ಅಂತಿಮ ದರ್ಶನ ಪಡೆದ ಸಿಎಂ; ಭರತ್ ಭೂಷಣ್ ಪುತ್ರನಿಗೆ ಸಮಾಧಾನ ಮಾಡಿದ ಸಿದ್ದರಾಮಯ್ಯ

author-image
Ganesh
Updated On
ಅಂತಿಮ ದರ್ಶನ ಪಡೆದ ಸಿಎಂ; ಭರತ್ ಭೂಷಣ್ ಪುತ್ರನಿಗೆ ಸಮಾಧಾನ ಮಾಡಿದ ಸಿದ್ದರಾಮಯ್ಯ
Advertisment
  • ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಪೈಶಾಚಿಕ ಕೃತ್ಯ
  • ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದ ಸಿಎಂ
  • ಸರ್ಕಾರದಿಂದ 10 ಲಕ್ಷ ಪರಿಹಾರ ನೀಡ್ತೀವಿ ಎಂದ ಸಿದ್ದರಾಮಯ್ಯ

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಇಬ್ಬರು ಕನ್ನಡಿಗರ ಮೃತದೇಹ ತವರಿಗೆ ತಲುಪಿವೆ. ಭರತ್ ಭೂಷಣ್ ಮತ್ತು ಮಂಜುನಾಥ್​ ಮೃತದೇಹ ಬೆಂಗಳೂರು ಏರ್ಪೋರ್ಟ್​ನಿಂದ ಅವರವರ ನಿವಾಸಕ್ಕೆ ತಲುಪಿಸಲಾಗಿದೆ.

ಇತ್ತ ಭರತ್​ ಭೂಷಣ್​ ಮೃತದೇಹ ಕಂಡು ತಾಯಿ ಕಣ್ಣೀರಿಟ್ಟಿದ್ದಾರೆ. ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಭರತ್​ ಭೂಷಣ್​ ಹಣೆಗೆ ಕುಂಕಮವನ್ನಿಟ್ಟು ಕಣ್ಣೀರಿಟ್ಟಿದ್ದಾರೆ. ಸದ್ಯ ಮತ್ತಿಕೆರೆಯ ಅವರ ಮನೆಯ ಬಳಿ ಅಂತಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಉಗ್ರರ ಪೈಶಾಚಿಕ ಕೃತ್ಯ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ.. ಗಾಬರಿಯಿಂದ ಠಾಣೆಗೆ ಬಂದ ಗಂಭೀರ್​..!

publive-image

ಸಿಎಂ ಅವರಿಂದ ಅಂತಿಮ ದರ್ಶನ

ಸಿಎಂ ಸಿದ್ದರಾಮಯ್ಯ ಇನ್ನು ಭರತ್ ಭೂಷಣ್‌ ಅಂತಿಮ ದರ್ಶನ ಪಡೆದಿದ್ದಾರೆ. ಸಿಎಂ ಜೊತೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಕೂಡಾ ಭರತ್ ಭೂಷಣ್ ನಿವಾಸಕ್ಕೆ ಆಗಮಿಸಿದ್ದು, ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ಮೃತ ಭರತ್ ಭೂಷಣ್‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಇದೇ ವೇಳೆ ಸಿಎಂ ಭರತ್​ ಮಗನ ತಲೆ ಸವರಿದ್ರು. ಭರತ್​ ಪತ್ನಿ ಹಾಗೂ ಸಹೋದರ ಘಟನೆ ಏಗಾಯ್ತು ಅನ್ನೋದನ್ನ ಸಿಎಂಗೆ ವಿವರಿಸಿದ್ದಾರೆ.

ಇದನ್ನೂ ಓದಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ತಾತ್ಕಾಲಿಕ ಅಮಾನತು; ಹನಿ ಹನಿ ನೀರಿಗೂ ಪರದಾಡಲಿದೆ ಪಾಕ್​..!

publive-image

ಭರತ್​ ಭೂಷಣ್ ಅಂತಿಮ ದರ್ಶನದ ಬಳಿಕ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಕೊಡ್ತೀವಿ ಎಂದಿದ್ದಾರೆ. ಜೊತೆಗೆ ರಾಮಲಿಂಗಾರೆಡ್ಡಿ ಇಲ್ಲೇ ಇರ್ತಾರೆ. ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಅವರಿಗೆ ಹೋಗಲು ಹೇಳಿದ್ದೇನೆ. ಸಂತೋಷ್ ಲಾಡ್​ರನ್ನ ಕಾಶ್ಮೀರಕ್ಕೆ ಕಳಿಸಿದ್ದೀವಿ.. ಕನ್ನಡಿಗರು ಯಾರೆಲ್ಲ ಇದ್ದಾರೆ ಶ್ರೀನಗರದಲ್ಲಿ ಅವರನ್ನೆಲ್ಲ ವಾಪಸ್ ಕರೆದುಕೊಂಡು ಬರಲಿಕ್ಕೆ ತಿಳಿಸಿದ್ದೇನೆ. ಮೃತರಿಗೆ ಸರ್ಕಾರಿ ಗೌರವ ಕೊಡಲಾಗುತ್ತೆ ಅಂತ ಹೇಳಿದ್ರು. ಜೊತೆಗೆ ಕೇಂದ್ರ ಸರ್ಕಾರಕ್ಕೆ ಮತ್ತೆ ಈ ರೀತಿಯ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಬೇಕು ಅಂತ ಹೇಳಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment