newsfirstkannada.com

ಪಾಕ್​ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಮಟ್ಟಹಾಕುತ್ತೇವೆ- CM ಸಿದ್ದರಾಮಯ್ಯ

Share :

Published February 28, 2024 at 4:36pm

    ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ

    ಪಾಕ್​​ ಪರ ಘೋಷಣೆ ಎನ್ನಲಾದ ವಿವಾದಕ್ಕೆ ರಾಜಕೀಯ ತಿರುವು

    ಯಾರನ್ನು ಬಿಡೋ ಮಾತೇ ಎಲ್ಲ ಎಂದ ಸಿಎಂ ಸಿದ್ದರಾಮಯ್ಯ..!

ಬೆಂಗಳೂರು: ಕಾಂಗ್ರೆಸ್​​ ಸಂಭ್ರಮಾಚರಣೆ ವೇಳೆ ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎನ್ನಲಾದ ವಿವಾದ ತಾರಕಕ್ಕೇರಿದೆ. ಈ ಬಗ್ಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿವೆ. ಪಾಕ್​​ ಪರ ಘೋಷಣೆ ವಿವಾದದ ಕುರಿತು ಸಿಎಂ ಸಿದ್ದರಾಮಯ್ಯ ಮೌನಮುರಿದಿದ್ದಾರೆ.

ಪಾಕ್​ ಪರ ಘೋಷಣೆ ಕೂಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರೇ ಆಗಿರಲಿ ದೇಶ ದ್ರೋಹಿಗಳನ್ನು ಮಟ್ಟಹಾಕುತ್ತೇವೆ. ಈ ಬಗ್ಗೆ ಮೊದಲು ತನಿಖೆಯಾಗಬೇಕಿದೆ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಪಾಕ್​ ಪರ ಘೋಷಣೆಗೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋಗಾಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ತಪ್ಪು ಮಾಡಿದ್ದು ಸಾಬೀತಾದ್ರೆ, ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

FSL ವರದಿಗಾಗಿ ಕಾಯುತ್ತಿದ್ದೇವೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕ್​ ಪರ ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಮಟ್ಟಹಾಕುತ್ತೇವೆ- CM ಸಿದ್ದರಾಮಯ್ಯ

https://newsfirstlive.com/wp-content/uploads/2024/02/CM-Siddaramaiah-1.jpg

Load More