/newsfirstlive-kannada/media/post_attachments/wp-content/uploads/2024/07/Kaveri-3.jpg)
ಕಾವೇರಿ ಕನ್ನಡಿಗರ ಜೀವ ನದಿ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳರಿಗೂ ನೀರು ಕೊಡುವ ಮಹಾತಾಯಿ. ಈ ಬಾರಿ ರಾಜ್ಯದಲ್ಲಿ ಸುರಿದ ಮಳೆಯ ಅಬ್ಬರದಿಂದ ಕೆಆರ್ಎಸ್ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ಭರ್ತಿಯಾದ ಕಾವೇರಿ ಮಾತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬಾಗಿನ ಅರ್ಪಿಸಿದ್ದಾರೆ.
ಅಂದಹಾಗೆಯೇ ಈ ಬಾಗಿನ ಎಂದರೆ ಏನು? ಇದನ್ನೇಕೆ ಅರ್ಪಿಸುವುದು? ಎಂಬುವುದು ಬಹುತೇಕರಿಗೆ ತಿಳಿದಿಲ್ಲ. ಬಾಗಿನದಲ್ಲಿ ಏನೇನು ಇಡಲಾಗುತ್ತದೆ?. ಅದನ್ನೇಕೆ ಕಾವೇರಿ ಮಾತೆಗೆ ಅರ್ಪಿಸುತ್ತಾರೆ? ಎಂಬ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕಾವೇರಿ
ಭಾರತದ ಬಹುತೇಕ ನದಿಗಳಿಗೆ ಸ್ತ್ರೀ ಹೆಸರನ್ನು ಇಡಲಾಗಿದೆ. ಅಂದರೆ ನದಿಯನ್ನು ತಾಯಿಗೆ ಹೋಲಿಸಲಾಗಿದೆ. ಪುರಾಣದಲ್ಲಿ ಬರುವ ಸ್ತ್ರೀಯರ ಹೆಸರುಗಳನ್ನು ಭಾರತದ ಬಹುತೇಕ ನದಿಗಳ ಹೆಸರುಗಳನ್ನಾಗಿ ಕಾಣಬಹುದಾಗಿದೆ. ಹಾಗಾಗಿ ಕಾವೇರಿ ಕೂಡ ಒಬ್ಬಳು ತಾಯಿ. ಕಾವೇರಿ ನದಿಯನ್ನು ತಾಯಿಯ ರೂಪದಲ್ಲಿ ಕನ್ನಡಿಗರು ಪೂಜಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕಾಗಿ ಒಡಲು ತುಂಬಿದ ಕಾವೇರಿಗೆ ಬಾಗಿನ ಅರ್ಪಿಸಲಾಗುತ್ತದೆ.
ಬಾಗಿನ ಎಂದರೇನು?
ಬಾಗಿನ ಎಂದರೆ ಕಾಣಿಕೆ, ದಾನ ಎಂದರ್ಥ. ಇದನ್ನು ಮಂಗಳ ದ್ರವ್ಯ ಎಂದು ಕರೆಯುತ್ತಾರೆ. ಇದರಲ್ಲಿ ತವರು ಮನೆಯವರು ತಾಯಿಗೆ ನೀಡಬೇಕಾದ ಕೆಲವು ವಸ್ತುಗಳನ್ನು ಇರಿಸಲಾಗುತ್ತದೆ. ನವಧಾನ್ಯಗಳನ್ನಿರಿಸಿ ಗೌರವಿಸಲಾಗುತ್ತದೆ.
ಬಾಗಿಣದಲ್ಲಿ ಹಾಕುವ ಪದಾರ್ಥಗಳು (ಮುತ್ತೈದೆಯರಿಗೆ ಕೊಡುವ ಬಾಗಿನ)
- ಅರಿಸಿನ : ಕಾವೇರಿ ತಾಯಿ.
- ಕುಂಕುಮ : ಮಹಾಲಕ್ಷ್ಮೀ
- ಸಿಂಧೂರ : ಸರಸ್ವತೀ
- ಕನ್ನಡಿ : ರೂಪಲಕ್ಷ್ಮೀ
- ಬಾಚಣಿಗೆ : ಶೃಂಗಾರಲಕ್ಷ್ಮೀ
- ಕಾಡಿಗೆ : ಲಜ್ಜಾಲಕ್ಷ್ಮೀ
- ಅಕ್ಕಿ : ಶ್ರೀ ಲಕ್ಷ್ಮೀ
- ತೊಗರಿಬೇಳೆ : ವರಲಕ್ಷ್ಮೀ
- ಉದ್ದಿನಬೇಳೆ : ಸಿದ್ದಲಕ್ಷ್ಮೀ
- ತೆಂಗಿನಕಾಯಿ : ಸಂತಾನಲಕ್ಷ್ಮೀ
- ವೀಳ್ಯದ ಎಲೆ : ಧನಲಕ್ಷ್ಮೀ
- ಅಡಿಕೆ : ಇಷ್ಟಲಕ್ಷ್ಮೀ
- ಫಲ(ಹಣ್ಣು) : ಜ್ಞಾನಲಕ್ಷ್ಮೀ
- ಬೆಲ್ಲ : ರಸಲಕ್ಷ್ಮೀ
- ವಸ್ತ್ರ : ವಸ್ತ್ರಲಕ್ಷ್ಮೀ
- ಹೆಸರು ಬೇಳೆ : ವಿದ್ಯಾಲಕ್ಷ್ಮೀ
ಕನ್ನಡಿಗರ ತಾಯಿಗೆ ಕೃತಜ್ಞತೆ
ಶ್ರಾವಣ ಮಾಸದಲ್ಲಿ ಹಬ್ಬಗಳ ಸಾಲು ಪ್ರಾರಂಭವಾಗುತ್ತದೆ. ಈವರೆಗೆ ಬತ್ತಿ ಹೋಗಿದ್ದ ನದಿಗಳು ಆಷಾಢ ಮಾಸದಿಂದ ತುಂಬಿ ತುಳುಕುತ್ತಿರುತ್ತವೆ. ಲಕ್ಷಾಂತರ ಜೀವಜಲರಾಶಿಗಳಿಗೆ ನೀರುಣಿಸುವ ಕಾವೇರಿಗೆ ಕೃತಜ್ಞತಾ ಭಾಗವಾಗಿ ನಮಸ್ಕರಿಸಲಾಗುತ್ತದೆ. ಅದಕ್ಕೆ ಬಾಗಿನ ಸಮರ್ಪಿಸಲಾಗುತ್ತದೆ. 30 ಜೊತೆ ಬಾಗಿನವನ್ನು ತಯಾರಿಸಿ ಸಮರ್ಪಿಸಲಾಗುತ್ತದೆ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ 12 ವರ್ಷದ ಹೆಣ್ಣು ಮಗು.. 6 ಮಕ್ಕಳಿಗೆ ಅಂಗಾಂಗ ದಾನ ಮಾಡಿದ ಪುಟಾಣಿ
[caption id="attachment_77522" align="alignnone" width="800"]ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ[/caption]
ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾರವರು ಈ ಕುರಿತಾಗಿ ನ್ಯೂಸ್ಫಸ್ಟ್ಗೆ ಮಾಹಿತಿ ನೀಡಿದ್ದು, ‘ಬಹಳ ಹಿಂದಿನಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಮಾಜಿ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ರವರು ಈ ಬಾಗಿನ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದರು. ಹೇಮಾವತಿ, ಹಾರಂಗಿ ಮತ್ತು ಕಾವೇರಿ ನದಿಯ ಸಂಗಮವನ್ನು ಕೃಷ್ಣರಾಜ ಸಾಗರ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕಾವೇರಿ ಪೂಜೆ ಮಾಡುತ್ತಿದ್ದೆವು. ಈ ವರ್ಷ ಕಾವೇರಿ ಮಾತೆ ಆಷಾಡದಲ್ಲೇ ತುಂಬಿ ತುಳುಕುತ್ತಿದ್ದಾಳೆ. ಕಳೆದ ವರ್ಷ ನದಿ ತುಂಬಿರಲಿಲ್ಲ ಹಾಗಾಗಿ ನವರಾತ್ರಿ ಸಮಯದಲ್ಲಿ ಪೂಜೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಾಚಾರಿ ಬದುಕಲ್ಲಿ ದೊಡ್ಡ ತಿರುವು.. ಚಾರು ಜೊತೆ ಮನೆಯಿಂದ ಹೊರದಬ್ಬಿದ ವೈಶಾಖ, ಆದರೆ..!
ಇಂದು ಶುಭ ಅಭಿಜಿನ್ ಮುಹೂರ್ತದಲ್ಲಿ ಕನ್ಯಾ ಲಗ್ನದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಲಾಗಿದೆ. ಆಷಾಢ ಮಾಸದಲ್ಲಿ ಕಾವೇರಿ ಜಲಾಶಯ ತುಂಬಿರುವುದು 10-15 ವರ್ಷಕ್ಕಿಂತ ಮೊದಲು. ಶ್ರಾವಣ ಮಾಸ ಆದಮೇಲೆ ಕಾವೇರಿಗೆ ಪೂಜೆ ಮಾಡಲಾಗುತ್ತಿತ್ತು.
ವಿಶೇಷ ವರದಿ: ಹರ್ಷಿತ್ ಅಚ್ರಪ್ಪಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ