಪಗಳ ಬಾಣಕ್ಕೆ ದಂಗಾಗಿರೋ ಕೈಪಡೆ ಉತ್ತರಗಳ ಪ್ರತ್ಯಾಸ್ತ್ರಗಳನ್ನ ಹೂಡಲು ಸೈನಿಕರನ್ನ ಸಜ್ಜುಗೊಳಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us