/newsfirstlive-kannada/media/post_attachments/wp-content/uploads/2025/03/SIDDARAMAIAH_BUDGET_9.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕದ ಮುಂಗಡ ಪತ್ರವನ್ನು ಮಂಡಿಸುತ್ತಿದ್ದು ಇದು ಅವರ 16ನೇ ಬಜೆಟ್ ಆಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮೊತ್ತ ಹೊಂದಿರುವ ಬಜೆಟ್ ಒಟ್ಟು ₹4,09,549 ಲಕ್ಷ ಕೋಟಿ ರೂಪಾಯಿ ಆಗಿದೆ. ಎಲ್ಲ ಕ್ಷೇತ್ರಗಳಿಗೂ ಅನುದಾನ ಘೋಷಣೆ ಮಾಡಿರುವ ಸಿಎಂ, ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈ ಸಲ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವಂತೆ ಹೋರಾಟ ಮಾಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಗೌರವಧನದಲ್ಲಿ 1 ಸಾವಿರ ಏರಿಕೆ ಮಾಡಿದ್ದಾರೆ. ಅದರಂತೆ ಮಕ್ಕಳಿಗೆ ನೀಡುವ ಹಾಲು, ಮೊಟ್ಟೆ ಹಾಗೂ ಬಾಳೆಹಣ್ಣುಗಳ ವಿತರಣೆಯನ್ನು ವಿಸ್ತರಣೆ ಮಾಡಿದ್ದಾರೆ.
ಇದನ್ನೂ ಓದಿ:Budget; ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಸಿದ್ದು ಮೇಲೆ ಬೆಟ್ಟದಷ್ಟು ನಿರೀಕ್ಷೆ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನ 2,000 ರೂಪಾಯಿ ಹೆಚ್ಚಳ ಮಾಡಿರುವುದು ಶಿಕ್ಷಕರಿಗೆ ಖುಷಿ ತಂದಿದೆ. ಸಿಇಟಿ, ಎನ್ಇಇಟಿ ಹಾಗೂ ಜೆಇಇ ತರಬೇತಿಗಾಗಿ 25,000 ವಿದ್ಯಾರ್ಥಿಗಳಿಗೆ 5 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುದಾನಗಳನ್ನು ಗಮನಿಸಿದರೆ..
- 2,500 ಕೋಟಿ ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭ
- ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸಲು 6 ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ
- 53 ಲಕ್ಷ ಮಕ್ಕಳಿಗೆ 1,500 ಕೋಟಿ ವೆಚ್ಚದಲ್ಲಿ ಮೊಟ್ಟೆ, ಬಾಳೆಹಣ್ಣು ವಿತರಣೆ
- ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಅತಿಥಿ ಶಿಕ್ಷಕರ ಗೌರವಧನ 2,000 ರೂ. ಏರಿಕೆ
- ಬಿಸಿಯೂಟ ತಯಾರಿಕೆ ಸಿಬ್ಬಂದಿ ಮಾಸಿಕ ಗೌರವಧನ 1,000 ರೂ. ಏರಿಕೆ
- ಗಣಿತ ಗಣಕ ಯೋಜನೆ ಅಡಿ 3 ರಿಂದ 5ನೇ ತಗರತಿ ಮಕ್ಕಳಿಗೆ ಫೋನ್ ಮೂಲಕ ಬೋಧನೆ
- AI ಆಧಾರಿತ ಕಲಿಕಾ ದೀಪ ಕಾರ್ಯಕ್ರಮ 2,000 ಶಾಲೆಗಳಿಗೆ ವಿಸ್ತರಣೆ
- 25,000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿಗಾಗಿ 5 ಕೋಟಿ ರೂ.
- ಕಲ್ಯಾಣ ಕರ್ನಾಟಕ ಭಾಗದ 5,267 ಶಿಕ್ಷಕರ ಹುದ್ದೆ ಭರ್ತಿ- ಸಿಎಂ ಸಿದ್ದರಾಮಯ್ಯ
- ಚಿಕ್ಕಪಳ್ಳಾಫುರದ ಚಿಂತಾಮಣಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 150 ಕೋಟಿ ವೆಚ್ಚದಲ್ಲಿ ನಿರ್ಮಾಣ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ