newsfirstkannada.com

ರಾಮ ವಿರೋಧಿ ಆರೋಪ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್​​

Share :

Published January 14, 2024 at 5:51am

    ಸಿದ್ದರಾಮಯ್ಯನವರ ದೈವಭಕ್ತಿ ಬಗ್ಗೆ ದೇವೇಗೌಡರ ಮಾತು

    ದೇವೇಗೌಡರ ಹೇಳಿಕೆಯ ಲಾಭ ಪಡೆಯಲು ಸಿಎಂ ತಂತ್ರ

    ರಾಮ ವಿರೋಧಿ ಆರೋಪಕ್ಕೆ ಕೌಂಟರ್​ ಕೊಡಲು ಸಿದ್ಧತೆ

ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಕಿಡಿಕಾರಿತ್ತು. ಅಷ್ಟೇ ಅಲ್ಲ, ಸಿದ್ದರಾಮಯ್ಯ ರಾಮ ವಿರೋಧಿ ಎಂದು ಆರೋಪ ಮಾಡಿತ್ತು. ಇದೀಗ ಬಿಜೆಪಿಯ ಆರೋಪಕ್ಕೆ ಠಕ್ಕರ್​ ನೀಡಲು, ಸಿದ್ದರಾಮಯ್ಯನವರಿಗೆ ದಳಪತಿಯ ಆ ಮಾತೇ ಅಸ್ತ್ರವಾಗಿದೆ.

ಬಿಜೆಪಿಯ ರಾಮ ವಿರೋಧಿ ಆರೋಪಕ್ಕೆ ಕೌಂಟರ್​ ಕೊಡಲು ಪ್ಲಾನ್​

ರಾಮ ವಿರೋಧಿ ಹಣೆಪಟ್ಟಿಯನ್ನು ಕಿತ್ತೊಗೆಯಲು ಸಿಎಂ ಸಿದ್ದರಾಮಯ್ಯಗೆ ಬಲವಾದ ಅಸ್ತ್ರ ಸಿಕ್ಕಿದೆ. ಅದೇ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿಕೆ. ಸಿದ್ದರಾಮಯ್ಯನ ದೈವಭಕ್ತಿ ಬಗ್ಗೆ ದಳಪತಿ ಹಾಡಿರುವ ಮಾತುಗಳು, ಕಾಂಗ್ರೆಸ್​ ಪಕ್ಷಕ್ಕೆ​ ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಖುಷಿಯಾಗಿದೆ. ಜೊತೆಗೆ ಬಿಜೆಪಿ ಆರೋಪಕ್ಕೆ ಕೌಂಟರ್​ ಕೊಡಲು ಸಜ್ಜಾಗುತ್ತಿದೆ. ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಹ್ವಾನವನ್ನು ಕಾಂಗ್ರೆಸ್​ ಹೈಕಮಾಂಡ್​ ತಿರಸ್ಕರಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಅನೇಕ ನಾಯಕರು ರಾಮ ಮಂದಿರಕ್ಕೆ ಹೋಗದಿರಲು ನಿರ್ಧರಿಸಿದ್ದರು.

ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ, ಸಿದ್ದರಾಮಯ್ಯರನ್ನು ರಾಮ ವಿರೋಧಿ, ಹಿಂದೂ ವಿರೋಧಿ ಎಂದು ಕಿಡಿಕಾರಿತ್ತು. ತೀವ್ರ ವಿರೋಧದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಜನವರಿ 22ರ ಬಳಿಕ ರಾಮ ಮಂದಿರಕ್ಕೆ ಹೋಗೋದಾಗಿ ಯೂಟರ್ನ್​ ತೆಗೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯನವರ ಈ ನಡೆ ಬಗ್ಗೆ ದೇವೇಗೌಡರನ್ನು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ದೇವೇಗೌಡ್ರು ಸಿದ್ದರಾಮಯ್ಯನವರ ದೇವಭಕ್ತಿಯನ್ನು ಬಹಿರಂಗ ಪಡಿಸಿದ್ದಾರೆ.

ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯಲು ಸಿದ್ದರಾಮಯ್ಯ ತಂತ್ರ

ಇದೀಗ ದೇವೇಗೌಡರ ಹೇಳಿಕೆಯನ್ನೇ ದಾಳವಾಗಿಸಿಕೊಂಡು, ಬಿಜೆಪಿಗೆ ಟಕ್ಕರ್​ ನೀಡಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯನವರು ಇದೇ ದೇವೇಗೌಡರ ಜೊತೆ ಇದ್ದರು. ಹೀಗಾಗಿ ಸಿದ್ದರಾಮಯ್ಯನವರ ಬಗ್ಗೆ ದಳಪತಿಗೆ ಇಂಚಿಂಚೂ ಮಾಹಿತಿ ಗೊತ್ತಿದೆ. ಸದ್ಯ ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ದೇವೇಗೌಡರ ಹೇಳಿಕೆ ಬಗ್ಗೆ ಮಾಹಿತಿ ಪಡೆದಿರುವ ಸಿಎಂ ಸಿದ್ದರಾಮಯ್ಯ, ಅದನ್ನೇ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ದೇವೇಗೌಡರ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ, ನಾನು ಹಿಂದೂ ವಿರೋಧಿ ಅಲ್ಲ, ರಾಮ ವಿರೋಧಿ ಅಲ್ಲ ಎಂದು ಬಿಂಬಿಸಲು ಪ್ಲಾನ್​ ಮಾಡಿದ್ದಾರೆ.

ಈ ಮೊದಲು ಅಯೋಧ್ಯೆ ರಾಮ ಮಂದಿರಕ್ಕೆ ಹೋಗಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಜನವರಿ 22ರ ಬಳಿಕ ಹೋಗೋದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿಎಸ್​ವೈ, ಇನ್ನಾದರೂ‌ ಕಾಂಗ್ರೆಸ್​ನವರಿಗೆ ಸದ್ಬುದ್ಧಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದು ಟಾಂಗ್​ ನೀಡಿದ್ದಾರೆ. ಅದೇನೆ ಇರಲಿ ತಮ್ಮನ್ನು ಹಿಂದೂ ವಿರೋಧಿ, ರಾಮ ವಿರೋಧಿ ಎನ್ನುವ ಬಿಜೆಪಿ ನಾಯಕರ ಬಾಯಿಗೆ ಬೀಗ ಜಡಿಲು, ಸಿದ್ದರಾಮಯ್ಯನವರಿಗೆ ದೊಡ್ಡ ಅಸ್ತ್ರವೇ ಸಿಕ್ಕಿದೆ. ಎನ್​ಡಿಎ ಭಾಗವಾಗಿರುವ ದಳಪತಿ ಮಾತನ್ನೇ ಬಿಜೆಪಿಗೆ ತಿರುಗು ಬಾಣವಾಗಿ ಪ್ರಯೋಗಿಸಲು ಚಿಂತನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ವಿರೋಧಿ ಆರೋಪ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್​​

https://newsfirstlive.com/wp-content/uploads/2023/10/SIDDU-14.jpg

Load More