newsfirstkannada.com

ಕೊನೆಗೂ ಬಿಜೆಪಿಗೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ; ಅಕ್ಕಿ ಖರೀದಿಗಾಗಿ ಮಾಸ್ಟರ್​​ ಪ್ಲಾನ್​ ಮಾಡಿದ್ರು!

Share :

Published June 29, 2023 at 6:37am

  5 ಕೆಜಿ ಅಕ್ಕಿ ಜೊತೆಗೆ ಉಳಿದ ಅಕ್ಕಿಯ ಹಣ ನಿಮ್ಮ ಖಾತೆಗೆ

  ಬಿಪಿಎಲ್‌ ಕುಟುಂಬದ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ, 170 ರೂ.

  ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂ. ಹಣ ಜಮೆ

ಬೆಂಗಳೂರು: ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನಡೆಯುತ್ತಿದ್ದ ಅಕ್ಕಿ ಸಮರ ಅಂತ್ಯಗೊಂಡಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಜಾರಿಗೆ ಮಾಸ್ಟರ್​ ಪ್ಲಾನ್​ ಮಾಡಿದೆ. ಬಿಪಿಎಲ್ ಕಾರ್ಡ್​​ ಹೊಂದಿರೋ ರಾಜ್ಯದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂದಿದ್ದ ಕಾಂಗ್ರೆಸ್​ ಸರ್ಕಾರ ಅಗತ್ಯದಷ್ಟು ಅಕ್ಕಿ ಸಂಗ್ರಹಿಸಲು ಆಗಲಿಲ್ಲ. ಹೀಗಾಗಿ ಪ್ಲಾನ್ ಬಿ ಮೊರೆ ಹೋಗಿರೋ ಕಾಂಗ್ರೆಸ್​ ಸರ್ಕಾರ 10 ಕೆಜಿ ಅಕ್ಕಿ ಕೊಡಲಾಗದೇ ಜನರ ಖಾತೆಗೆ ಹಣ ಸಂದಾಯ ಮಾಡೋಕೆ ಮುಂದಾಗಿದೆ.

ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಜಮೆ

10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಘಂಟಾಘೋಷವಾಗಿ ಹೇಳಿದ್ದ ಕಾಂಗ್ರೆಸ್​ ಸರ್ಕಾರ ಈಗ ಅಕ್ಕಿ ಸಿಗಲಾಗದೇ ಮಹತ್ವದ ತೀರ್ಮಾನ ಕೈಗೊಂಡಿದೆ. ಜುಲೈ 1ರಿಂದ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ಕೊಡಲಿದ್ದು, ಉಳಿದ 5 ಕೆಜಿ ಅಕ್ಕಿಯ ಬದಲು ಹಣವನ್ನು ಜನರಿಗೆ ಸರ್ಕಾರ ನೀಡಲಿದೆ.

ಒಬ್ಬರಿಗೆ ತಲಾ 170 ರೂಪಾಯಿ ಹಣವನ್ನು ಖಾತೆಗೆ ಜಮೆ ಮಾಡಲಿದೆ ಎಂದು ಆಹಾರ ಸಚಿವ ಕೆ.ಹೆಚ್​ ಮುನಿಯಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಅಕ್ಕಿ ಕೊರತೆಯ ಹಿನ್ನೆಲೆ ಹಣ ನೀಡಲು ತೀರ್ಮಾನಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅಲ್ಲದೇ ಅಕ್ಕಿ ಸಿಗುವವರೆಗೆ ಮಾತ್ರ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ.

ಅಕ್ಕಿ ಕೊಡದೇ ಕೇಂದ್ರದಿಂದ ದ್ರೋಹ ಎಂದ ಸಿದ್ದರಾಮಯ್ಯ

ದಾಸ್ತಾನಿದ್ರೂ ಅಕ್ಕಿ ಕೊಡದೇ ಕೇಂದ್ರ ಸರ್ಕಾರದವರು ಬಡವರ ಕಾರ್ಯಕ್ರಮಕ್ಕೆ ಕಲ್ಲುಹಾಕುವ ಕೆಲಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಹಣ ಕೊಡುತ್ತೇವೆ ಎಂದರೂ ಕೇಂದ್ರ ಅಕ್ಕಿ ಪೂರೈಸಲು ಸಿದ್ಧರಿಲ್ಲ. ಈ ಮೂಲಕ ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡಿದ್ದಾರೆ. ನಾವು ಜುಲೈ 1 ರಿಂದ 10 ಕೆಜಿ ಆಹಾರಧಾನ್ಯ ನೀಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಜೊತೆಗೆ ನಾವು ಅಕ್ಕಿ ಕೊಡಲು ಟೆಂಡರ್ ಕರೆಯುತ್ತಿದ್ದೇವೆ ಅಂತ ಹೇಳಿದ್ದಾರೆ.

ಒಟ್ಟಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡಯುತ್ತಿದ್ದ ಅಕ್ಕಿ ಕುರುಕ್ಷೇತ್ರ ಅಂತ್ಯವಾಗಿದೆ. ಮೊದಲೇ ಪ್ಲಾನ್ ಮಾಡಿ ಘೋಷಿಸದೇ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿ ಈಗ ಅಕ್ಕಿ ಸಿಗದೇ ಹಣ ನೀಡಲು ಮುಂದಾಗಿದೆ. ಅಕ್ಕಿ ಸಿಗೋವರೆಗೆ ಮಾತ್ರ ಸರ್ಕಾರ ಹಣ ನೀಡಲಿದ್ದು ಅಕ್ಕಿ ಸಿಕ್ಕ ಬಳಿಕ 10 ಕೆಜಿ ಅಕ್ಕಿ ಪೂರೈಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಬಿಜೆಪಿಗೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ; ಅಕ್ಕಿ ಖರೀದಿಗಾಗಿ ಮಾಸ್ಟರ್​​ ಪ್ಲಾನ್​ ಮಾಡಿದ್ರು!

https://newsfirstlive.com/wp-content/uploads/2023/06/Siddu_1234.jpg

Load More