KAS ಮರು ಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ
ಕನ್ನಡ ಭಾಷಾಂತರದ ಕಗ್ಗೊಲೆ ಮಾಡಿದ್ದ ಕೆಪಿಎಸ್‌ಸಿ ವಿರುದ್ಧ ಆಕ್ರೋಶ
ನ್ಯೂಸ್ ಫಸ್ಟ್ ಚಾನೆಲ್‌ಗೆ ಕೈ ಮುಗಿದು ಧನ್ಯವಾದ ಸಲ್ಲಿಸಿದ್ದ ಪರೀಕ್ಷಾರ್ಥಿಗಳು
ಬೆಂಗಳೂರು: ಗೊಂದಲ, ವಿವಾದಕ್ಕೆ ಕಾರಣವಾಗಿದ್ದ KAS ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಲವು ಸಂಘಟನೆಗಳ ವಿರೋಧ ಮತ್ತು ಅಭ್ಯರ್ಥಿಗಳ ಆಕ್ರೋಶದ ಬಗ್ಗೆ ನ್ಯೂಸ್ ಫಸ್ಟ್ ಸತತ ವರದಿ ಪ್ರಸಾರ ಮಾಡಿತ್ತು.
ಇದನ್ನೂ ಓದಿ: KAS ಪರೀಕ್ಷೆ ಗೊಂದಲ ಇನ್ನೂ ಮುಗಿದಿಲ್ಲ; KPSC ಮಾಡಿದ 20 ಯಡವಟ್ಟುಗಳು ಇಲ್ಲಿವೆ..
ಕನ್ನಡ ಭಾಷಾಂತರದ ಕಗ್ಗೊಲೆ ಮಾಡಿದ್ದ ಕೆಪಿಎಸ್‌ಸಿ ವಿರುದ್ಧ ಆಕ್ರೋಶ ವ್ಯಕ್ತವಾದ ಮೇಲೆ ಸಿಎಂ ಸಿದ್ದರಾಮಯ್ಯ ಇನ್ನೆರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸಲು ಮಹತ್ವದ ಸೂಚನೆ ನೀಡಿದ್ದಾರೆ.
ಕೆಎಎಸ್ ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡುತ್ತಿದ್ದಂತೆ ಅಭ್ಯರ್ಥಿಗಳು ಸಂಭ್ರಮ ಪಟ್ಟಿದ್ದಾರೆ. ಇದು ನ್ಯೂಸ್ ಫಸ್ಟ್ ಬಿಗ್ ಇಂಪ್ಯಾಕ್ಟ್ ಆಗಿದ್ದು, ನ್ಯೂಸ್ ಫಸ್ಟ್ ಅವರು ಪ್ರೈಮ್ ಟೈಮ್ ಅಲ್ಲಿ ಟೆಲಿಕಾಸ್ಟ್ ಮಾಡಿದ್ದಾರೆ. ವಿದ್ಯಾರ್ಥಿಗಳ ಧ್ವನಿಯಾಗಿದ್ದು ನ್ಯೂಸ್ ಫಸ್ಟ್ ಎಂದು ಜೈಕಾರ ಹಾಕಿದ್ದಾರೆ. KAS ಪರೀಕ್ಷೆ ಪೋಸ್ಟ್‌ಪೊನ್ ಬಗ್ಗೆ ಅಭ್ಯರ್ಥಿಗಳ ಹರ್ಷ ವ್ಯಕ್ತಪಡಿಸಿದ್ದು, ನ್ಯೂಸ್ ಫಸ್ಟ್‌ಗೆ ಕೈ ಮುಗಿದು ಧನ್ಯವಾದ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೂಚನೆ!
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದವೆಂಬ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ, ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮುಂದಿನ ಎರಡು ತಿಂಗಳ ಒಳಗೆ ಮರುಪರೀಕ್ಷೆ ಮಾಡುವಂತೆ ಕೆಪಿಎಸ್‌ಸಿಗೆ ಸೂಚನೆ ನೀಡಿದ್ದೇನೆ.
ಇದನ್ನೂ ಓದಿ: KAS ಪರೀಕ್ಷೆ ವೇಳೆ ನಡೆಯಿತು ಯಡವಟ್ಟು.. ಭಾರೀ ಗೊಂದಲ; ಜಿಲ್ಲಾಧಿಕಾರಿ ದಿಢೀರ್ ಭೇಟಿ
ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಪಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾವು ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆ ಮತ್ತು ನಂಬಿಕಾರ್ಹತೆಯನ್ನು ಎತ್ತಿ ಹಿಡಿದು, ಪರೀಕ್ಷಾರ್ಥಿಗಳ ಹಿತರಕ್ಷಿಸಲು ಬದ್ಧರಾಗಿದ್ದೇವೆ.
ಏನಿದು ವಿವಾದ?
ಪರೀಕ್ಷಾರ್ಥಿಗಳ ವಿರೋಧದ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗ (KPSC) ಆಗಸ್ಟ್ 27 ರಂದು ಕೆಎಎಸ್ ಪರೀಕ್ಷೆ ನಡೆಸಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಉಂಟಾಗಿರುವ ಗೊಂದಲ ವಿವಾದಕ್ಕೆ ಕಾರಣವಾಗಿದೆ.
ಪರೀಕ್ಷಾರ್ಥಿಗಳು ಕೆಪಿಎಸ್‌ಸಿ ಮಾಡಿರುವ 20 ತಪ್ಪಗಳು ಬಗ್ಗೆ ಆರೋಪ ಮಾಡಿದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ