ಪಕ್ಕಾ CM ಸಿದ್ದರಾಮಯ್ಯ ಅಭಿಮಾನಿ.. ಸುತ್ತ 10 ಹಳ್ಳಿಗೆ ಕಡಿಮೆ ದರದಲ್ಲಿ ಹಿಟ್ಟು ಬೀಸಿಕೊಡುವ ನಾಗಪ್ಪ

author-image
Bheemappa
Updated On
ಪಕ್ಕಾ CM ಸಿದ್ದರಾಮಯ್ಯ ಅಭಿಮಾನಿ.. ಸುತ್ತ 10 ಹಳ್ಳಿಗೆ ಕಡಿಮೆ ದರದಲ್ಲಿ ಹಿಟ್ಟು ಬೀಸಿಕೊಡುವ ನಾಗಪ್ಪ
Advertisment
  • ಕುಂತರೂ, ನಿಂತರೂ ಸಿದ್ದರಾಮಯ್ಯ ಬಗೆಗಿನ ಜಪಿಸುವ ಅಭಿಮಾನಿ
  • ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಂದ ಸ್ಪೂರ್ತಿ
  • ‘ಸೇವೆ ಮಾಡೋಣ ಎಂದು ಅದನ್ನ ಈ ಗಿರಣಿಯಿಂದ ಮಾಡುತ್ತಿದ್ದೇನೆ’

ಗ್ಯಾರಂಟಿ ಯೋಜನೆಗಳಿಂದ ಹಣ ಪಡೆದವರು ಸಿದ್ದರಾಮಯ್ಯರನ್ನು ಹಾಗೂ ಕಾಂಗ್ರೆಸ್ ಸರ್ಕಾರವನ್ನ ಹೊಗಳೊದು ನೋಡಿದ್ದೆವೆ. ಆದರೆ ಇಲ್ಲೊಬ್ಬ ಗ್ಯಾರಂಟಿಗಳಿಂದ ತನ್ನ ವೃತ್ತಿಗೆ ಒಳಿತಾಗಿದೆ ಎಂದು ಅಭಿಮಾನಿಯಾಗಿದ್ದಾನೆ. ಅದು ಸಿಎಂ ಸಿದ್ದರಾಮಯ್ಯ ಎಂದರೆ ಇಷ್ಟಪಡುವ ಈತ ಕಡಿಮೆ ದರದಲ್ಲಿ ಹಿಟ್ಟು ರುಬ್ಬಿ ಕೊಡುವ ಮೂಲಕ ಬಡವರಿಗೆ ಆಸರೆಯಾಗಿದ್ದಾನೆ.

ಬೆಳಗ್ಗೆಯಿಂದ ಹಿಡಿದು ರಾತ್ರಿಯತನಕ ಹಿಟ್ಟು ಬೀಸುವ ಗಿರಣಿಯನಲ್ಲಿ ಕೆಲಸ ಮಾಡುವ ಸಿಎಂ ಸಿದ್ದರಾಮಯ್ಯರ ಅವರ ಪಕ್ಕಾ ಅಭಿಮಾನಿ. ಕುಂತರೂ-ನಿಂತರೂ ಸಿದ್ದರಾಮಯ್ಯ ಬಗೆಗಿನ ಸುದ್ದಿ ಜಪಿಸುತ್ತಾರಂತೆ.

publive-image

ಸಿಎಂ ಸಿದ್ದರಾಮಯ್ಯರ ಅವರ ಅಭಿಮಾನಿ ಹೆಸರು ನಾಗಪ್ಪ ಮಾಳಪ್ಪನವರ. ಹಾವೇರಿ ತಾಲೂಕಿನ ಯಲಗಚ್ಚು ಗ್ರಾಮದವರು. ತಮ್ಮ ಗಿರಣಿಯಲ್ಲೇ ಹಿಟ್ಟು ಬಿಸುವ ಕಾಯಕವನ್ನು ಸುಮಾರು 15-20 ವರ್ಷಗಳಿಂದ ಮಾಡುತ್ತಿದ್ದಾರೆ. ಒಂದು ಪಡಿ ಕಾಳು-ಕಡಿಗಳಿಗೆ ಕೇವಲ 5 ರೂಪಾಯಿ ಪಡೆಯುತ್ತಾರೆ. ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳಿಂದ ಸ್ಪೂರ್ತಿ ಪಡೆದ ನಾಗಪ್ಪಗೆ, ಸಿಎಂ ಸಿದ್ದರಾಮಯ್ಯ ಎಂದರೆ ಪಂಚ ಪ್ರಾಣವಂತೆ. ದಿನವೀಡಿ ಅವರ ಬಗೆಗಿನ ಸುದ್ದಿಗಳನ್ನ ಹಾಗೂ ಪೋಟೊಗಳನ್ನ ನೋಡುತ್ತಾ ಕೆಲಸ ಮಾಡುತ್ತಾರಂತೆ. ಕೇಳಿದ್ರೆ ಸಿದ್ದರಾಮಯ್ಯ ಕರ್ನಾಟಕದ ಜನರ ಸೇವೆ ಮಾಡುತ್ತಿದ್ದಾರೆ. ನಾನು ಇಲ್ಲಿಯ ಜನರಿಗೆ ಕೈಲಾದಷ್ಟು ಸೇವೆ ಮಾಡುತ್ತೇನೆ ಎನ್ನುತ್ತಾರೆ.

ನಾವು ಸಿದ್ದರಾಮಯ್ಯ ಅವರ ಅಭಿಮಾನಿ ಆಗಿದ್ದರಿಂದ ಬರಿ 5 ರೂಪಾಯಿಗೆ ಹಿಟ್ಟು ಬೀಸಿ ಕೊಡುತ್ತೇನೆ. ಬೇರೆ ಕಡೆ 10, 15 ರೂಪಾಯಿ ಇದೆ. ನಾವು ಒಂದು ಸೇವೆ ಮಾಡೋಣ ಎಂದು ಈ ಗಿರಣಿ ಮೂಲಕ ಮಾಡುತ್ತಿದ್ದೇನೆ. ದೇವರು ದಾರಿ ತೋರಿಸಿದಂಗ ಕೆಲಸ ಮಾಡುತ್ತೇನೆ. ನಮಗೇನೂ ಇದರಲ್ಲಿ ಉಳಿಯಲ್ಲ. ಆದರೂ ನಮಗೆ ಅಭಿಮಾನ. ಸುತ್ತ 10 ಹಳ್ಳಿಯವರು ಬಂದು ಬೀಸಿಕೊಂಡು ಹೋಗುತ್ತಾರೆ. ಕರೆಂಟ್ ಬಿಲ್ ಕಟ್ಟೋಕೆ ಆಗುತ್ತಿಲ್ಲ. ಆದರೂ ಇರಲಿ ಜನ ಸೇವೆ ಮಾಡಬೇಕು ಎಂದು ಹೀಗೆ ಮಾಡುತ್ತಿದ್ದೇನೆ.

ನಾಗಪ್ಪ, ಸಿಎಂ ಸಿದ್ದರಾಮಯ್ಯ ಅಭಿಮಾನಿ

ನಾಗಪ್ಪ ಕಷ್ಟದಲ್ಲೆ ಇದ್ದರೂ ಬಡವರಿಗೆ, ಕೂಲಿಕಾರರಿಗೆ, ಕುರಿಗಾಯಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಬೇರೆಯ ಹಿಟ್ಟಿನ ಗಿರಣಿಯವರು ದಿನಕ್ಕೆ ₹1,500-2,000 ಸಾವಿರ ದುಡಿಯುತ್ತಾರೆ. ಆದರೆ ಇವರು ಬೀಸಿ ಕೊಡುವ ಹಿಟ್ಟಿನಿಂದ ಕೇವಲ 5,00-6,00 ರೂಪಾಯಿ ದುಡಿಯುತ್ತಾರೆ. ಇದರಿಂದ ಗಿರಣಿಗೆ ಬರುವವರ ಜೇಬಿಗೆ ನೂರಾರು ರೂಪಾಯಿ ಉಳಿತಾಯ ಆಗುತ್ತಿದೆ. ಆದ್ರೆ ಇವರು ಮಾತ್ರ ನನಗೆ ಲಾಭ ಆಗುತ್ತದೋ ಬಿಡುತ್ತದೋ. ನನಗೆ ಈ ರೀತಿ ಕೆಲಸ ಮಾಡುವುದಕ್ಕೆ ಖುಷಿ ಇದೆ ಅಂತ ಹೇಳುತ್ತಾರೆ. ಈತನ ಸಾಮಾಜಿಕ ಕಾರ್ಯದ ಬಗ್ಗೆ ಸುತ್ತಮುತ್ತಲಿನ ಹಳ್ಳಿಯ ಜನರಿಗೂ ತಿಳಿದಿದ್ದು 20-25 ಕಿ.ಮೀ ದೂರದಿಂದಲೂ ಇವರ ಬಳಿಗೆ ಬಂದು ಹಿಟ್ಟು ಹಾಕಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ; 24.89 ಕೋಟಿ ಹಣ ಖರ್ಚು.. ಯಾವುದಕ್ಕೆ ಎಷ್ಟು ವೆಚ್ಚ?, ಇಲ್ಲಿದೆ ಮಾಹಿತಿ

publive-image

ನಾಗಪ್ಪ ಪಕ್ಕಾ ಸಿದ್ದರಾಮಯ್ಯರ ಅಭಿಮಾನಿ. ಇವರು 5 ರೂಪಾಯಿಗೆ ಹಿಟ್ಟು ಬೀಸಿ ಕೊಡುವುದಕ್ಕೆ ನಮಗೆ ಬಹಳ ಖುಷಿ ಇದೆ. ಬೇರೆ ಊರಿನಿಂದ ಬಂದು ಜೋಳ ಬೀಸಿಕೊಂಡು ಹೋಗುತ್ತಿದ್ದೇವೆ.

ಕೊಟ್ರೇಶಪ್ಪ, ಗ್ರಾಹಕರು

ಇಲ್ಲಿ ಗಮನಿಸಬೇಖಾದ ಸಂಗತಿ ಏನಂದ್ರೆ, ಕೆಲ ಗ್ರಾಹಕರು 5 ರೂಪಾಯಿ ಕೊಡುತ್ತಾರೆ. ಮತ್ತೂ ಕೆಲವರು ಅದೂ ಇಲ್ಲವೆನ್ನುತ್ತಾರೆ. ಆದ್ರೂ ನಾಗಪ್ಪ ಹಿಟ್ಟು ಬೀಸಿ ಕೊಡುತ್ತಾರೆ. ಜೋಳ, ಗೋಧಿ, ಅಕ್ಕಿ, ರಾಗಿ ಬೀಸಿ ಜೀವನ ಸಾಗಿಸುತ್ತಿರುವ ನಾಗಪ್ಪರ ಕಾರ್ಯ ಶ್ಲಾಘನೀಯವಾಗಿದೆ. ಅಭಿಮಾನ ಎಂದರೆ ಹೀಗಿರಬೇಕೆಂದು ನಾಗಪ್ಪ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment