/newsfirstlive-kannada/media/post_attachments/wp-content/uploads/2024/06/YOGA_HDD.jpg)
ಬಳ್ಳಾರಿ: ಯೋಗ ವಿಶ್ವದ್ಯಾಂತ ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮೊರೆ ಹೋಗುವ ಒಂದು ವಿಧಾನ. 5,000 ವರ್ಷಗಳ ಹಿಂದೆಯೇ ಭಾರತದಲ್ಲಿ ಯೋಗ ಹುಟ್ಟುಕೊಂಡಿತೆಂದು ಇತಿಹಾಸ ಹೇಳುತ್ತದೆ. ಆದರೆ ಇಂದು ಯೋಗವನ್ನು ಭಾರತವಷ್ಟೇ ಅಲ್ಲ, ಇಡೀ ವಿಶ್ವದ್ಯಾಂತ ಜನ ಅಭ್ಯಾಸ ಮಾಡುತ್ತಿದ್ದಾರೆ. ಅದರಂತೆ ಇಂದು ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು ಯೋಗದ ವಿವಿಧ ಆಸನಗಳನ್ನು ಹಾಕುವ ಮೂಲಕ ಯೋಗದ ಪ್ರಾಮುಖ್ಯತೆ ಸಾರಲಾಗುತ್ತಿದೆ.
ಸ್ಯಾಂಡಲ್​ವುಡ್​ನ ದಿವಂಗತ ನಟ ಡಾ.ರಾಜ್​ಕುಮಾರ್ ಅವರು ಅಷ್ಟೊಂದು ವರ್ಷ ಆರೋಗ್ಯವಾಗಿರಲು ಕಾರಣ ಅವರು ನಿತ್ಯ ಮಾಡುತ್ತಿದ್ದ ಯೋಗ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​​.ಡಿ ದೇವೇಗೌಡರು ಯೋಗದ ಹಲವು ಆಸನಗಳನ್ನು ಸರಳವಾಗಿ ಮಾಡುತ್ತಾರೆ. ಹೀಗಾಗಿಯೇ ಅವರು ರಾಜಕೀಯ ಸಭೆ, ಸಮಾರಂಭದಲ್ಲಿ ಈಗಲೂ ಭಾಗಿಯಾಗುತ್ತಾರೆ.
/newsfirstlive-kannada/media/post_attachments/wp-content/uploads/2024/06/YOGA_SIDDU.jpg)
ಯೋಗ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ
ಬಳ್ಳಾರಿಯ ಜಿಂದಾಲ್​ನಲ್ಲಿ ಯೋಗ ಕಾರ್ಯಕ್ರಮ ಈಗಾಗಲೇ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕನ್ನಡದ ನಟಿ, ಬಹುಭಾಷಾ ಸುಂದರಿ ಶ್ರೀಲೀಲಾ ಅವರು ಇದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ವಚನಾನಂದ ಶ್ರೀ ಅವಧೂತ ವಿನಯ್ ಗುರೂಜಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಪ್ರಾರಂಭ ಮಾಡಲಾಗಿದೆ. ಅಂತಾರಾಷ್ಟ್ರೀಯ ಯೋಗಪಟುಗಳು ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಯೋಗಾಸನಗಳನ್ನು ಹಾಕುತ್ತಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯಪುರದ ಡಾ.ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿ ಯೋಗಾಸನ ಮಾಡಿದ್ದಾರೆ. ಜಿಲ್ಲಾಧಿಕಾರಿ ಟಿ.ಬೂಬಾಲನ್, ಸಿಇಓ ರಿಷಿ ಆನಂದ, ಎಸ್​ಪಿ ಋಷಿಕೇಶ ಸೋನಾವಣೆ ಕೂಡ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನಗರದ ಸಾವಿರಾರು ವಿದ್ಯಾರ್ಥಿಗಳು, ಆಯುಷ್ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಈ ಮೂಲಕ ವಿವಿಧ ಬಗೆಯ ಯೋಗ ಭಂಗಿಗಳನ್ನ ಹಾಕುವ ಮೂಲಕ ಅರ್ಥಪೂರ್ಣ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/06/YOGA_SIDDU_1.jpg)
ಹೆಚ್​.ಡಿ ಕುಮಾರಸ್ವಾಮಿ ಅವರಿಂದ ಯೋಗ ದಿನಾಚರಣೆ
ಕೇಂದ್ರದ ಬೃಹತ್​ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಯೋಗದಿನವನ್ನು ಆಚರಣೆ ಮಾಡಿದ್ದಾರೆ. ಬಿಹೆಚ್ಇಎಲ್​ನ ಸಿಬ್ಬಂದಿ ಮತ್ತು ಸ್ಥಳಿಯರು ಸೇರಿ ನೋಯ್ಡಾದ BHEL ಟೌನ್​ಶಿಪ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕೇಂದ್ರ ಸಚಿವರು ಆದ ಮೇಲೆ ಇದೆ ಮೊದಲ ಬಾರಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವು ಆಸನಗಳನ್ನು ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/06/YOGA_HDK.jpg)
ಯೋಗ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು, 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಆಚರಿಸಲಾಗುತ್ತಿದೆ. ಮೈಸೂರಿನ ಅರಮನೆ ಮೈದಾನದಲ್ಲಿ ಮೋದಿಯವರು ಮೊದಲ ಬಾರಿಗೆ ಯೋಗ ಮಾಡಿದರು. ಯೋಗಕ್ಕೆ ಪ್ರಧಾನಿಗಳ ಪ್ರೊತ್ಸಾಹ ಹೆಚ್ಚು ಇದೆ. ಕಾಯಿಲೆಗಳಿಗೆ ಯೋಗ ಮುಕ್ತಿ ನೀಡುತ್ತದೆ. ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಆರೋಗ್ಯವಂತರಾಗಲು ನಿತ್ಯ ಯೋಗ ಮಾಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us