/newsfirstlive-kannada/media/post_attachments/wp-content/uploads/2025/05/siddu.jpg)
ಬೆಂಗಳೂರು: ನಿನ್ನೆಯಷ್ಟೇ ‘ಆಪರೇಷನ್ ಸಿಂಧೂರ’ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆ ಯಶಸ್ವಿಯಾಗಿ ಸೇಡು ತೀರಿಸಿಕೊಂಡಿದದೆ. ಪಿಓಕೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ 9 ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮೂಲಕ ಉಡೀಸ್ ಮಾಡಿದೆ.
ಇದನ್ನೂ ಓದಿ:ಪಾಕ್ಗೆ ಮತ್ತೊಂದು ರೀತಿಯಲ್ಲಿ ಕೌಂಟರ್.. ಆಪರೇಷನ್ ಸಿಂಧೂರ ಬಗ್ಗೆ ತಿಳಿಸಲು ಬಂದ ಈ ಅಧಿಕಾರಿಗಳು ಯಾರು?
ಆಪರೇಷನ್ ಸಿಂಧೂ ಬೆನ್ನಲ್ಲೇ ರಾಜ್ಯ ಸರ್ಕಾರ ತುರ್ತು ಆದೇಶ ಹೊರಡಿಸಿದೆ. ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಅಣೆಕಟ್ಟುಗಳಿಗೆ ಬಿಗಿ ಭದ್ರತೆ ನೀಡುವಂತೆ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಸತ್ಯಮೂರ್ತಿ ಬಿ.ಕುಲಕರ್ಣಿ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹೆಚ್ಚಿನ ಭದ್ರತೆ ಒದಗಿಸಲು ಆದೇಶ ನೀಡಲಾಗಿದೆ. ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟುಗಳಿಗೆ ಭದ್ರತೆ ನೀಡಿ ಆದೇಶ ಬೆನ್ನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಹೀಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಆದೇಶ ನೀಡಿದ್ದಾರೆ. ಅಲ್ಲದೇ ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ, ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಕೆ ನೀಡಲಾಗಿದೆ. ರಾಜ್ಯದ 17 ಅಣೆಕಟ್ಟುಗಳ ಮುಖ್ಯ ಎಂಜಿನಿಯರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಲಾಗಿದೆ.
ರಾಜ್ಯದ ಯಾವೆಲ್ಲ ಅಣೆಕಟ್ಟುಗಳಿಗೆ ಭದ್ರತೆಗೆ ಸೂಚನೆ
1. ಕಾವೇರಿ ನೀರಾವರಿ ನಿಗಮ ನಿಯಮಿತ ಬೆಂಗಳೂರು
2. ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಂಗಳೂರು
3.ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ಬೆಂಗಳೂರು
4. ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಬೆಂಗಳೂರು
5. ಮುಖ್ಯ ಎಂಜಿನಿಯರ್ ನೀರಾವರಿ ದಕ್ಷಿಣ ಮೈಸೂರು
6. ಹೇಮಾವತಿ ನಾಲಾವಲಯ ತುಮಕೂರು
7. ಹೇಮಾವತಿ ಯೋಜನೆ ಗೊರೂರು
8. ನೀರಾವರಿ ಉತ್ತರ ಬೆಳಗಾವಿ
9. ತುಂಗಾ ಮೇಲ್ದಂಡೆ ಶಿವಮೊಗ್ಗ
10. ಮಲಪ್ರಭಾ ಯೋಜನಾ ವಲಯ ಧಾರವಾಡ
11. ಮುನಿರಾಬಾದ್ ನೀರಾವರಿ ಕೇಂದ್ರ ವಲಯ
12. ನೀರಾವರಿ ಯೋಜನಾ ವಲಯ ಕಲ್ಬುರ್ಗಿ
13. ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ
14. ಆಲಮಟ್ಟಿ ಅಣೆಕಟ್ಟು ವಲಯ
15. ಕಾಲುವೆ 1 ಭೀಮರಾಯನಗುಡಿ
16. ಕಾಲುವೆ 2 ರಾಂಪುರ
17. ನಾರಾಯಣಪುರ ಅಣೆಕಟ್ಟು ಮುಖ್ಯಎಂಜಿನಿಯರ್ ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ