/newsfirstlive-kannada/media/post_attachments/wp-content/uploads/2024/09/CM_SIDDARAMAIAH_MUDA.jpg)
ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಕೇಸ್ಗೆ ಇವತ್ತು ಜಡ್ಜ್ಮೆಂಟ್ ಡೇ. ಅದರಲ್ಲೂ ಈ ತೀರ್ಪು ಸಿಎಂ ಸಿದ್ದರಾಮಯ್ಯರ ಭವಿಷ್ಯವನ್ನೇ ನಿರ್ಧರಿಸಲಿದೆ. ಬೆಳಗ್ಗೆ 11 ಗಂಟೆಗೆ ಧಾರವಾಡ ಹೈಕೋರ್ಟ್‌ನಲ್ಲಿ ಮುಡಾ ಕೇಸ್ನ ತೀರ್ಪು ಪ್ರಕಟವಾಗಲಿದ್ದು ರಾಜಕಾರಣಿಗಳು ತೀರ್ಪಿನತ್ತ ದೃಷ್ಟಿ ನೆಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಪಾಲಿಗೆ ಇವತ್ತು ಬಿಗ್ ಡೇ. ಇತಿಹಾಸದಲ್ಲಿ ದಾಖಲಾಗಿ ಹೋಗುವ ದಿನ. ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದ ತೀರ್ಪು ಅನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ಪ್ರಕಟವಾಗಲಿದೆ.
ಇವತ್ತೇ ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ!
ನ್ಯಾಯಮೂರ್ತಿ ನಾಗಪ್ರಸನ್ನರಿಂದ ತೀರ್ಪು ಪ್ರಕಟ ಆಗಲಿದೆ. ಬೆಳಗ್ಗೆ 11ಕ್ಕೆ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಜನವರಿ 27ರಂದು ಅಂತಿಮ ವಿಚಾರಣೆ ನಡೆದಿತ್ತು. ಇಡೀ ದಿನ ವಾದ- ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು, ತೀರ್ಪು ಕಾಯ್ದಿರಿಸಿದ್ದರು.
ಸಿದ್ದರಾಮಯ್ಯಗೆ ಮುಡಾ ಸಂಕಟ!
ಈಗಾಗಲೇ ಮುಡಾ ನಿವೇಶನ ಅಕ್ರಮ ಹಂಚಿಕೆ ಆರೋಪ
ಪ್ರಕರಣ ಸಂಬಂಧಿಸಿ ಲೋಕಾಯುಕ್ತ, ಇ.ಡಿಯಿಂದ ತನಿಖೆ
ಪ್ರಕರಣ ಸಿಬಿಐಗೆ ವಹಿಸುವಂತೆ ಸ್ನೇಹಮಯಿ ಕೃಷ್ಣ ಅರ್ಜಿ
ಸಿಬಿಐಗೆ ಮುಡಾ ಪ್ರಕರಣವನ್ನ ನೀಡಿದ್ರೆ ಸಿಎಂಗೆ ಸಂಕಷ್ಟ
ಧಾರವಾಡದ ಹೈಕೋರ್ಟ್‌ನಲ್ಲಿ ಮುಡಾ ಕೇಸ್ ತೀರ್ಪು
ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ಪ್ರಿಯಾಂಕ ಚೋಪ್ರಾ.. ಪಿಂಕಿ ಡೈಮಂಡ್ ನೆಕ್ಲೇಸ್ ಬೆಲೆ ಎಷ್ಟು?
ಹೈಕೋರ್ಟ್ ನಮ್ಮ ಮನವಿಯನ್ನ ಪುರಸ್ಕರಿಸುವ ವಿಶ್ವಾಸವಿದೆ
ಈ ಮಧ್ಯೆ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಸಹ ಇವತ್ತೇ ನಡೆಯಲಿದೆ. ನ್ಯೂಸ್ಫಸ್ಟ್ ಜೊತೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ನಮ್ಮ ಪರ ತೀರ್ಪು ಬರಲಿದೆ. ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಿಬಿಐಗೆ ವಹಿಸದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸಿಬಿಐ ತನಿಖೆಗೆ ಹೈಕೋರ್ಟ್ ಒಪ್ಪಿಸುತ್ತಾ? ಲೋಕಾಯುಕ್ತ ತನಿಖೆ ಮುಂದುವರಿಯಲಿ ಅಂತ ಹೇಳುತ್ತಾ? ಗೊತ್ತಿಲ್ಲ. ಆದ್ರೆ, ಹೈಕೋರ್ಟ್ ನೀಡುವ ತೀರ್ಪು ಮಾತ್ರ ಸಿದ್ದರಾಮಯ್ಯ ಭವಿಷ್ಯ ನಿರ್ಧರಿಸಲಿದೆ. ಹೀಗಾಗಿ ಧಾರವಾಡ ಹೈಕೋರ್ಟ್ನತ್ತ ಇಡೀ ದೇಶದ ಕಣ್ಣು ನೆಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ