ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ

author-image
Bheemappa
Updated On
‘ಚಾಮುಂಡಿ ಬೆಟ್ಟ ನಮ್ಮ ಆಸ್ತಿ’: ಸಿದ್ದರಾಮಯ್ಯ ನೇತೃತ್ವದ ಸಭೆ ವಿಚಾರದಲ್ಲಿ ಪ್ರಮೋದಾದೇವಿ ದೊಡ್ಡ ನಿರ್ಧಾರ, ಆಕ್ರೋಶ
Advertisment
  • ಚಾಮುಂಡಿ ಬೆಟ್ಟಕ್ಕಾಗಿ ರಾಜ್ಯ ಸರ್ಕಾರ, ರಾಜಮನೆತ ಜಟಾಪಟಿ
  • ಲಲಿತಮಹಲ್ ಹೆಲಿಪ್ಯಾಡ್ ಜಾಗ ಬಳಸುತ್ತಿದ್ದ ರಾಜ್ಯ ಸರ್ಕಾರ
  • ರಾಜವಂಶಸ್ಥರು-ಸಿದ್ದರಾಮಯ್ಯ ಮಧ್ಯೆ ಫೈಟ್ ಇದೇ ಮೊದಲಲ್ಲ

ಮೈಸೂರು: ನಾಡದೇವಿ ಚಾಮುಂಡಿ ಬೆಟ್ಟದ ಮೇಲೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಕಣ್ಣು ಬಿದ್ದಿದೆಯಾ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಈ ಸಂಬಂಧ ನ್ಯೂಸ್​ ಫಸ್ಟ್​ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ. ​

ಇದನ್ನೂ ಓದಿ: ಎರಡು ಬೈಕ್​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ.. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

ಚಾಮುಂಡಿ ಬೆಟ್ಟಕ್ಕೂ ರಾಜಮನೆತನದ ಅಧಿಕಾರ ಮೊಟಕುಗೊಳಿಸಲಾಗಿದೆ. ತಾವೇ ನಿರ್ಮಾಣ ಮಾಡಿದ ದೇವಾಲಯದಲ್ಲಿ ರಾಜಮನೆತನಕ್ಕೆ ಅಧಿಕಾರ ಇಲ್ಲ ಎಂದು ಹೇಳಲಾಗ್ತಿದೆ. ಪ್ರಾಧಿಕಾರ ಮಾಡಿಕೊಂಡು ಅಧ್ಯಕ್ಷರಾಗಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಸದ್ಯ ಈ ಸಂಬಂಧ ಸಿದ್ದರಾಮಯ್ಯ ಸರ್ಕಾರದ ಕಾಯ್ದೆ ಪ್ರಶ್ನಿಸಿ ರಾಜಮನೆತನದ ಪ್ರಮೋದ ದೇವಿ ಒಡೆಯರ್ ಅವರು​ ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಅಧಿನಿಯಮದ ಪ್ರತಿ ಹಾಗೂ ಪ್ರಮೋದದೇವಿ ಸಲ್ಲಿಸಿದ್ದ ರಿಟ್ ಅರ್ಜಿ ಕೂಡ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ:KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

publive-image

ಇನ್ನು ಮೈಸೂರು ರಾಜವಂಶಸ್ಥರು ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗಲೂ ಆಸ್ತಿ ರಾಜಮನೆತನದ್ದಲ್ಲ ಎಂದು ಹೇಳಿದ್ದರು. ಸಭೆ ನಡೆಸಿ ಈ ಸಂಬಂಧ ಅಂಕುಶವನ್ನ ತಂದಿದ್ದರು. ದಸರಾ ಉತ್ಸವದ ಸಂದರ್ಭದಲ್ಲೂ ಅಂಬಾರಿ ವಿಚಾರಕ್ಕೆ ಜಟಾಪಟಿ ನಡೆದಿತ್ತು. ರಾಜಮನೆತನದ ಸುಪರ್ದಿಯ ಅಂಬಾರಿಗೆ ರಾಜಧನ ನೀಡಿಕೆ ಕುರಿತು ಫೈಟ್ ಏರ್ಪಟ್ಟಿತ್ತು. ಇದು ಅಲ್ಲದೇ ಸರ್ಕಾರ ಲಲಿತ್​ ಮಹಲ್​ ಹೆಲಿಪ್ಯಾಡ್​​ಗಾಗಿ ಜಾಗ ಬಳಕೆ ಮಾಡುತ್ತಿತ್ತು. ಇದಕ್ಕೂ ಸರ್ಕಾರ ಹಾಗೂ ರಾಜಮನೆತನದ ಮಧ್ಯೆ ಜಟಾಪಟಿ ನಡೆದಿತ್ತು. ಪದೇ ಪದೇ ರಾಜಮನೆತನ ಹಾಗೂ ಸರ್ಕಾರದ ನಡುವೆ ಈ ರೀತಿ ಆಗುತ್ತಲೇ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment