newsfirstkannada.com

ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ಸಮರ

Share :

Published April 23, 2024 at 7:19am

  ಮೋದಿ ಸರ್ಕಾರದ ವಿರುದ್ಧ ಮತ್ತೆ ಸಮರಕ್ಕೆ ಸಿದ್ದು ಸರ್ಕಾರ ರೆಡಿ

  ಬರ ಪರಿಹಾರ ಬಿಡುಗಡೆ ಸಂಘರ್ಷ ಮತ್ತಷ್ಟು ಜೋರಾಗುವ ಲಕ್ಷಣ

  ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಏನೆಂದು ಸೂಚನೆ ನೀಡಿದೆ?

ಬರ ಪರಿಹಾರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಕಾಂಗ್ರೆಸ್​ಗೆ ಮೊದಲ ಹಂತದ ಲೀಡ್ ಸಿಕ್ಕಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಲು ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ. ಇದರ ಭಾಗವಾಗಿ ಮತ್ತೊಂದು ಬೃಹತ್ ಪ್ರತಿಭಟನೆಗೆ ವೇದಿಕೆ ಸಿದ್ಧವಾಗಿದೆ.

ಇದು ಕಳೆದೆರಡು ತಿಂಗಳ ಹಿಂದೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ರಣಕಹಳೆ ಮೊಳಗಿಸಿದ್ದ ಪರಿ. ಇಡೀ ಕರುನಾಡಿನ ಕಾಂಗ್ರೆಸ್ ಬಳಗವೇ ರಾಷ್ಟ್ರ ರಾಜಧಾನಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಬರ ಪರಿಹಾರ ಬಿಡುಗಡೆಯ ಸಂಘರ್ಷ ಮತ್ತಷ್ಟು ಜೋರಾಗೋ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.

ಇಂದು ಕೇಂದ್ರದ ವಿರುದ್ಧ ಮತ್ತೆ ಕಾಂಗ್ರೆಸ್ ಪ್ರತಿಭಟನಾ ಕಿಚ್ಚು

ದಶಕದ ಬಳಿಕ ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸ್ತಿದೆ. ಇದನ್ನ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ 18 ಸಾವಿರ ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿಸಿ ಅಂತ ಸುಪ್ರೀಂಕೋರ್ಟ್ ಮಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ​, ಆದಷ್ಟು ಬೇಗ ಬರ ಪರಿಹಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದ್ದು, ಇಂದು ರಣಕಹಳೆ ಮೊಳಗಲಿದೆ.

ಎಲ್ಲಾ ಶಾಸಕರೂ ಭಾಗಿಯಾಗುವಂತೆ ಡಿಕೆಶಿ ಕಟ್ಟಪ್ಪಣೆ

ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಾಳಯ ಸಿದ್ಧತೆ ಮಾಡಿಕೊಳ್ತಿದೆ. ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಬೆಳಗ್ಗೆ 9.30ಕ್ಕೆ ಪ್ರತಿಭಟನೆ ಆರಂಭವಾಗಲಿದ್ದು, ಈ ವೇಳೆ ಕೇಂದ್ರದ ವಿರುದ್ಧ ಆಕ್ರೋಶದ ಬಾಣಗಳು ಸಿಡಿಯಲಿವೆ. ಇನ್ನು, ಈ ಪ್ರತಿಭಟನೆಯಲ್ಲಿ ಎಲ್ಲ ಶಾಸಕರೂ ಕಡ್ಡಾಯವಾಗಿ ಭಾಗಿಯಾಗಬೇಕು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ. ಹೀಗಾಗಿ ಇಡೀ ಹಸ್ತ ಬಳಗ ಇಂದು ವಿಧಾನಸೌಧದ ಮುಂದೆ ನಡೆಯಲಿರೋ ಪ್ರತಿಭಟನೆಯಲ್ಲಿ ಭಾಗಿಯಾಗಲಿದೆ. ಕೇಂದ್ರದ ನೀತಿ ವಿರುದ್ಧ ಕಿಚ್ಚು ಹೊತ್ತಲಿದೆ.

ಇದನ್ನೂ ಓದಿ: ವಿಧಿಯ ಆಟ ಘೋರ! ಮುದ್ದಾದ ಕಂದಮ್ಮನ ಮೇಲೆ ಕಾರು ಹರಿಸಿದ ಅಪ್ಪ.. ಮಗು ಸಾವು

ಇದನ್ನೂ ಓದಿ: VIDEO: ಸಿದ್ದರಾಮಯ್ಯಗೆ ಫ್ರೀ ಬಸ್​ ಟಿಕೆಟ್​ ಹಾರ ಹಾಕಿದ ವಿದ್ಯಾರ್ಥಿನಿ; ಸಿಎಂ ಫುಲ್​ ಖುಷ್

ಒಂದು ವಾರದಲ್ಲಿ ಬರ ಪರಿಹಾರ ಕೊಡಿಸಬೇಕಾಗಿದೆ. ನಾವು ಸುಪ್ರೀಂಕೋರ್ಟ್​ಗೆ ಹೋಗಿ ಮನವಿ ಮಾಡಿದ್ದೇವು. ನಾನು ಮತ್ತು ನಮ್ಮ ಸಚಿವರು ಸೇರಿ ದೆಹಲಿಗೆ ಹೋಗಿ ಮೋದಿ, ಅಮಿತ್ ಶಾರನ್ನು ಭೇಟಿ ಮಾಡಿ ಪರಿಹಾರ ಕೇಳಿದ್ದೇವು. ಸದ್ಯ ಕೋರ್ಟ್​​ನಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.

ಸಿದ್ದರಾಮಯ್ಯ, ಸಿಎಂ

ನೇಹಾ ಹತ್ಯೆ ಪ್ರಕರಣ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿರೋ ಬಿಜೆಪಿ, ಕಾಂಗ್ರೆಸ್​ ಸರ್ಕಾರದ ವಿರುದ್ಧ ತೊಡೆ ತಟ್ಟಿದೆ. ಇತ್ತ ಕಾಂಗ್ರೆಸ್ ಕೂಡ ಬರ ಪರಿಹಾರದಲ್ಲಿನ ತಾರತಮ್ಯ ವಿಚಾರ ಇಟ್ಕೊಂಡು ಪ್ರತಿಭಟನೆಗೆ ಮುಂದಾಗಿದೆ. ಈ ಪ್ರತಿಭಟನಾ ಪಾಲಿಟಿಕ್ಸ್ ಲೋಕಸಮರದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ಸಮರ

https://newsfirstlive.com/wp-content/uploads/2024/04/CM_SIDDU_PM_MODI.jpg

Load More