/newsfirstlive-kannada/media/post_attachments/wp-content/uploads/2023/09/BPL-2.jpg)
ಬೆಂಗಳೂರು: ಬಿಪಿಎಲ್​ ಕಾರ್ಡ್​ ಫಲಾನುಭವಿಗಳೇ ಎಚ್ಚರ! ನೀವು ಬಿಪಿಎಲ್​ಗೆ ಅರ್ಹರೇ ಅಂತ ಈಗಲೇ ಪರಿಶೀಲನೆ ಮಾಡಿಕೊಳ್ಳಿ. ಜಿಎಸ್​ಟಿ, ಐಟಿ ಕಟ್ಟೋ ಯಾರಾದ್ರೂ ಬಿಪಿಎಲ್ ಕಾರ್ಡ್​​ ಬಳಸಿದ್ರೆ ಕಂಟಕ ಎದುರಾಗೋದು ಗ್ಯಾರಂಟಿ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅನುಕೂಲಕ್ಕಾಗಿ ಇರೋ ಕಾರ್ಡ್ ಬಿಪಿಎಲ್​​. ಇದನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋ ಕಾರಣ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.
ಗೃಹಲಕ್ಷ್ಮಿ ಬೆನ್ನಲ್ಲೇ ಬಿಪಿಎಲ್ ಫಲಾನುಭವಿಗಳಿಗೂ ಶಾಕ್
ಗೃಹಲಕ್ಷ್ಮೀ ಬೆನ್ನಲ್ಲೇ ಸರ್ಕಾರ ಬಿಪಿಎಲ್​ ಕಾರ್ಡ್​ ಫಲಾನುಭವಿಗಳಿಗೆ ಶಾಕ್​ ನೀಡಿದೆ. ರೇಷನ್​ ಕಾರ್ಡ್​ಗೆ ಸದ್ದಿಲ್ಲದೇ ಆಪರೇಷನ್​ಗೆ ಇಳಿದಿದೆ. ರಾಜ್ಯಾದ್ಯಂತ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಬಿಪಿಎಲ್​ ಕಾರ್ಡ್​ಗಳನ್ನ ರದ್ದು ಮಾಡಲು ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್​ಟಿ ಬಳಸುತ್ತಿದ್ದ 16 ಸಾವಿರ ಫಲಾನುಭವಿಗಳಿಗೆ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಅದೇ ಮಾನದಂಡದಲ್ಲಿ ಬಿಪಿಎಲ್​ ಕಾರ್ಡ್​ ರದ್ದು ಮಾಡಲು ಮುಂದಾಗಿದೆ.
ಎಪಿಎಲ್​ ಆಯ್ತು ಈಗ ಬಿಪಿಎಲ್​!
ರಾಜ್ಯಾದ್ಯಂತ ಒಟ್ಟು 10 ಸಾವಿರ ಕಾರ್ಡ್​ಗಳನ್ನ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೆಲವು ಕಾರ್ಡ್​ಗಳನ್ನ ಬದಲಾವಣೆ ಮಾಡಲಾಗಿದೆ. ಬಿಪಿಎಲ್​ ಕಾರ್ಡ್​ನಿಂದ ಎಪಿಎಲ್​​ ಕಾರ್ಡ್​ಗೆ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ, ಸರ್ಕಾರಿ ನೌಕರ ಹೀಗೆ ಹಲವು ಮಾನದಂಡ ಇಟ್ಟು ಬಿಪಿಎಲ್​ ಕಾರ್ಡ್​ ರದ್ದು ಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 9,441 ಕಾರ್ಡ್​ APL ಕಾರ್ಡ್​ ಆಗಿ ಚೇಂಜ್​​ ಆಗಿದೆ. ಇನ್ನೂ, ಕೋಲಾರದಲ್ಲಿ 6,500, ಉಡುಪಿ ಜಿಲ್ಲೆಯಲ್ಲಿ 6,422 ಕಾರ್ಡ್, ಬಾಗಲಕೋಟೆಯಲ್ಲಿ 6,299 ಬಿಪಿಎಲ್​​ ಕಾರ್ಡ್​ಗಳು ಎಪಿಎಲ್​ ಕಾರ್ಡ್ ಆಗಿ ಬದಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 5,973 ಕಾರ್ಡ್, ವಿಜಯಪುರ ಜಿಲ್ಲೆಯಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯ ಭಾಗದ 2,824, ಶಿವಮೊಗ್ಗ 2,346 BPL ಕಾರ್ಡ್​ಗಳು APL ಆಗಿ ಬದಲಾವಣೆಯಾಗಿವೆ.
ಬಿಪಿಎಲ್ ರದ್ದಾದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ ಸಿಗೋದಿಲ್ಲ. ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿಯನ್ನ ಕೈಗೊಳ್ಳಲು ಆಗುವುದಿಲ್ಲ. ಇತ್ತ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸರ್ಕಾರ ಬಿಎಪಿಎಲ್​ ಕಾರ್ಡ್​ ರದ್ದು ಮಾಡುತ್ತಿರುವುದಕ್ಕೆ ವಾಗ್ದಾಳಿ ನಡೆಸಿದ್ದಾರೆ. ಆದ್ರೆ, ಈ ಕುರಿತಂತೆ ಮಾತಾಡಿದ್ದ ಮುನಿಯಪ್ಪ, ಯಾವುದೇ ಕಾರ್ಡ್ ರದ್ದಾಗಿಲ್ಲ ಎಂದಿದ್ರು.
ಇನ್ನೂ, ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ ಸಿದ್ದರಾಮಯ್ಯ, ಅನರ್ಹವಿದ್ದ ಕಾರ್ಡ್​ಗಳನ್ನ ಮಾತ್ರ ರದ್ದುಗೊಳಿಸಿಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಬಿಪಿಎಲ್​ ಕಾರ್ಡ್​ಗೆ ಆಪರೇಷನ್​ಗೆ ಇಳಿದಿದೆ. ಬಿಪಿಎಲ್​ ಕಾರ್ಡ್ ರದ್ದು ಮಾಡಿಲ್ಲ, ಎಪಿಎಲ್​ಗೆ ಬದಲಾಯಿಸಿದ್ದೀವಿ ಎಂದು ಸರ್ಕಾರ ಹೇಳ್ತಿದೆ. ಆದ್ರೆ, ಕಾರ್ಡ್​ ಹೊಂದಿದವರು ಕಂಗಾಲಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us