ಕಾಂಗ್ರೆಸ್ ಪಾಲಿನ ರಣಬೇಟೆಗಾರ ಸಿದ್ದರಾಮಯ್ಯ
ಮೈಸೂರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಲೋಕ ತಂತ್ರ
ಕರ್ಮಭೂಮಿಯಲ್ಲಿ ಬಿಜೆಪಿ ಸೋಲಿಸಲು ಪ್ಲಾನ್
ಮೈಸೂರು: ಸಿಂಹ ರಾಜಕೀಯ ಪಂಜರ ಸೇರಿದ ಬಳಿಕ ಬಿಜೆಪಿಯಲ್ಲಿ ರಾಜ ದರ್ಬಾರ್ ಶುರುವಾಗಿದೆ. ಅರಮನೆ ನಗರಿಯನ್ನ ದಶಕದ ಬಳಿಕ ಗೆಲ್ಲಲೇಬೇಕು ಅಂತ ಕಾಂಗ್ರೆಸ್ ಪಣ ತಟ್ಟಿದೆ. ಅದ್ರಲ್ಲೂ ಸಿದ್ದರಾಮನ ಹುಂಡಿ ಸಿದ್ದರಾಮಯ್ಯ ರಾಜ್ಯದ ಸಿಂಹಾಸನ ಗದ್ದುಗೆಯಲ್ಲಿದ್ದಾಗಲೇ ಕೈತಪ್ಪಿದ್ದ ಮೈಸೂರು, ಈ ಬಾರಿ ಕೈ ತಪ್ಪದಂತೆ ಎಚ್ಚರಿಕೆ ಹೆಜ್ಜೆ ಇರಿಸಿದೆ. ಸ್ವತಃ ಸಿಎಂ ಸಹ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಇವತ್ತು ತವರು ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ರಣತಂತ್ರ ಸಿದ್ಧಪಡಿಸ್ತಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಮಹಾ ರಣಬೇಟೆಗಾರ. ಜನಕ್ಕೆ ಗ್ಯಾರಂಟಿ ಕೊಟ್ಟ ಅನ್ನರಾಮಯ್ಯ ರಾಜ್ಯದ ಹಣೆಬರಹವನ್ನೇ ಬದಲಿಸಿ ಬಿಸಾಡಿದ ರಣತಂತ್ರಗಾರ. ಕರ್ಮಭೂಮಿ ಮೈಸೂರಿನ ಕಣ ಕಣದಲ್ಲೂ ಸಿದ್ದರಾಮಯ್ಯ ಬೆರೆತು ಹೋಗಿದ್ದಾರೆ. ಈಗ ಅದೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಕಾಲಿಟ್ಟಿದ್ದಾಗಿದೆ, ಇನ್ನೇನಿದ್ರೂ ರಾಜಕೀಯ ಕ್ರಾಂತಿ ಅಷ್ಟೇ ಬಾಕಿ.
ತವರು ಮೈಸೂರು ಕ್ಷೇತ್ರ ಗೆಲ್ಲಲು ಅಖಾಡಕ್ಕಿಳಿದ ಜಗಜಟ್ಟಿ!
ಹೌದು, ಮೈಸೂರು-ಕೊಡಗು ಕಾಳಗ ಈ ಬಾರಿ ರಣರೋಚಕವಾಗಿರಲಿದೆ. ದಶಕದ ಬಳಿಕ ಮೈಸೂರು ಯುದ್ಧ ಗೆಲ್ಲಲೇಬೇಕು ಅಂತ ಛಲ ತೊಟ್ಟಿದ್ದಾರೆ ಛಲದಂಕ ಮಲ್ಲ ಸಿದ್ದರಾಮಯ್ಯ, ರಾಜ್ಯ ರಾಜಕೀಯದ ಮೇರು ಪರ್ವತ ಹತ್ತಿದ ಸಿದ್ದರಾಮಯ್ಯ, ಇದೇ ಮೈಸೂರು ರಾಜಕಾರಣವನ್ನೇ ಉಸಿರಾಡಿದವ್ರು. ಹೀಗಾಗಿ ಮೈಸೂರಿನ ಸೋಲು-ಗೆಲುವು ಸಿದ್ದರಾಮಯ್ಯ ಪ್ರತಿಷ್ಠೆ ಅವಲಂಬಿಸಿದೆ. ಈ ಪ್ರತಿಷ್ಠೆ ಅವಲಂಬನೆಯೇ ಇವತ್ತು ಸಿದ್ದರಾಮಯ್ಯರನ್ನ ಮೈಸೂರಿಗೆ ಕರೆತಂದಿದೆ.
ಲೋಕಸಭಾ ಮತಯುದ್ಧಕ್ಕೆ ಮುಹೂರ್ತವಿಟ್ಟ ಬಳಿಕ ಮೈಸೂರು ಕದನ ಕಣಕ್ಕೆ ಮೊದಲ ಸಲ ಸಿಎಂ ಸಿದ್ದರಾಮಯ್ಯ ರಂಗಪ್ರವೇಶ ಆಗಿದೆ. ತವರು ಜಿಲ್ಲೆಯಲ್ಲಿ ರಾಜಕೀಯ ಬಿಗಿ ಹಿಡಿತಕ್ಕೆ ಕಂಕಣ ತೊಟ್ಟ ಸಿದ್ದರಾಮಯ್ಯ, ತವರು ಜಿಲ್ಲೆ ಮೈಸೂರು, ಪಕ್ಕದ ಚಾಮರಾಜನಗರ ವಶಕ್ಕೆ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಅವಿಭಜಿತ ಮೈಸೂರು ಜಿಲ್ಲೆ ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಎದುರು ನಿಲ್ಲೋದು ಯಾರು..? ಕುಮಾರಸ್ವಾಮಿ ಸ್ಪರ್ಧೆ ಪಕ್ಕಾನಾ..?
ಇವತ್ತು ಚಾಮರಾಜನಗರ, ಮೈಸೂರು ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಪಕ್ಷದ ಪ್ರಮುಖರ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಎಲೆಕ್ಷನ್ ಕಾರ್ಯತಂತ್ರಗಳ ಚರ್ಚೆ ಆಗಿದೆ. ಮೈಸೂರು-ಕೊಡಗು ಅಭ್ಯರ್ಥಿಯಾದ ಎಂ.ಲಕ್ಷ್ಮಣ್ ಗೆಲ್ಲಿಸಲು ಲೋಕಲ್ ಲೀಡರ್ಸ್ಗೆ ಟಾಸ್ಕ್ ಕೊಟ್ಟಿದ್ದಾರೆ. ಇತ್ತ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನಿಲ್ ಬೋಸ್ ಹೆಸರು ಬಹುತೇಕ ಫೈನಲ್ ಆಗಿದೆ. ಹೀಗಾಗಿ 2 ಕ್ಷೇತ್ರದ ಗೆಲುವಿಗೆ ಪ್ಲಾನ್ ರೂಪಿಸಿದ್ದಾರೆ.
ಜನ ಬಯಸಿದ ಅಭ್ಯರ್ಥಿಗೆ ಕಾಂಗ್ರೆಸ್ನಿಂದ ಟಿಕೆಟ್!
ಹೌದು ಸಿದ್ದು ಮಾತಿನ ಆಟದಲ್ಲೇ ಬಿಜೆಪಿಗೆ ತಿವಿದಿದ್ದಾರೆ. ಜನ ಬಯಸಿದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಅಂತ ಹೇಳಿದ್ದಾರೆ. ಈ ಮೂಲಕ ಸಂಸದ ಪ್ರತಾಪ್ ಸಿಂಹ ಪರ ಜನರ ಪ್ರತಿಭಟನೆ, ಅಭಿಯಾನ ನಡೆದ್ರು ಬಿಜೆಪಿ ಟಿಕೆಟ್ ನಿರಾಕರಿಸಿದ್ದನ್ನ ಪರೋಕ್ಷವಾಗಿ ಪ್ರಸ್ತಾಪಿಸಿ ಟಾಂಗ್ ಕೊಟ್ರು. ಇನ್ನು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ನಾಳೆ ಘೋಷಣೆ ಆಗಲಿದೆ ಎಂದ್ರು.
ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಸಿದ್ದರಾಮಯ್ಯ, ಮೈಸೂರು, ಚಾಮರಾಜನಗರ ಕಣ ರಂಗೇರುವಂತೆ ಮಾಡಿದ್ದಾರೆ. ಒಟ್ಟಾರೆ, 40 ವರ್ಷಗಳ ಬಳಿಕ ಕಾಂಗ್ರೆಸ್ ಅಹಿಂದವನ್ನ ಪಕ್ಕಕ್ಕೆ ಸರಿಸಿ ಮೈಸೂರಲ್ಲಿ ಒಕ್ಕಲಿಗ ಅಸ್ತ್ರ ಹೂಡಿದೆ. ಅದರಲ್ಲೂ ರಾಜ ವರ್ಸಸ್ ಶ್ರೀಸಾಮಾನ್ಯ ದಾಳ ಉರುಳಿಸಿ, ದಶಕದ ಬಳಿಕ ಹಸ್ತ ಅರಳಿಸುವ ಸಂಕಲ್ಪ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ