Advertisment

RCB ತಂಡಕ್ಕೆ ಇಂದು ಸಿದ್ದರಾಮಯ್ಯ ಸನ್ಮಾನ; ಮಧ್ಯಾಹ್ನ 12 ಗಂಟೆ ನಂತರ ಬೆಂಗಳೂರು ಶಾಲೆಗಳಿಗೆ ರಜೆ

author-image
admin
Updated On
RCB ತಂಡಕ್ಕೆ ಇಂದು ಸಿದ್ದರಾಮಯ್ಯ ಸನ್ಮಾನ; ಮಧ್ಯಾಹ್ನ 12 ಗಂಟೆ ನಂತರ ಬೆಂಗಳೂರು ಶಾಲೆಗಳಿಗೆ ರಜೆ
Advertisment
  • ಸಮಸ್ತ ಕನ್ನಡಿಗರ ಪರವಾಗಿ ಸಿಎಂ ಸಿದ್ದರಾಮಯ್ಯ ಸನ್ಮಾನ
  • ಬೆಂಗಳೂರಿನಲ್ಲಿ ಸಂಜೆ ವಾಹನ ಸಂಚಾರ ದಟ್ಟವಾಗುವ ಸಾಧ್ಯತೆ
  • ಶಾಲಾ ಕಾಲೇಜುಗಳಿಗೆ 12 ಗಂಟೆ ನಂತರ ರಜೆ ನೀಡುವಂತೆ ಸೂಚನೆ

IPL ಕಪ್ ಗೆದ್ದ ಹಿನ್ನೆಲೆಯಲ್ಲಿ RCB ವಿಜಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಬೆಂಗಳೂರಿಗೆ RCB ತಂಡ ಆಗಮಿಸುತ್ತಾ ಇದ್ದು, ಭರ್ಜರಿ ಸ್ವಾಗತ ಹಾಗೂ ವಿಜಯೋತ್ಸವಕ್ಕೆ ತಯಾರಿಗಳು ಜೋರಾಗಿದೆ.

Advertisment

ಐಪಿಎಲ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿ ತವರೂರಿಗೆ ಆಗಮಿಸುತ್ತಿರುವ ಕರ್ನಾಟಕದ ಹೆಮ್ಮೆಯ ಆರ್‌ಸಿಬಿ ತಂಡವನ್ನು ಸಮಸ್ತ ಕನ್ನಡಿಗರ ಪರವಾಗಿ ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಿ, ಸನ್ಮಾನಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.


">June 4, 2025

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಕೋಟ್ಯಂತರ ಅಭಿಮಾನಿಗಳ 18 ವರ್ಷಗಳ ಕಾತುರ, ಕಾಯುವಿಕೆ ಕೊನೆಗೊಂಡಿದೆ. ಇಡೀ ರಾಜ್ಯದಲ್ಲೇ ಹಬ್ಬದ ವಾತಾವರಣ ಸೃಷ್ಟಿಸಿದ ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ ಎಂದು ಪೋಸ್ಟ್ ಮಾಡಿದ್ದಾರೆ.

Advertisment

ವಿಜಯೋತ್ಸವಕ್ಕೆ ಬಿಗಿ ಬಂದೋಬಸ್ತ್‌! 
ಆರ್‌ಸಿಬಿ ತಂಡಕ್ಕೆ ಸರ್ಕಾರದಿಂದ ಸನ್ಮಾನ ಮತ್ತು ಅಭಿನಂದನೆ ಸಲ್ಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: RCB ಟ್ರೋಫಿ ಗೆದ್ದ ಖುಷಿ.. ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ ಟಾಪ್- 10 ಫೋಟೋಸ್!​ 

ಆರ್‌ಸಿಬಿ ತಂಡದ ಮೆರವಣಿಗೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವಿಧಾನಸೌಧದ ಬಳಿ ಸನ್ಮಾನ ಕಾರ್ಯಕ್ರಮದ ನಂತ್ರ ಅಲ್ಲಿ ತೀರ್ಮಾನ ಮಾಡಲಾಗುತ್ತದೆ. ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗಳು ನಡೆಯುತ್ತದೆ.

Advertisment

publive-image

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರದ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ರಸ್ತೆಗಳಲ್ಲಿ ಭಾರೀ ಸಂಖ್ಯೆಯ ಜನರು ಸೇರುವ ನಿರೀಕ್ಷೆಯಿದೆ. ಇಂದು ಸಂಜೆ ಬೆಂಗಳೂರು ಕೇಂದ್ರೀಯ ಭಾಗದಲ್ಲಿ ವಾಹನ ಸಂಚಾರ ವ್ಯತ್ಯಾಸ ಆಗುತ್ತದೆ.

ಲಕ್ಷಾಂತರ ಆರ್‌ಸಿಬಿ ಅಭಿಮಾನಿಗಳು ಬೆಂಗಳೂರು ನಗರದ ಹೃದಯ ಭಾಗದಲ್ಲಿ ಸೇರುವ ನಿರೀಕ್ಷೆಯಿದ್ದು, ಬೆಂಗಳೂರು ಕೇಂದ್ರೀಯ ವಿಭಾಗದ ಶಾಲಾ ಕಾಲೇಜುಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ.

publive-image

ಇಂದು ಸಂಜೆ ವಾಹನ ಸಂಚಾರ ದಟ್ಟವಾಗುವ ಸಾಧ್ಯತೆ ಇದ್ದು, ಈ ಭಾಗದ ಶಾಲಾ ಕಾಲೇಜುಗಳಿಗೆ ಮಧ್ಯಾಹ್ನ 12 ಗಂಟೆ ನಂತರ ರಜೆ ನೀಡುವಂತೆ ಸೂಚನೆ ನೀಡಲಾಗಿದೆ. ವಾಹನ ಸಂಚಾರ ಹೆಚ್ಚಾಗುವ ಹಿನ್ನೆಲೆಯ ಸಾರಿಗೆ ಸಂಚಾರವನ್ನು ಬಳಕೆ ಮಾಡಬೇಕು. ವಿಜಯೋತ್ಸವದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ತಿಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment