newsfirstkannada.com

ಬಿಟ್​​ ಕಾಯಿನ್​ ಕೇಸ್​ ರೀ ಓಪನ್​ ಮಾಡಿದ ಸಿದ್ದು ಸರ್ಕಾರ; ಬಿಜೆಪಿ ನಾಯಕರಿಗೆ ಶುರುವಾಯ್ತು ಬಂಧನದ ಭೀತಿ

Share :

Published July 4, 2023 at 6:30am

Update July 4, 2023 at 6:21am

    ಸದ್ದು ಮಾಡಿದ್ದ ಹಗರಣವನ್ನು ‘ಬಿಟ್’ ಬಿಡದ ಸರ್ಕಾರ

    ಬಿಟ್​​ ಕಾಯಿನ್ ಕೇಸ್ ತನಿಖೆ ಆರಂಭಿಸಿರುವ ಎಸ್​ಐಟಿ

ಬೆಂಗಳೂರು: ಬಿಜೆಪಿ ಸರ್ಕಾರವನ್ನು ಬೆಚ್ಚಿ ಬೀಳಿಸಿದ್ದ ಬಿಟ್ ಕಾಯಿನ್ ಹಗರಣಕ್ಕೆ ಕಾಂಗ್ರೆಸ್ ಸರ್ಕಾರ ಮರುಜೀವ ನೀಡಿದೆ. ಬಿಟ್ ಕಾಯಿನ್ ಹಗರಣದ ತನಿಖೆಗೆ ಆದೇಶಿಸಿದೆ. ತನಿಖೆ ಮುಂದುವರಿದಲ್ಲಿ ಬಿಜೆಪಿ ನಾಯಕರಿಗೆ ಬಿಟ್​ ಕಾಯಿನ್ ಉರುಳು ಸುತ್ತಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸ್ತಿವೆ.

ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಹಲವು ಆರೋಪಗಳಲ್ಲಿ ಬಿಟ್​ ಕಾಯಿನ್ ಕೂಡ ಒಂದು. ಬಿಟ್‌ ಕಾಯಿನ್​​​ಯಿಂದ ಭಾರೀ ಅವ್ಯವಹಾರ ನಡೆದಿದೆ ಎಂದು ಅಂದು ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದರು. ತಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ತನಿಖೆ ನಡೆಸುವುದಾಗಿ ಹೇಳಿದ್ದರು.

ಬಿಟ್‌ಕಾಯಿನ್‌ ಕೇಸ್ ಫೈಲ್ ಓಪನ್ ಮಾಡಿದ ಸಿದ್ದು ಸರ್ಕಾರ!

ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಬಿಟ್‌ ಕಾಯಿನ್‌ ಹಗರಣದ ಕೇಸ್​ ಫೈಲ್​ ಅನ್ನು ಸಿದ್ದರಾಮಯ್ಯ ಸರ್ಕಾರ ಓಪನ್ ಮಾಡಿದೆ. ಸಿಆರ್​ಪಿಸಿ 156ರ ಅಡಿಯಲ್ಲಿ ಸಿಐಡಿ ಡಿಜಿಪಿಗಳ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಏನಿದು ಬಿಟ್ ಕಾಯಿನ್?

ಬಿಟ್ ಕಾಯಿನ್ ಅಂದರೆ ಡಿಜಿಟಲ್ ಕರೆನ್ಸಿ ನಗದಲ್ಲದ ಹಣವಾಗಿದ್ದ ಹಲವು ರೀತಿಯ ಡಿಜಿಟಲ್/ಕ್ರಿಪ್ಟೋ ಕರೆನ್ಸಿ ಚಾಲ್ತಿಯಲ್ಲಿವೆ. ಜಾಗತಿಕವಾಗಿ ಇದರ ನಿಯಂತ್ರಣಕ್ಕೆ ನಿರ್ದಿಷ್ಟ ಸಂಸ್ಥೆಗಳಿಲ್ಲ. ಬಳಕೆ ಹಾಗೂ ವಹಿವಾಟಿಗೆ ಭೌಗೋಳಿಕ ಮಿತಿ ಇಲ್ಲ, ಇಂಟರ್​​ನೆಟ್​​ನ 3 ವೇದಿಕೆಗಳಲ್ಲಿ ಬಿಟ್ ಕಾಯಿನ್ ಬಳಕೆ ಆಗುತ್ತೆ. ಡಾರ್ಕ್ ವೆಬ್​​ನಲ್ಲಿ ಅನಾಮಧೇಯವಾಗಿ ವಹಿವಾಟು ನಡೆಸಬಹುದಾಗಿದೆ.

ಎಸ್​​ಐಟಿ ತನಿಖೆ ಹೇಗೆ ನಡೆಯತ್ತೆ?

CRPC ಸೆಕ್ಷನ್ 156 ಅಡಿಯಲ್ಲಿ ಎಸ್​ಐಟಿ ತಂಡ ರಚಿಸಲಾಗಿದ್ದು ಎಸ್​ಐಟಿ ತನಿಖೆಗೆ ಬೇಕಾಗಿರುವ ಆಂತರಿಕ ತಂಡಗಳ ರಚನೆ ಮಾಡಲಾಗುತ್ತೆ. ಸದ್ಯ ತನಿಖೆಯಲ್ಲಿ ಪತ್ತೆಯಾದ ಸಾಕ್ಷಿಗಳ ಪರಿಶೀಲನೆ ಆಗುತ್ತೆ, ಯಾವ ಹಂತದಲ್ಲಿ ತನಿಖೆ ಮುಗಿಸಲಾಗಿದೆ ಎಂದು ಪರಿಶೀಲನೆ ನಡೆಸಲಾಗುತ್ತೆ. ತನಿಖೆ ಬಗ್ಗೆ ಎಸ್ಐಟಿ ಮುಖ್ಯಸ್ಥರಿಗೆ ಅಧಿಕಾರಿಗಳು ನೀಡ್ತಾರೆ, ಬಳಿಕ ಐಟಿ ಆ್ಯಕ್ಟ್, ಐಪಿಸಿ ಅಡಿಯಲ್ಲಿ ಪ್ರಕರಣದ ತನಿಖೆ ನಡೆಯಲಿದೆ.

ಬಿಜೆಪಿ ನಾಯಕರಿಗೆ ಸಂಕಷ್ಟ ತರುತ್ತಾ ಪ್ರಕರಣ?

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಕರಣ ನಡೆದಿದ್ದು ಬಿಜೆಪಿ ನಾಯಕರಿಗೆ ಸಂಕಷ್ಟ ತರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಆರ್​.ಅಶೋಕ್ ಬಿಜೆಪಿಯವರನ್ನು ಬೆದರಿಸಬೇಕು ಅಂತಾ ತನಿಖೆ ಅಂತಿದ್ದಾರೆ, ಇಂತಹ ತನಿಖೆಗೆಲ್ಲಾ ಹೆದರಲ್ಲ ಅಂತ ಗುಡುಗಿದ್ದಾರೆ.

ಹಲವು ಅಧಿಕಾರಿಗಳ ವಿರುದ್ಧವೂ ಆರೋಪ ಕೇಳಿಬಂದಿತ್ತು. ಹಿರಿಯ ಅಧಿಕಾರಿಗಳ ಮಾತು ಕೇಳಿ ತನಿಖೆ ನಡೆಸಿದ್ದ ಸಿಬ್ಬಂದಿಗೆ ನಡುಕ ಶುರುವಾಗಿದೆ. ಒಟ್ಟಿನಲ್ಲಿ ಬಿಟ್​ ಕಾಯಿನ್ ಹಗರಣದ ತನಿಖೆ ಶುರುವಾಗಿದ್ದು ಹಲವರಿಗೆ ನಡುಕ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಟ್​​ ಕಾಯಿನ್​ ಕೇಸ್​ ರೀ ಓಪನ್​ ಮಾಡಿದ ಸಿದ್ದು ಸರ್ಕಾರ; ಬಿಜೆಪಿ ನಾಯಕರಿಗೆ ಶುರುವಾಯ್ತು ಬಂಧನದ ಭೀತಿ

https://newsfirstlive.com/wp-content/uploads/2023/07/Siddu_23.jpg

Load More