ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ.. ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡ ಸಿಎಂ..!

author-image
Veena Gangani
Updated On
ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ.. ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡ ಸಿಎಂ..!
Advertisment
  • ಸಂಬಂಧವೇ ಇಲ್ಲದ ಪೋಲಿಸ್ ಅಧಿಕಾರಿ ವಿರುದ್ಧ ಸಿಎಂ ಗರಂ
  • ಧಾರವಾಡ ಎಎಸ್ಪಿ ನಾರಾಯಣ ಭರಮನಿ ವಿರುದ್ಧ ಸಿಎಂ ಸಿಟ್ಟು
  • ಬಂದೋಬಸ್ತ್​​ಗೆ ನಿಯೋಜನೆಗೊಂಡ ಅಧಿಕಾರಿ ವಿರುದ್ಧ ರೇಗಾಟ

ಬೆಳಗಾವಿ: ಸಂಬಂಧವೇ ಇಲ್ಲದ ಪೋಲಿಸ್ ಅಧಿಕಾರಿ ವಿರುದ್ಧ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯನವರು ಗರಂ ಆಗಿರುವ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ. ಸಮವಸ್ತ್ರದಲ್ಲಿದ್ದ ಧಾರವಾಡ ಎಎಸ್​ಪಿ ನಾರಾಯಣ ಭರಮನಿ ಅವರ ಮೇಲೆ ಸಿಎಂ ಕೈ ಎತ್ತಿದ್ದಾರೆ. ಸದ್ಯ ಸಿಎಂ ಕೋಪಿಸಿಕೊಂಡು ಕೈ ಎತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ‘ಭಾರತದಲ್ಲೇ ಇರಲು ಬಿಡಿ ಪ್ಲೀಸ್​’.. ಪಾಕಿಸ್ತಾನಿ ಸೀಮಾ ಹೈದರ್​ಗೆ ಗಡಿಪಾರು ಭೀತಿ!

publive-image

ನಿರಂತರ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ ಕೂಡ ಬಂದಿದ್ದರು. ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕೂಡ ಪ್ರತಿಭಟನೆ ಮಾಡುತ್ತಿದ್ದರು.

publive-image

ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮಾಡುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಂಟ್ರಿ ನೀಡಿತ್ತು. ಈ ವೇಳೆ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಭಾಷಣದ ಮಧ್ಯೆ, ಧಾರವಾಡದ ಎಎಸ್​ಪಿ ನಾರಾಯಣ ಭರಮನಿ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ವೇದಿಕೆಗೆ ಬಂದ ಅವರು, ಬಿಜೆಪಿ ಕಾರ್ಯಕರ್ತರು ವೇದಿಕೆಗೆ ನುಗ್ಗುತ್ತಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡುತ್ತಾರೆ. ಅದಕ್ಕೆ ಕೋಪಿಸಿಕೊಂಡ ಸಿದ್ದರಾಮಯ್ಯ, ವೇದಿಕೆಗೆ ಬರುವ ತನಕ ನೀವು ಏನು ಮಾಡುತ್ತಿದ್ದೀರಿ? ಅಂತಾ ಅಧಿಕಾರಿ ಮೇಲೆ ಕೈಎತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment