ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!

author-image
Ganesh
Updated On
ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!
Advertisment
  • ಸಚಿವರು ಶಾಸಕರ ಸಭೆಯಿಂದ ಡಿಸಿಎಂ ಡಿಕೆಶಿ ಹೊರಗಿಟ್ಟು ಸಭೆ
  • ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾದ ಸಿಎಂ ಸಿದ್ದು ನಡೆ!
  • ಸಚಿವ ರಾಜಣ್ಣ, ಗುಬ್ಬಿ ವಾಸು ಮಧ್ಯೆ ಏರುಧ್ವನಿಯಲ್ಲಿ ವಾಗ್ವಾದ!

ನಿನ್ನೆ ರಾತ್ರಿ ತುಮಕೂರು ಶಾಸಕರು ಸಚಿವರ ಸಭೆ ನಡೆದಿದೆ. ಸಭೆಯಲ್ಲಿ ಗುಬ್ಬಿ ವಾಸು-ರಾಜಣ್ಣ ಕಿತ್ತಾಟ ಆಗಿದೆ. ಇದೇ ಸಭೆಗೆ ಬಂದು ಹೋದ ಡಿಸಿಎಂ ಡಿಕೆಶಿ, ಹೇಮಾವತಿ ಕೆನಾಲ್​ ಬಗ್ಗೆ ಮಾಹಿತಿ ನೀಡಿದ್ದಾರೆ. ಆಗಸ್ಟ್​​ 4 ರಂದು ರಾಹುಲ್​​​ ಆಗಮನದ ಬಗ್ಗೆ ಚರ್ಚೆ ಆಗಿದೆ.

ಇದನ್ನೂ ಓದಿ: ಆ ವಿಷ್ಯಕ್ಕಾಗಿ ಗಂಡನ ಜೀವ ತೆಗೆದ ಹೆಂಡತಿ.. ಪೊಲೀಸರ ಮುಂದೆ ಪತ್ನಿ ಹೇಳಿದ್ದು ಕೇಳಿದ್ರೆ ಶಾಕ್ ಆಗುತ್ತೆ!

ಸಚಿವರು, ಶಾಸಕರ ಜಟಾಪಟಿ!

ನಿನ್ನೆ ಸಂಜೆ ತುಮಕೂರಿನ ಶಾಸಕರ ಜೊತೆ ಸಿಎಂ ಸಭೆ ನಡೆಸಿದ್ರು.. ಈ ವೇಳೆ, ದಿಢೀರ್​​ ಆಗಿ ಹಾಲಿನ ಗದ್ದಲ ಕೋಲಾಹಲ ಸೃಷ್ಟಿಸಿ, ಜೋರು ಗಲಾಟೆ ನಡೆದು ಹೋಗಿದೆ. ಸಚಿವ ರಾಜಣ್ಣ ಜೊತೆ ಜಗಳಕ್ಕೆ ಬಿದ್ದ ಗುಬ್ಬಿ ಶಾಸಕ S.R.ಶ್ರೀನಿವಾಸ್​, ಏರುಧ್ವನಿಯಲ್ಲಿ ವಾಗ್ವಾದಕ್ಕಿಳಿದ್ರು. ತುಮಕೂರು ಹಾಲು ಒಕ್ಕೂಟಕ್ಕೆ ತಮ್ಮ ಪತ್ನಿಯನ್ನ ಅಧ್ಯಕ್ಷೆಯನ್ನಾಗಿ ಮಾಡಲು ಹೊರಟಿದ್ದ ಗುಬ್ಬಿ ವಾಸುಗೆ ಬಿಗ್​​​ ಶಾಕ್​​​ ನೀಡಿದ್ದ ರಾಜಣ್ಣ, ಪಾವಗಡ ಶಾಸಕ ವೆಂಕಟೇಶ್​ಗೆ ಸ್ಥಾನ ಸಿಗುವಂತೆ ನೋಡ್ಕೊಂಡಿದ್ರು. ಬಳಿಕ ನೀರಿನ ವಿಚಾರವಾಗಿ ರಾಜಣ್ಣ ವಿರುದ್ಧ ಕುಣಿಗಲ್ ಶಾಸಕ ರಂಗನಾಥ್ ಅಸಮಾಧಾನ ಹೊರ ಹಾಕಿದ್ರು. ಈ ನಡೆಯಿಂದ ಕೆಲ ಕ್ಷಣ ಭಾವುಕರಾದ ರಾಜಣ್ಣ, ಇದು ಅನಗತ್ಯ ಆರೋಪ ಅಂತ ಗರಂ ಆಗಿದ್ದಾರೆ. ಕೊನೆಗೆ ರಾಜಣ್ಣ, ಗುಬ್ಬಿ ವಾಸು ಹಾಗೂ ರಂಗನಾಥ್​ಗೆ ಕಿವಿಮಾತು ಹೇಳಿದ ಸಿಎಂ, ಒಂದೇ ಜಿಲ್ಲೆಯವರು ಒಟ್ಟಾಗಿ ಇರಬೇಕು, ಮನಸ್ತಾಪ ಬಿಡಿ ಅಂತ ಸಮಾಧಾನ ಮಾಡಿದ್ದಾರೆ..

ಇದನ್ನೂ ಓದಿ: ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

ನಿನ್ನೆ ಒಂದೇ ದಿನ 4 ಜಿಲ್ಲೆಗಳ ಸಚಿವರು, ಶಾಸಕರ ಸಭೆ ನಡೆಸಿರುವ ಸಿಎಂ, ಇವತ್ತು ಇಡೀ ದಿನ ಸರಣಿ ಸಭೆ ನಡೆಸಲಿದ್ದಾರೆ. ಇವತ್ತು ಹತ್ತು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಲಿರುವ ಸಿಎಂ, ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಆರಂಭವಾಗಲಿದೆ. ಬೆಳಗ್ಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಚಿವರು, ಶಾಸಕರ ಸಭೆ ನಡೆಯಲಿದೆ. ಸಂಜೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀಟಿಂಗ್​​​ ನಡೆಯಲಿದೆ.

ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾದ ಸಿಎಂ ಸಿದ್ದು ನಡೆ!

ಇದು ಸಿಎಂ ಸಿದ್ದರಾಮಯ್ಯರ ಮತ್ತೊಂದು ಮಾಸ್ಟರ್​​​ ಸ್ಟ್ರೋಕ್​​​.. ಐದು ವರ್ಷ ನಾನೇ ಸಿಎಂ ಅಂತ ಸಿದ್ದು ಹೇಳಿದ ಬಳಿಕ ಸಿಂಗಲ್​​ ಸಲಗದ ಹೆಜ್ಜೆ ಇರಿಸಿದ್ದಾರೆ. ಡಿಸಿಎಂಗೆ ಆಹ್ವಾನ ನೀಡದೇ ಸಭೆ ನಡೆಸ್ತಿರುವ ಸಿಎಂ ನಡೆ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಕುಮಾರ್.. ಮುಖ್ಯಮಂತ್ರಿಗಳಿಗೆ ಏನು ಅಧಿಕಾರ ಇದೆ. ಅದನ್ನು ಅವರು ಪ್ರಯೋಗ ಮಾಡಿಕೊಂಡು ಕೆಲವು ಸಮಸ್ಯೆಗಳನ್ನು ಕೇಳ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: 15 ಅಡಿ ಅಗಲ, 8 ಅಡಿ ಆಳ ಅಗೆದ್ರೂ ಸಿಗದ ಅಸ್ತಿಪಂಜರ.. ಇವತ್ತು ಮತ್ತೆ ಸಮಾಧಿ ರಹಸ್ಯಕ್ಕಾಗಿ ಹುಡುಕಾಟ..!

ಆಗಸ್ಟ್​ 11ರಿಂದ ರಾಜ್ಯದಲ್ಲಿ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್​ ಶಾಸಕರ ಅಸಮಾಧಾನವೇ ವಿಪಕ್ಷಗಳಿಗೆ ಅಸ್ತ್ರವಾಗಿದ್ದು, ಸಿದ್ದು ಎಚ್ಚೆತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment