newsfirstkannada.com

ಮೋದಿ ಸರ್ಕಾರ ಬೆಲೆ ಏರಿಸಿದಾಗ ಯಾರೂ ಕೇಳಲಿಲ್ಲ.. ನಾವು ಹೆಚ್ಚಳ ಮಾಡಿದ್ರೆ ಪ್ರಶ್ನೆ ಮಾಡ್ತೀರಾ; ಸಿದ್ದರಾಮಯ್ಯ ಸಿಡಿಮಿಡಿ

Share :

Published June 21, 2024 at 7:21am

  ಬೆಲೆ ಏರಿಕೆಯನ್ನ ಮತ್ತೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

  ಸಿದ್ದರಾಮಯ್ಯ ಸರ್ಕಾರದ ಕಡೆಗೆ ಬೊಟ್ಟು ಮಾಡಿದ BJP ಲೀಡರ್ಸ್

  ಪಕ್ಕದ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದಲ್ಲೇ ಬೆಲೆ ಕಡಿಮೆ

ತೈಲ ಬೆಲೆ ಏರಿಕೆ ಬಗ್ಗೆ ಬಿಜೆಪಿ ಮೇಲೆ ಕಾಂಗ್ರೆಸ್​.. ಕಾಂಗ್ರೆಸ್​ ಮೇಲೆ ಬಿಜೆಪಿ ಓವರ್​ ಟೇಕ್ ಮಾಡೋದಕ್ಕೆ ನಿಂತು ಬಿಟ್ಟಿದೆ. ರಾಜ್ಯ ಸರ್ಕಾರ ಮೋದಿ ಸರ್ಕಾರದ ಮೇಲೆ ಗುಡುಗಿದ್ರೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರದ ಕಡೆಗೆ ಬೊಟ್ಟು ಮಾಡ್ತಿದ್ದಾರೆ. ಇದರ ಮಧ್ಯೆ ಸಿಎಂ ಬೆಲೆ ಏರಿಕೆಯನ್ನ ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ದರ ಏರಿಕೆ

ಕಳೆದ ವರ್ಷ ಎಲೆಕ್ಷನ್​ಗೂ ಮುಂಚೆ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡೋ ಮೂಲಕ ಜನರನ್ನು ಹಾಳು ಬಾವಿಗೆ ನೂಕ್ತಿದೆ ಅಂತ ಹಸ್ತ ಪಡೆ ಬೀದಿಗಿಳಿದಿತ್ತು. ಚಟ್ಟಾ ಕಟ್ಟಿ ಅದರ ಮೇಲೆ ಬೈಕ್​ ಇಟ್ಟು ದುಬಾರಿ ಸರ್ಕಾರಕ್ಕೆ ಧಿಕ್ಕಾರ ಅಂತ ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್​ ಹಾಗೂ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಿದ್ರು. ಇದೇ ಹೋರಾಟಗಳನ್ನ ನಂಬಿ ಮತ ಹಾಕಿದ ಮತದಾರರಿಗೆ ಪಂಚ ಗ್ಯಾರಂಟಿಗಳನ್ನ ಕೊಟ್ಟಿತ್ತು. ಆದ್ರೆ ಈಗ ಅದೇ ಗ್ಯಾರಂಟಿಗಳೇ ಜನರ ಜೇಬಿಗೆ ಕೈ ಹಾಕಿದ್ವಾ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಒಂದಾದ ಮೇಲೊಂದರಂತೆ ವಸ್ತುಗಳ ಬೆಲೆ ಏರಿಸುತ್ತಾ ಸರ್ಕಾರ ಶಾಕ್ ಕೊಡ್ತಿದೆ. ಅದರಲ್ಲೂ ತೈಲ ಬೆಲೆ ಏರಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದಿಂದ ತೈಲ ಬೆಲೆ ಏರಿಕೆ ಬಿಸಿ

ಇಷ್ಟು ದಿನ ಪಂಚ ಗ್ಯಾರಂಟಿಗಳನ್ನ ಕೊಟ್ಟು ನುಡಿದಂತೆ ನಡೆದಿದ್ದೀವಿ ಎಂದು ಬಿಜೆಪಿಗೆ ಪಂಚ್​ ಕೊಡ್ತಿದ್ದ ಕಾಂಗ್ರೆಸ್, ಈಗ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಸಾರ್ವಜನಿಕರ ಆಕ್ರೋಶದ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೆ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಹಣ ಹೊಂದಿಸಬೇಕು. ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡಿದ್ದೇವೆ. ಕೇಂದ್ರದವರು ತೈಲ ದರ ನೂರರ ಗಡಿ ದಾಟಿಸಿದರು. ಆಗ ಯಾರೊಬ್ಬರೂ ಪ್ರಶ್ನೆ ಮಾಡಲಿಲ್ಲ. ನಾವು ಹೆಚ್ಚಳ ಮಾಡಿದ್ದಕ್ಕೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದೀರಿ ಅಂತ ಗರಂ ಆಗಿದ್ದಾರೆ.

‘ಮೋದಿಯವರ ಕಾಲದಲ್ಲಿ ಏನಾಯ್ತು?’

ಈ ವರ್ಷ ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ರೂಪಾಯಿಗಳನ್ನು ಕೊಡಬೇಕು. ಎಲ್ಲವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ, ಬೇಡ್ವಾ. ಗ್ಯಾರಂಟಿಗಾಗಿ ಈ ಬೆಲೆ ಏರಿಕೆ ಮಾಡಿಲ್ಲ. ಅಭಿವೃದ್ಧಿ ಕೆಲಸಕ್ಕಾಗಿ ದರ ಹೆಚ್ಚಳ ಮಾಡಲಾಗಿದೆ.

ನರೇಂದ್ರ ಮೋದಿ ಸರ್ಕಾರ ಬಂದಾಗ ಪೆಟ್ರೋಲ್, ಡೀಸೆಲ್ ಬೆಲೆ 72 ರೂಪಾಯಿ ಇತ್ತು. ಇವತ್ತು 102 ರೂಪಾಯಿ ಆಗೋಕೆ ಯಾರು ಕಾರಣ. ಒಂದು ಕಡೆ ಕ್ರೂಡ್ ಆಯಿಲ್ ಬೆಲೆ ಕಡಿಮೆಯಾಗಿದೆ. ಇನ್ನೊಂದು ಕಡೆ ಪೆಟ್ರೋಲ್ ಬೆಲೆ ಜಾಸ್ತಿ ಮಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಸಬ್ಸಿಡಿ ಕೊಡುತ್ತಿದ್ದರು. ಪೆಟ್ರೋಲ್ ಬೆಲೆ ಕೂಡ ಕಡಿಮೆ ಇತ್ತು. ಮೋದಿ ಕಾಲದಲ್ಲಿ ಎಲ್ಲವು ಜಾಸ್ತಿ ಆದವು.

 ಸಿದ್ದರಾಮಯ್ಯ, ಸಿಎಂ

ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತ ಸಿಎಂ ನಾವು ತೈಲ ಬೆಲೆ ಏರಿಸಿದ್ರೂ ಪಕ್ಕದ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮಲ್ಲೇ ಕಡಿಮೆ ಇದೆ ಅಂತ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅದೇನೆ ಇರಲಿ ನಮ್ಮ ಜೇಬಿನಿಂದಲೇ ಕಿತ್ತುಕೊಂಡು ವಾಪಸ್ ನಮಗೇ ಕೊಡುವ ಮೂಲಕ ಗ್ಯಾರಂಟಿಗಳನ್ನ ಕೊಡ್ತಿದ್ದೀವಿ ಅಂತ ಕಾಂಗ್ರೆಸ್​ ಹೇಳಿಕೊಂಡು ಜನರನ್ನ ಕಷ್ಟಕ್ಕೆ ತಳ್ಳುತ್ತಿದೆ ಅಂತ ವಾಹನ ಸವಾರರು ಆಕ್ರೋಶ ಹೊರಹಾಕ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರ ಬೆಲೆ ಏರಿಸಿದಾಗ ಯಾರೂ ಕೇಳಲಿಲ್ಲ.. ನಾವು ಹೆಚ್ಚಳ ಮಾಡಿದ್ರೆ ಪ್ರಶ್ನೆ ಮಾಡ್ತೀರಾ; ಸಿದ್ದರಾಮಯ್ಯ ಸಿಡಿಮಿಡಿ

https://newsfirstlive.com/wp-content/uploads/2024/04/CM_SIDDU_PM_MODI.jpg

Load More