ದಿಢೀರ್​ ಆಸ್ಪತ್ರೆಗೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಕಾರಣವೇನು?

author-image
Ganesh Nachikethu
Updated On
10 ವರ್ಷದ ಹಿಂದಿನ ಸಮೀಕ್ಷೆ ಪ್ರಕಟ ನ್ಯಾಯೋಚಿತವಲ್ಲ -ಜಾತಿಗಣತಿ ಬಗ್ಗೆ ಸಿದ್ದಗಂಗಾ ಶ್ರೀ ಮಾತು
Advertisment
  • 2 ತಿಂಗಳಿನಿಂದ ಮಂಡಿನೋವಿನಿಂದ ಬಳಲುತ್ತಿದ್ದ ಸಿಎಂ ಸಿದ್ದರಾಮಯ್ಯ
  • ರೊಟಿನ್​​ ಚೆಕಪ್​​ಗಾಗಿ ಮಣಿಪಾಲ್​ ಆಸ್ಪತ್ರೆಗೆ ತೆರಳಿದ ಮುಖ್ಯಮಂತ್ರಿ..!
  • ಸಿಎಂ ಸಿದ್ದರಾಮಯ್ಯ ಜತೆಗೆ ಸಚಿವ ಜಮೀರ್​ ಅಹ್ಮದ್​ ಖಾನ್ ಇದ್ದರು

ಬೆಂಗಳೂರು: ಇತ್ತೀಚೆಗಷ್ಟೇ ಮಂಡಿನೋವು ಹಿನ್ನಲೆ ನಗರದ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಸಿದ್ದರಾಮಯ್ಯ ಸತತ 2 ಗಂಟೆಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದಿದ್ದರು. ಡಾ. ಸತ್ಯನಾರಾಯಣ ಅವರು ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯ ತಪಾಸಣೆ ಮಾಡಿ ನೀ ಪ್ಯಾಡ್ ಹಾಕಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಸಿಎಂ ಸಿದ್ದರಾಮಯ್ಯ ವೈದ್ಯರ ಸಲಹೆ ಮೇರೆಗೆ 2 ತಿಂಗಳು ರೆಸ್ಟ್​ ಮಾಡಿದ್ರು.

ಸದ್ಯ 2 ತಿಂಗಳ ನಂತರ ಸಿಎಂ ಸಿದ್ದರಾಮಯ್ಯ ರೊಟಿನ್​​ ಚೆಕಪ್​​ಗಾಗಿ ಮಣಿಪಾಲ್​ ಆಸ್ಪತ್ರೆಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಜಮೀರ್​ ಅಹ್ಮದ್​ ಖಾನ್​​, ರಾಜಕೀಯ ಕಾರ್ಯದರ್ಶಿ ಗೋವಿಂದ್​ ರಾಜ್​​ ಕೂಡ ಇದ್ದರು.

ಇನ್ನು, ಈಗ ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಹೀಗಾಗಿ ರೊಟಿನ್​ ಚೆಕಪ್​ ನಡೆಯುತ್ತಿದ್ದು, ವೈದ್ಯಕೀಯ ತಂಡದಿಂದಲೇ ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆ ಅಧಿಕೃತ ಅಪ್ಡೇಟ್​ ಸಿಗಲಿದೆ.

ಇದನ್ನೂ ಓದಿ:ಪೋಷಕರೇ ಮಕ್ಕಳಿಗೆ ಕೊಡೋ ಫುಡ್​ ಬಗ್ಗೆ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment