Advertisment

ಬೇರೆ ಭಾಷೆಯವರಿಗೆ ಕನ್ನಡ ಕಲಿಸುವಂತ ಪ್ರಯತ್ನ ಆಗಬೇಕು- ಸಿಎಂ ಸಿದ್ದರಾಮಯ್ಯ

author-image
Bheemappa
Updated On
ಬೇರೆ ಭಾಷೆಯವರಿಗೆ ಕನ್ನಡ ಕಲಿಸುವಂತ ಪ್ರಯತ್ನ ಆಗಬೇಕು- ಸಿಎಂ ಸಿದ್ದರಾಮಯ್ಯ
Advertisment
  • ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಸೇರಿ ಹಲವರು ಭಾಗಿ
  • ‘ಕರ್ನಾಟಕ ಸಂಭ್ರಮ’ ಇಡೀ ವರ್ಷ ಆಚರಣೆ ಮಾಡುತ್ತಿದ್ದೇವೆ
  • ಕನ್ನಡದ ಹಾಡುಗಳಿಗೆ ನೃತ್ಯ ಮಾಡಿದ ಶಾಲಾ ವಿದ್ಯಾರ್ಥಿಗಳು

ಬೆಂಗಳೂರು: 69ನೇ ಕನ್ನಡ ರಾಜ್ಯೋತ್ಸವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನಗರದ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿದರು.

Advertisment

ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ ಅವರು ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕನ್ನಡದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಹೀಯಾಳಿಸುವಂತ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡ ದ್ರೋಹ ಆಗಿದೆ. ಅಂತವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂಧ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ

ಇಡೀ ದೇಶದಲ್ಲೇ ಕರ್ನಾಟಕ ಅತ್ಯಧಿಕ ತೆರಿಗೆ ಕಟ್ಟುತ್ತಿರುವ 2ನೇ ರಾಜ್ಯವಾಗಿದೆ. 4 ಲಕ್ಷ ಕೋಟಿ ತೆರಿಗೆ ಕಟ್ಟಿದರೆ ನಮಗೆ ಕೇಂದ್ರ ಸರ್ಕಾರದಿಂದ ಕೇವಲ 50 ರಿಂದ 60 ಸಾವಿರ ಕೋಟಿ ಮಾತ್ರ ಬರುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಆದರೆ ಮುಂದುವರೆದ ರಾಜ್ಯ ಎಂದು ಅನ್ಯಾಯ ಮಾಡಬಾರದು. ನ್ಯಾಯಯುತವಾಗಿ ನಮ್ಮ ತೆರಿಗೆ ಪಾಲು ಕೊಡಬೇಕು. ಆದರೆ ಇದಕ್ಕೆ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ. ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕದಿಂದ ಸಂಸದರಾಗಿ ದೆಹಲಿಗೆ ಹೋಗಿದ್ದಾರೆ. ಅವರೆಲ್ಲ ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದರೆ ನಮಗೆ ನ್ಯಾಯ ಸಿಗುತ್ತದೆ. 15ನೇ ಹಣಕಾಸು ಆಯೋಗದಲ್ಲಿ ಸರಿ ಆಗುತ್ತದೆ ಎಂದಿದ್ದರು. ಆದರೆ ಅದು ಕೂಡ ಸರಿ ಆಗಿಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:ವಿಶ್ವದ ಅತ್ಯಂತ ಐಷಾರಾಮಿ ಶೇಖ್ ಜಾಯೆದ್ ಉತ್ಸವ.. 120 ದಿನ ನಡೆಯೋ ಶ್ರೀಮಂತ ಕಾರ್ಯಕ್ರಮ

publive-image

ಕರ್ನಾಟಕ ಎಂದು ನಾಮಕರಣ ಆಗಿ ಈಗ 51 ವರ್ಷ ತುಂಬುತ್ತಿದೆ. 50 ವರ್ಷ ತುಂಬಿದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಅವರು ಇದನ್ನು ಆಚರಣೆ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ನಾನು ಸಿಎಂ ಆದ ಮೇಲೆ ಕರ್ನಾಟಕ ಎಂದು ನಾಮಕರಣ ಮಾಡಿದ್ದ ದಿನವನ್ನು ಇಡೀ ವರ್ಷ ಆಚರಣೆ ಮಾಡಬೇಕೆಂದು ‘ಕರ್ನಾಟಕ ಸಂಭ್ರಮ’ವನ್ನು ಆಚರಣೆ ಮಾಡುತ್ತಿದ್ದೇವೆ. ಕನ್ನಡವನ್ನ ವ್ಯವಹಾರಿಕ ಭಾಷೆ ಮಾಡುವುದರ ಜೊತೆಗೆ ನಾವು ಬೇರೆಯವರ ಜೊತೆ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ಶಪಥ ಮಾಡಬೇಕು. ಬೇರೆ ಭಾಷೆಯವರಿಗೆ ಕನ್ನಡವನ್ನ ಕಲಿಸುವಂತ ಪ್ರಯತ್ನ ಮಾಡಬೇಕು. ಏಕೆಂದರೆ ನಮ್ಮ ರಾಜ್ಯದಲ್ಲಿ 200ಕ್ಕೂ ಹೆಚ್ಚು ಭಾಷೆಗಳಿವೆ ಎಂದು ಹೇಳಿದರು.

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಇದೆ

Advertisment

ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ನಾವು ಯಾವುದೇ ಕಾರಣಕ್ಕೆ ನಮ್ಮ ಭಾಷೆಯನ್ನು ಬಲಿ ಕೊಟ್ಟು ಉದಾರಿಗಳು ಆಗಬಾರದು. ಉದಾರಿತನ ವಿರೋಧ ಮಾಡಲ್ಲ, ಉದಾರಿಗಳಾಗಿರಬೇಕು. ಆದರೆ ನಮ್ಮ ಭಾಷೆಯನ್ನ ಬಲಿಕೊಟ್ಟು ಉದಾರಿಗಳು ಆಗಬಾರದು. ಭಾಷೆಯ ವ್ಯಾಮೋಹ ಅತಿಯಾಗಿ ಇರಬಾರದು. ಕನ್ನಡ ಅಭಿಮಾನವನ್ನ ಯಾವತ್ತೂ ಬಿಟ್ಟುಕೊಡಬಾರದು ಎಂದು ಹೇಳಿದರು.

ಭಾಷೆ ಮೊದಲು ಎತ್ತರಕ್ಕೆ ತಗೊಂಡು ಹೋಗಬೇಕಾದರೆ ಮೊದಲು ನಾವು ಕನ್ನಡಿಗರು ಆಗಬೇಕು. ಬೇರೆ ಭಾಷೆ ಕಲಿಯಿರಿ, ಆದರೆ ಮಾತೃ ಭಾಷೆಯನ್ನ ಮರೆಯಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಇನ್ನು ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ರಿಜ್ವಾನ್ ಅರ್ಷದ್ ಇತರರು ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment