ಬಸ್ ಏರಿ ರೈಟ್ ರೈಟ್ ಎನ್ನರಿದ್ದಾರೆ ಸಿಎಂ
ಜೂನ್ 11ಕ್ಕೆ ಶಕ್ತಿ ಯೋಜನೆಗೆ ಚಾಲನೆ
ಕಂಡೆಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಘೋಷಿಸಿದೆ. ಮಹಿಳೆಯರಿಗಾಗಿ ಜಾರಿಗೆ ತಂದ ಈ ಯೋಜನೆಗೆ ಚಾಲನೆ ಸಿಗುವ ಸಮಯ ಬಂದಿದೆ. ಸಿಎಂ ಸಿದ್ದರಾಮಯ್ಯನವರೇ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಕಂಡಕ್ಟರ್ ಸಿದ್ದರಾಮಯ್ಯ
ಮಹಿಳೆಯರಿಗಾಗಿ ತಂದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನ ಜಾರಿಗೆ ತರಲು ದಿನಾಂಕ ನಿಗದಿಯಾಗಿದ್ದು, ಸಿಎಂ ಸಿದ್ದರಾಮಯ್ಯವರು ಬಸ್ ಕಂಡೆಕ್ಟರ್ ಆಗುವ ಮೂಲಕ ಚಾಲನೆ ಕೊಡಲಿದ್ದಾರೆ. ಮಾತ್ರವಲ್ಲದೆ, ಬಸ್ನಲ್ಲಿ ಟಿಕೆಟ್ ನೀಡುವ ಮೂಲಕ ಕಂಡಕ್ಟರ್ ಆಗಲಿದ್ದಾರೆ. ಬಸ್ ನಂಬರ್ 43ಕ್ಕೆ ಕಂಡಕ್ಟರ್ ಆಗಲಿದ್ದಾರೆ. ಅಂದಹಾಗೆಯೇ ಜೂ.11ಕ್ಕೆ ಈ ಯೋಜನೆಗೆ ಚಾಲನೆ ಸಿಗಲಿದೆ. ಶಕ್ತಿ ಯೋಜನೆಗೆ ಚಾಲನೆ ಕೊಟ್ಟ ಬಳಿಕ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇತರೆ ಗ್ಯಾರಂಟಿಗಳಿಗೂ ಚಾಲನೆ
ಕಾಂಗ್ರೆಸ್ ಸರ್ಕಾರ ಇತರೆ ಗ್ಯಾರಂಟಿಗಳಿಗೂ ವಿಭಿನ್ನವಾಗಿ ಚಾಲನೆ ನೀಡಲು ಚಿಂತಿಸಿದೆ. ಜು.1ರಂದು ಮೈಸೂರಲ್ಲಿ ಅನ್ನ ಭಾಗ್ಯ ಯೋಜನೆಯ ಉದ್ಘಾಟನೆ ನಡೆಸುವ ಬಗ್ಗೆ ಯೋಚಿಸಲಾಗಿದೆ. ಆ.1ಕ್ಕೆ ಕಲಬುರಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ಚಿಂತಿಸಿದೆ. ಆ.17 ಅಥವಾ 18ಕ್ಕೆ ಮನೆಯೊಡತಿಗೆ ₹2 ಸಾವಿರ ನೀಡುವ ಗೃಹ ಲಕ್ಷ್ಮಿ ಜಾರಿಗೆ ತರಲು ಚಿಂತಿಸಿದ್ದು, ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಲಿದೆ. ಇನ್ನು ಆಗಸ್ಟ್ ತಿಂಗಳಲ್ಲೇ ಯುವ ನಿಧಿ ಯೋಜನೆಯನ್ನೂ ಉದ್ಘಾಟಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ