newsfirstkannada.com

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?

Share :

Published August 10, 2024 at 7:56am

    ಪಾದಯಾತ್ರೆಗೆ ಠಕ್ಕರ್​ ಕೊಡಲು ಕಾಂಗ್ರೆಸ್​ ನಡೆಸಿದ ಹೋರಾಟ

    ಸಿದ್ದರಾಮಯ್ಯಗೆ ಶಕ್ತಿ ತುಂಬಿದ ಜನಾಂದೋಲನ ಸಮಾವೇಶ

    ಸಿದ್ದರಾಮಯ್ಯರನ್ನ ತೆಗೆಯೋಕೆ ಆಗಲ್ಲ- ಕೆ.ಹೆಚ್​.ಮುನಿಯಪ್ಪ

ತವರಿನಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಶಕ್ತಿ ಪ್ರದರ್ಶನ ಮಾಡಿದ್ದು, ನಡುಗುತ್ತಿದ್ದ ಸಿಎಂ ಕುರ್ಚಿಗೆ ಜನಾಂದೋಲನದ ಬಲ ಸಿಕ್ಕಿದೆ. ತನ್ನೆಲ್ಲ ಸಾಮರ್ಥ್ಯ ಬಳಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆಯುವ ಮೂಲಕ ಸಂಕಷ್ಟವನ್ನೇ ಬಳಸಿ ಮತ್ತಷ್ಟು ಸ್ಟ್ರಾಂಗ್​ ಆದ್ರಾ ಸಿದ್ದರಾಮಯ್ಯ ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

ಮತ್ತೊಮ್ಮೆ ಪೂರ್ಣಾವಧಿ ಸಿಎಂ ಆಗಲು ಸಿದ್ದುಗೆ ವರವಾಗುತ್ತಾ?

ಕಾಂಗ್ರೆಸ್​ ಜನಾಂದೋಲನ.. ಇದು ಮೈತ್ರಿ ಪಡೆಯ ಮೈಸೂರು ಚಲೋ ಪಾದಯಾತ್ರೆಗೆ ಠಕ್ಕರ್​ ಕೊಡಲು ಕಾಂಗ್ರೆಸ್​ ನಡೆಸಿದ ಹೋರಾಟ. ಆದ್ರೀಗ ಸಿಎಂ ಸಿದ್ದರಾಮಯ್ಯನವರು ಈ ಸಮಾವೇಶದ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ್ರಾ ಎಂಬ ಮಾತುಗಳು ಕೇಳಿ ಬರ್ತಿವೆ. ರಾಜೀನಾಮೆಗೆ ಪಟ್ಟು ಹಿಡಿದ ಮೈತ್ರಿಗೆ ತಿರುಗೇಟು ನೀಡುವುದರ ಜೊತೆಗೆ, ಪಕ್ಷದೊಳಗಿನ ಸಿಎಂ ಬದಲಾವಣೆ ಲೆಕ್ಕಾಚಾರವನ್ನೂ ಇದೊಂದು ಸಮಾವೇಶದ ಮೂಲಕ ಸಿದ್ದರಾಮಯ್ಯ ತಲೆಕೆಳಗೆ ಮಾಡಿದ್ರಾ ಎಂಬ ಅನುಮಾನ ಮೂಡಿದೆ.

ಕೆಲದಿನಗಳ ಹಿಂದೆ ಕಾಂಗ್ರೆಸ್​ನಲ್ಲಿ ಅಧಿಕಾರದ ಬದಲಾವಣೆ ಚರ್ಚೆ ಜೋರಾಗಿತ್ತು. ಇದು ರಾಜ್ಯ ಕಾಂಗ್ರೆಸ್​ನಲ್ಲಿ ಗದ್ದಲವನ್ನೇ ಸೃಷ್ಟಿಸಿತ್ತು. ಇದೀಗ ಇಡೀ ಕಾಂಗ್ರೆಸ್​ ಪಡೆಯೇ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಸಿದ್ದರಾಮಯ್ಯನವರೇ 5 ವರ್ಷದವರೆಗೂ ಸಿಎಂ ಆಗಿ ಇರ್ತಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದು ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು, ಶಾಸಕರು ಸಿದ್ದು ಪರ ಬ್ಯಾಟಿಂಗ್​ ಮಾಡಿದ್ದಾರೆ.

ಪಾದಯಾತ್ರೆ ಮಾಡಿ ಹಗುರವಾಗಬೇಡಿ. ಈ ದೇಶದ ಅಭಿವೃದ್ಧಿ ಕಡೆಗೆ ಗಮನ ಕೊಡಿ. ನೀವು ಯಾರು ಏನು ಮಾಡೋಕೆ ಆಗೋದಿಲ್ಲ. ಸಿದ್ದರಾಮಯ್ಯರನ್ನ ಯಾರೂ ತೆಗೆಯೋಕೆ ಆಗಲ್ಲ. ನಾವು 136 ಜನ, ಎಲ್ಲ ಮಂತ್ರಿಗಳು, ಕಾಂಗ್ರೆಸ್​ ಪಕ್ಷ ಹಾಗೂ ಡಿ.ಕೆ ಶಿವಕುಮಾರ್ ಎಲ್ಲ ಒಟ್ಟಾಗಿ ಅವರ ಜೊತೆ ನಿಂತಿದ್ದೇವೆ.

ಕೆ.ಹೆಚ್​.ಮುನಿಯಪ್ಪ, ಸಚಿವ

ಕಾಂಗ್ರೆಸ್​ ಪಕ್ಷದಲ್ಲಿ ಸಿದ್ದರಾಮಯ್ಯರನ್ನ ಅಧಿಕಾರದಿಂದ ಕೆಳಗಿಳಿಸೋಕೆ ಸಾಧ್ಯವಿಲ್ಲ. ಆ ವಿಚಾರವು ನಮ್ಮ ಪಕ್ಷದಲ್ಲಿ ಇಲ್ಲ. ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಸಂಪೂರ್ಣವಾದ ಬೆಂಬಲ ಅವರಿಗಿದೆ. ಸಿದ್ದರಾಮಯ್ಯರನ್ನ ತೆಗೆದು ಮುಖ್ಯಮಂತ್ರಿ ಆಗಬೇಕು ಎನ್ನುವವರು ಯಾರು ಇಲ್ಲ. 5 ವರ್ಷ ಅವರೇ ಸಿಎಂ ಅವರೇ ಇರುತ್ತಾರೆ.

ಬಸವರಾಜರಾಯರೆಡ್ಡಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ

ಸಂಕಷ್ಟದ ಸಮಯದಲ್ಲಿ ಸಿದ್ದು ‘ಕೈ’ ಹಿಡಿದಿರುವ ಸಮಾವೇಶಗಳು

ಸದ್ಯ ಇವತ್ತಿನ ಮೈಸೂರು ಜನಾಂದೋಲನ ಸಮಾವೇಶವನ್ನು ನೋಡ್ತಿದ್ರೆ ಸಿಎಂ ಸಿದ್ದರಾಮಯ್ಯಗೆ ವರವಾಗುವಾ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ, ಸಿದ್ದರಾಮಯ್ಯ ಪ್ರತಿ ಬಾರಿಯೂ ರಾಜಕೀಯ ಸಂಕಷ್ಟದಲ್ಲಿ ಇದ್ದಾಗ ಇಂಥ ಸಮಾವೇಶಗಳೇ ಸಿದ್ದರಾಮಯ್ಯರ ಕೈ ಹಿಡಿದಿವೆ. ಇದಕ್ಕೆ ಹಲವು ಉದಾಹರಣೆಗಳೂ ಇವೆ.

  • ಜೆಡಿಎಸ್​ನಿಂದ ವಜಾಗೊಳಿಸಿದಾಗ ಅಹಿಂದ ಸಮಾವೇಶ
  • ಸಿದ್ದುಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಅಹಿಂದ ಸಮಾವೇಶ
  • ಬಳ್ಳಾರಿ ಪಾದಯಾತ್ರೆ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ರು
  • ಮೊದಲ ಬಾರಿಗೆ ಸಿಎಂ ಆಗಲು ವರವಾಗಿದ್ದ ಬಳ್ಳಾರಿ ಪಾದಯಾತ್ರೆ
  • ಸಿದ್ದರಾಮೋತ್ಸವದ ಮೂಲಕ ಹೈಕಮಾಂಡ್​ ಬಲ ತೋರಿಸಿದ್ದರು
  • 2ನೇ ಬಾರಿಗೆ ಸಿಎಂ ಆಗಲು ಪ್ರಮುಖ ಕಾರಣವೇ ಸಿದ್ದರಾಮೋತ್ಸವ

ಹೀಗೆ ಪ್ರತಿ ಬಾರಿಯೂ ರಾಜಕೀಯ ಸಂಕಷ್ಟ ಎದುರಾದಾಗ ಸಿದ್ದರಾಮಯ್ಯ ನಡೆಸಿದ ಸಮಾವೇಶಗಳು ಅವರ ಕೈ ಹಿಡಿದಿದೆ. ಇದೀಗ ರಾಜಕೀಯ ಸಂಧ್ಯಾ ಕಾಲದಲ್ಲಿ ಹಗರಣಗಳ ಮಸಿ ಮೆತ್ತಿಕೊಂಡಿದೆ. ಜೊತೆಗೆ ರಾಜ್ಯ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆಯ ಕಿಡಿ ಕೂಡ ಹೊಗೆಯಾಡುತ್ತಿದೆ. ಆದ್ರೀಗ ಜನಾಂದೋಲನ ಸಮಾವೇಶದ ಮೂಲಕ ಸಿದ್ದರಾಮಯ್ಯ ಕೇವಲ ವಿಪಕ್ಷಗಳಿಗೆ ಮಾತ್ರವಲ್ಲ. ಹೈಕಮಾಂಡ್​ಗೂ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಕಾಂಗ್ರೆಸ್​ನ ಬಹುತೇಕ ಸಚಿವರು, ಶಾಸಕರು ಕೂಡ ಸಿದ್ದರಾಮಯ್ಯರನ್ನ ಯಾರೂ ಟಚ್​ ಮಾಡೋಕೆ ಆಗಲ್ಲ ಅಂತಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

ತವರಿನಲ್ಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ ಸಿಎಂ ಸಿದ್ದರಾಮಯ್ಯ, ನಡುಗುತ್ತಿದ್ದ ಸಿಎಂ ಕುರ್ಚಿಗೆ ಜನಾಂದೋಲನದ ಮೂಲಕ ಬಲ ಹೆಚ್ಚಿಸಿಕೊಂಡಿದ್ದಾರೆ. ಸಂಕಷ್ಟವನ್ನೇ ಬಳಸಿ ಮತ್ತಷ್ಟು ಸ್ಟ್ರಾಂಗ್​ ಆದ ಸಿದ್ದು, ವಿಪಕ್ಷದ ವಿರೋಧಿಗಳಿಗೂ, ಸ್ವಪಕ್ಷದ ಸ್ಪರ್ಧಿಗಳಿಗೂ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?

https://newsfirstlive.com/wp-content/uploads/2024/08/SIDDU_1.jpg

Load More