/newsfirstlive-kannada/media/post_attachments/wp-content/uploads/2025/06/CM_SIDDARAMAIAH_DCM.jpg)
ಕಾಂಗ್ರೆಸ್ ಪಾಳಯದಲ್ಲಿ ಸೆಪ್ಟೆಂಬರ್ ಕ್ರಾಂತಿ. ಸಿಎಂ ಬದಲಾವಣೆ ಎಂಬ ಬಿರುಗಾಳಿ, ಕೆಪಿಸಿಸಿ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಲೇ ಇದೆ. ಈ ಭಾರೀ ಬೆಳವಣಿಗೆಗಳು ನಡುವೆ ಸಿಎಂ, ಡಿಸಿಎಂ, ಗೃಹ ಸಚಿವರು ರಹಸ್ಯ ಸಭೆ ನಡಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಕಾಲ್ತುಳಿತ ದುರಂತದಿಂದ ಸಿಎಂ ಇನ್ನೂ ಹೊರಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದು ಕ್ರಾಂತಿನೋ? ಸಂಕ್ರಾಂತಿನೋ? ಇಲ್ಲಾ ಬಿಟ್ಟು ಭ್ರಾಂತಿನೋ? ಆದ್ರೆ ಕಾಂಗ್ರೆಸ್​ನಲ್ಲಿ ಅಶಾಂತಿ ಅಂತು ಸೃಷ್ಟಿ ಆಗಿದ್ದು, ಭೀತಿ ಆವರಿಸಿದೆ. ಸಹಕಾರ ಸಚಿವ ರಾಜಣ್ಣ ನೀಡಿದ ಜಾತಕದ ಡೇಟು ಮ್ಯಾಚ್​​ ಆಗ್ತಿದ್ಯಾ ಅಂತ ಕಾಂಗ್ರೆಸ್​​ನಲ್ಲಿ ಪಂಚಾಂಗ ತಡಕಾಡಲಾಗ್ತಿದೆ. ಇದ್ರ ಮಧ್ಯೆ ಸಿಎಂ, ಡಿಸಿಎಂ ಜೊತೆ ಡಾ.ಜಿ. ಪರಮೇಶ್ವರ್ ರಹಸ್ಯ ಸಭೆ ನಡೆಸಿರೋದು ಕುತೂಹಲಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2025/03/Kn-Rajanna-Parameshwar-honey-trap.jpg)
ಕುತೂಹಲ ಮೂಡಿಸಿದ ಗೃಹಸಚಿವರ ಸೀಕ್ರೆಟ್ ಮೀಟಿಂಗ್!
ಮೊನ್ನೆ ರಾಜಣ್ಣ ಕ್ರಾಂತಿಯ ಡೈಲಾಗ್​ ಹೊಡೆದ ನಂತರ ಹಸ್ತದಲ್ಲಿ ಅಸ್ತವ್ಯಸ್ತ ಕಾಣಿಸ್ತಿದೆ. ಬದಲಾವಣೆ ಅಂದ್ರೇನು? ಸಿಎಂ ಚೇಂಜ್​​ ಆಗ್ತಾರ? ಡಿಕೆ ಶಿವಕುಮಾರ್​ ಕೆಪಿಸಿಸಿ ಪಟ್ಟ ಬದಲಾಗುತ್ತಾ? ಅಥವಾ ಸಚಿವ ಸ್ಥಾನಗಳಾ? ಕ್ಲಾರಿಟಿ ಅಂತು ಸಿಗ್ತಿಲ್ಲ. ಇದರ ಮಧ್ಯೆ ಸಿಎಂ ಹಾಗೂ ಡಿಸಿಎಂ ಜೊತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಹಸ್ಯ ಚರ್ಚೆ ನಡೆಸಿದ್ದಾರೆ. ಇದು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
- ಸಿಎಂ, ಡಿಸಿಎಂ ಜೊತೆ ರಹಸ್ಯ ಮಾತುಕತೆ ನಡೆಸಿರುವ ಪರಮೇಶ್ವರ್
- ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ತೆರಳಿ ಕ್ಲೋಸ್ ಡೋರ್ ಚರ್ಚೆ
- ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆ ಪರಮೇಶ್ವರ್ ಮಾತುಕತೆ
- ಮೊನ್ನೆ ಸಿಎಂ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದ ಪರಂ
- ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಸಮಾಲೋಚನೆ
- ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ರಹಸ್ಯ ಚರ್ಚೆ ನಡೆಸಿರುವ ಪರಂ
- ಡಿಕೆಶಿ ನಿವಾಸಕ್ಕೆ ತೆರಳಿ 2 ಗಂಟೆಗಳ ಕಾಲ ಚರ್ಚೆ ನಡೆಸಿರುವ ಪರಂ
- ಸಿಎಂ ದೆಹಲಿ ಭೇಟಿ ಬಳಿಕ ರಾಜಣ್ಣ ಸೆಪ್ಟೆಂಬರ್ ಕ್ರಾಂತಿಯ ಬಾಂಬ್
- ರಾಜಣ್ಣ ಹೇಳಿಕೆ ನಡುವೆಯೇ ಸಿಎಂ, ಡಿಸಿಎಂ ಜೊತೆ ರಹಸ್ಯ ಚರ್ಚೆ
- ಈ ಮೂಲಕ ರಾಜಕೀಯ ವಲಯದಲ್ಲಿ ಪರಮೇಶ್ವರ್ ಅಚ್ಚರಿ ನಡೆ
ದಸರಾ ಮಹೋತ್ಸವದ ಬಗ್ಗೆ ಎಚ್ಚರಿಕೆ ವಹಿಸಿದ ಸಿಎಂ
ಈ ಬಾರಿ ದಸರಾ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಸರಾ ಮಹೋತ್ಸವ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ದಸರಾ ಮುಂಚಿತವಾಗಿಯೇ ಬಂದಿದೆ. ಸೆಪ್ಟೆಂಬರ್​​ 22 ರಿಂದ ಅಕ್ಟೋಬರ್​ 2 ರವರೆಗೆ ದಸರಾ ನಡೆಯಲಿದೆ. ನವರಾತ್ರಿಯನ್ನ ಒಂಬತ್ತು ದಿನಗಳ ಬದಲು ಈ ಬಾರಿ 11 ದಿನಗಳ ಕಾಲ ಆಚರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನೂ ಕಾಲ್ತುಳಿತ ದುರಂತದಿಂದ ಹೊರಬಾರದ ಸಿಎಂ, ದಸರಾ ವೇಳೆ ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.
ಇದನ್ನೂ ಓದಿ: T20ಯಲ್ಲಿ ಸಿಡಿಲಬ್ಬರದ ಶತಕ​, ಹಲವು ದಾಖಲೆ ಬರೆದ ಸ್ಮೃತಿ ಮಂದಾನ.. ಭಾರತಕ್ಕೆ ಭರ್ಜರಿ ಗೆಲುವು!
/newsfirstlive-kannada/media/post_attachments/wp-content/uploads/2023/09/Parameshwar-Siddaramaiah-Dkshivakumar.jpg)
‘ಕಾಲ್ತುಳಿತ’ದ ಬಗ್ಗೆ ಸಿಎಂ ಅಲರ್ಟ್!
- ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ದುರಂತದ ಬೆನ್ನಲ್ಲೆ ಅಲರ್ಟ್
- ದಸರಾ ಮಹೋತ್ಸವದ ಬಗ್ಗೆ ಎಚ್ಚರಿಕೆ ವಹಿಸಿದ ಸಿಎಂ ಸಿದ್ದರಾಮಯ್ಯ
- ತವರು ಜಿಲ್ಲೆಯ ನಾಡಹಬ್ಬ ದಸರಾದಲ್ಲಿ ಕಾಲ್ತುಳಿತ ಆಗದಂತೆ ಸೂಚನೆ
- ಆರ್‌ಸಿಬಿ ಕಾಲ್ತುಳಿತ ದುರಂತ, ಸರ್ಕಾರ & ಸಿಎಂಗೆ ತೀವ್ರ ಮುಜುಗರ
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಸರ್ಕಾರಕ್ಕೆ ಡ್ಯಾಮೇಜ್
- ದಸರಾದಲ್ಲಿ ದುರಂತ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸೂಚನೆ
ದಸರಾ ಈ ಹಿಂದೆಯೂ 11 ದಿನಗಳ ಕಾಲ ನಡೆದಿರುವ ನಿದರ್ಶನಗಳು ಇವೆ. 8 ಸಾರಿ 11 ದಿನಗಳ ಕಾಲ ದಸರಾ ನಡೆದಿದೆ. ಹೀಗಾಗಿ ಈ ಬಾರಿ ದಸಾರವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೇವೆ. ದಸರಾಗೆ 10 ಲಕ್ಷ ಜನರು ಬರುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಇದೆಲ್ಲದರ ಮಧ್ಯೆ ಸಿಎಂ ಡೆಲ್ಲಿ ಭೇಟಿ ವೇಳೆ ಹೈಕಮಾಂಡ್ ನಾಯಕರು ಗರಂ ಆಗಿದ್ರು ಎಂಬ ಅಂಶ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕರ ವಿರುದ್ಧ ಸಾಕಷ್ಟು ಗಂಭೀರ ಪ್ರಕರಣ ಇದ್ರೂ ಕ್ರಮಕೈಗೊಂಡಿಲ್ಲ ಏಕೆ ಅಂತ ಕಾಂಗ್ರೆಸ್ ನಾಯಕರು ಸಿಎಂಗೆ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ. ಹೀಗಾಗಿ ಪೊಲೀಸರ ಸಭೆ ನಡೆಸಿ ಪೋಲಿಸರಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೆಪ್ಟೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಚರ್ಚೆ ಮಧ್ಯೆ ಕೈ ನಾಯಕರು ಭಾರೀ ಚರ್ಚೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತೋ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us