/newsfirstlive-kannada/media/post_attachments/wp-content/uploads/2025/01/BHUVANESHWARI-STATUE.jpg)
ವಿಧಾನಸೌಧದ ಆವರಣದಲ್ಲಿ ಕನ್ನಡಿಗರ ತಾಯಿ ಭುವನೇಶ್ವರಿಯ ಕಂಚಿನ ಪುತ್ಥಳಿ ಅನಾವರಣಗೊಂದಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಸಚಿವರು ಲೋಕಾರ್ಪಣೆ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕಹಳೆ ಮೊಳಗಿಸುವ ಮೂಲಕ ಪ್ರತಿಮೆ ಲೋಕಾರ್ಪಣೆ ಮಾಡಿದ್ರು. ಹಾಗಾದ್ರೆ. ಈ ಪುತ್ಥಳಿಯ ವಿಶೇಷತೆ ನೋಡೊದಾದ್ರೆ.
/newsfirstlive-kannada/media/post_attachments/wp-content/uploads/2025/01/BHUVANESHWARI-STATUE-1.jpg)
ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ಪ್ರತಿಮೆ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಂಚಿನ ಪುತ್ಥಳಿ ನೆಲಮಟ್ಟದಿಂದ 43.6 ಅಡಿ ಎತ್ತರ ಇದೆ. ಪ್ರತಿಮೆಯ ಲೋಹದ ಒಟ್ಟು ತೂಕ 31.50 ಟನ್.. ಇದರಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ 20 ಟನ್, ಕರ್ನಾಟಕ ನಕ್ಷೆ 11.50 ಟನ್ ತೂಕ ಇದೆ. ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ 4500 ಚ.ಮೀ.. ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಿಣ ಪಥದ ನಿರ್ಮಾಣ ಮಾಡಲಾಗಿದೆ. ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿಯ ಅಂದಾಜು ವೆಚ್ಚ 21.24 ಕೋಟಿ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ.. ಕಾಣದ ಕೈಗಳ ಕುತಂತ್ರ ಎಂದಿದ್ದೇಕೆ ಪವಿತ್ರಾಗೌಡ.. ಪೋಸ್ಟ್ ಹಿಂದಿನ ಕಾರಣವೇನು?
ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡವನ್ನು ಮಾತ್ರ ಬಳಸಬೇಕು, ಕನ್ನಡ ಓದುವುದನ್ನು, ಬರೆಯುವುದನ್ನು ಹೆಚ್ಚೆಚ್ಚು ಕಲಿಯಬೇಕು, ಕಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
/newsfirstlive-kannada/media/post_attachments/wp-content/uploads/2025/01/BHUVANESHWARI-STATUE-2.jpg)
ಕನ್ನಡ ಪರ ಹೋರಾಟಗಾರರ ಮೇಲಿನ ಕೇಸ್​ ವಾಪಸ್​
ಇನ್ನು ಇದೇ ವೇಳೆ ಕನ್ನಡ ಪರ ಹೋರಾಟಗಾರರಿಗೆ ಸಿಎಂ ಗುಡ್​ನ್ಯೂಸ್​ ನೀಡಿದ್ದಾರೆ. ದಾಖಲಾಗಿರುವ ಎಲ್ಲ ಕೇಸ್​ಗಳನ್ನು ಕೈಬಿಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಗೋವಾದಲ್ಲಿರುವ ಕನ್ನಡಿಗರಿಗಾಗಿ ಕರ್ನಾಟಕ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ:ರಾಜ್ಯಾದ್ಯಂತ 2 ದಿನಗಳ ಕಾಲ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?
ಲೇಟಾದ್ರೂ ರಾಜ್ಯ ಸರ್ಕಾರ ಲೇಟೆಸ್ಟ್​ ಆಗಿ ಕನ್ನಡ ಸುವರ್ಣ ಮಹೋತ್ಸವವನ್ನು ಸರ್ಕಾರ ಅದ್ದೂರಿಯಾಗಿ ಆಚರಣೆ ಮಾಡ್ತಿದ್ದು, ತಾಯಿ ಭುವನೇಶ್ವರಿ ತಾಯಿಯ ಪುತ್ಥಳಿ ನಿಜಕ್ಕೂ ಅದ್ಧುತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us