newsfirstkannada.com

ಅಯೋಧ್ಯೆಯ ಬೆನ್ನಲ್ಲೇ ಸೀತಾರಾಮ ದೇವಾಲಯ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ; ಎಲ್ಲಿ ಗೊತ್ತಾ?

Share :

Published January 22, 2024 at 2:42pm

Update January 22, 2024 at 2:44pm

  ದೇವಾಲಯವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

  38 ಅಡಿ ಎತ್ತರದ ಹನುಮಂತನ ಮೂರ್ತಿ ಲೋಕಾರ್ಪಣೆ

  ನಮ್ಮ ಊರಿನ ರಾಮ, ಆಯೋಧ್ಯೆಯ ರಾಮ ಒಂದೇ ಅಲ್ವಾ?; ಸಿಎಂ ಪ್ರಶ್ನೆ

ಬೆಂಗಳೂರು: ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೇ ಮಹಾದೇವಪುರ ಕ್ಷೇತ್ರದ ಹಿರಂಡಹಳ್ಳಿಯಲ್ಲಿ ಸೀತಾರಾಮ‌ ಲಕ್ಷ್ಮಣ ದೇವಾಲಯ ಲೋಕಾರ್ಪಣೆಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೇವಾಲಯವನ್ನು ಉದ್ಘಾಟಿಸಿದ್ದಾರೆ.

ದೇವಾಲಯದ ಪಕ್ಕದಲ್ಲೇ ನಿರ್ಮಿಸಿರುವ 38 ಅಡಿ ಎತ್ತರದ ಹನುಮಂತನ ಮೂರ್ತಿಯನ್ನು ಸಹ ಮುಖ್ಯಮಂತ್ರಿಯವರು ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದ್ದಾರೆ.

ಲೋಕಾರ್ಪಣೆ ಬೆನ್ನಲೇ ಸಿದ್ದರಾಮಯ್ಯ ಮಾತನಾಡಿದ್ದು, ಈ ದೇವಸ್ಥಾನ ರಾಜಕೀಯ ಕಾರ್ಯಕ್ರಮ ಅಲ್ಲ. ಗ್ರಾಮಸ್ಥರು ಸೇರಿ ಮಾಡಿರುವ ಕಾರ್ಯಕ್ರಮ. ಗ್ರಾಮದ ಜನರು ಆಹ್ವಾನ ನೀಡಿದ್ದರು. ಹಾಗಾಗಿ ದೇವಾಲಯ ಉದ್ಘಾಟನೆಗೆ ಬಂದಿದ್ದೇನೆ. ಇದರ ಹೊರತಾಗಿ ಇದು ರಾಜಕೀಯ ಕಾರಣಕ್ಕೆ ನಡೆಯುತ್ತಿಲ್ಲ. ಆದರೆ ಬಿಜೆಪಿಯವರು ರಾಜಕೀಯಕ್ಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿರುವ ಅವರು, ಇಲ್ಲಿ ಇರುವ, ನಮ್ಮ ಊರಿನಲ್ಲಿರುವ ರಾಮ, ಆಯೋಧ್ಯೆಯಲ್ಲಿರುವ ರಾಮ ಒಂದೇ ಅಲ್ವಾ?. ನಾನು ಆಯೋಧ್ಯೆಗೆ ಹೋಗುತ್ತೇನೆ. ಆದ್ರೆ ಇವರು ಇದರಲ್ಲಿ ರಾಜಕೀಯ ಮಾಡಿದ್ರು. ಅದನ್ನ ನಾವು ವಿರೋಧಿಸುತ್ತೇವೆ. ರಾಮ, ಲಕ್ಷ್ಮಣ, ಸೀತೆ ಒಟ್ಟಾಗಿ ಇರಬೇಕು. ಇವರು ರಾಮ ಪ್ರತಿಷ್ಠಾಪನೆ ಮಾತ್ರ ಮಾಡಿದ್ದಾರೆ. ರಾಜಕೀಯಕ್ಕಾಗಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯ ಬೆನ್ನಲ್ಲೇ ಸೀತಾರಾಮ ದೇವಾಲಯ ಲೋಕಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ; ಎಲ್ಲಿ ಗೊತ್ತಾ?

https://newsfirstlive.com/wp-content/uploads/2024/01/Siddaramaiah-6.jpg

Load More