ಸಿಎಲ್ಪಿ ಸಭೆ ಬಳಿಕ ಸಿಎಂ, ಡಿಸಿಎಂ ದೆಹಲಿಯಾತ್ರೆ
ಸಿಎಲ್ಪಿಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ಅಸಮಾಧಾನ
ಇಡೀ ಶಾಸಕಾಂಗ ಸಭೆ ಸಿದ್ದರಾಮಯ್ಯ ಬೆನ್ನಿಗೆ ಇದೆ
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಕೋರ್ಟ್ನಲ್ಲಿ ರಿಲೀಫ್ ಪಡೆದು ರಾಜ್ಯಪಾಲರ ಜೊತೆ ಸಿದ್ದರಾಮಯ್ಯ ಜಿದ್ದಿಗೆ ಬಿದ್ದಿದ್ದಾರೆ. ಮುಡಾದಲ್ಲಿ ತಮ್ಮನ್ನ ಜೈಲಿಗಟ್ಟಲು ಸಾಲುಗಟ್ಟಿ ನಿಂತ ಕಮಲ-ದಳ ನಾಯಕರಿಗೆ ಸಿದ್ದರಾಮಯ್ಯ ಶಾಕ್ ಕೊಡಲು ಮುಂದಾಗಿದ್ದಾರೆ. ತಮ್ಮ ಕಾಂಗ್ರೆಸ್ ಸೈನ್ಯವನ್ನೆಲ್ಲಾ ಒಟ್ಟುಗೂಡಿಸಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ. ಜೊತೆಗೆ ಹೈಕಮಾಂಡ್ ಮಟ್ಟದಲ್ಲೂ ಹೋರಾಟಕ್ಕೆ ರಣತಂತ್ರ ರಚಿಸಲು ದೆಹಲಿಯಾತ್ರೆ ಮಾಡಿದ್ದಾರೆ.
ಒಂದೇ ಏಟಿಗೆ ಹಲವು ಹಕ್ಕಿಗಳನ್ನ ಕೆಡವಿ ಬೀಳಿಸುವ ಕಲೆಗಾರಿಕೆಗೆ ಸಿಎಂ ಸಿದ್ದರಾಮಯ್ಯ ಕೈಹಾಕಿದ್ದಾರೆ. ಮುಡಾದಲ್ಲಿ ಹೋದ ಮಾನ, ಉಳಿದೆಡೆ ಉಳಿಸಿಕೊಳ್ಳಲು ಚಾಕಚಕ್ಯತೆ ಪ್ರದರ್ಶನ ಆಗ್ತಿದೆ. ಅಹಿಂದರಾಮಯ್ಯನ ಬತ್ತಳಿಕೆಯಿಂದ ಎಡೆಬಿಡದೇ ಬಾಣಗಳ ಸುರಿಮಳೆಯ ಆಗ್ತಿದ್ದು, ದೆಹಲಿ ಮಟ್ಟದಲ್ಲೂ ಹೋರಾಟಕ್ಕೆ ಸನ್ನದ್ಧರಾಗುತ್ತಿದ್ದಾರೆ.
ಇದನ್ನೂ ಓದಿ: ಸನ್ಸ್ಕ್ರೀನ್ ಹೆಚ್ಚು ಬಳಸಿದ್ರೆ ಕ್ಯಾನ್ಸರ್ ಗ್ಯಾರಂಟಿ; ಮಹಿಳೆಯರು ಓದಲೇಬೇಕಾದ ಸ್ಟೋರಿ!
ರಾಜ್ಯಪಾಲರ ವಿರುದ್ಧ ದೆಹಲಿ ಮಟ್ಟದಲ್ಲಿ ಹೋರಾಟ
ರಾಜ್ಯಪಾಲರ ವಿರುದ್ಧ ಸಮರ ಸಾರಿರೋ ಸಿದ್ದರಾಮಯ್ಯಗೆ ತಮ್ಮ ಪಕ್ಷದ ಎಲ್ಲಾ ಶಾಸಕರ ಸಾಥ್ ಸಿಕ್ಕಿದೆ. ನಿನ್ನೆ ಸಚಿವ ಸಂಪುಟ ಸಭೆಯ ಬಳಿಕ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಚಲ್ಲಿ ಒಗ್ಗಟ್ಟಿನ ಹೋರಾಟದ ತೀರ್ಮಾನವಾಗಿದೆ. ಈ ಸಭೆಯಲ್ಲಿ ಇಡೀ ಪ್ರಕರಣದ ಬೆಳವಣಿಗೆ ವಿವರಿಸಿದ ಸಿಎಂ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನ ಪ್ರತಿಪಕ್ಷಗಳು ಟಾರ್ಗೆಟ್ ಮಾಡ್ತೀವೆ ಅಂತ ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದಲ್ಲದೇ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲೋದಾಗಿ ಶಪಥ ಮಾಡಿದ್ದಾರೆ. ಇದೇ ನಿಟ್ಟಿನಲ್ಲಿ ಸಿಎಂ, ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಾತ್ರೆ ಮಾಡಿದ್ದಾರೆ. ದೆಹಲಿ ಮಟ್ಟದಲ್ಲಿ ರಾಜ್ಯಪಾಲರ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲು ಹೈ ನಾಯಕರ ಭೇಟಿ ಮಾಡಲಿದ್ದಾರೆ.
ಇದನ್ನೂ ಓದಿ: ‘ನನಗೆ ಕಾನೂನಿನ ಮೇಲೆ ನಂಬಿಕೆ ಇದೆ, ಆದಷ್ಟು ಬೇಗ ಬರ್ತೀನಿ’- ನಟ ದರ್ಶನ್
ಹೈಕಮಾಂಡ್ ಜೊತೆ ಚರ್ಚಿಸಿ ದೆಹಲಿಯಲ್ಲಿ ಹೋರಾಟ
ಸಿಎಲ್ಪಿಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ಎದೆಗುಂದಬೇಡಿ ಅಂತ ಸಿದ್ದರಾಮಯ್ಯಗೆ ಧೈರ್ಯ ಹೇಳಿದ್ದಾರೆ. ಎಂತಹ ಸಂದರ್ಭ ಎದುರಾದ್ರೂ ನಿಮ್ಮ ಜೊತೆ ಇದ್ದೇವೆ ಅಂತ ಅಭಯ ನೀಡಿದ ಶಾಸಕರು, ಈ ಶೀಘ್ರವೇ ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಿ ಎಂದು ಒತ್ತಾಯಿಸೋಣ. ರಾಷ್ಟ್ರಪತಿಗಳನ್ನ ಭೇಟಿ ಮಾಡೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಇಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ದೆಹಲಿಯಲ್ಲಿ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಲಿದ್ದಾರೆ.
ಇದನ್ನೂ ಓದಿ: ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು.. ಯಾರಿಗೂ ಸಾಲ ಕೊಡಬೇಡಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!
ದೆಹಲಿಯಲ್ಲಿ ಹೋರಾಟದ ಬಗ್ಗೆಯೂ ಡಿಕೆಶಿ ಮಾಹಿತಿ
ಶಾಸಕಾಂಗ ಪಕ್ಷದ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಇಡೀ ಶಾಸಕಾಂಗ ಸಭೆ ಸಿದ್ದರಾಮಯ್ಯರ ಬೆನ್ನಿಗೆ ನಿಂತಿದೆ ಅಂತ ತಿಳಿಸಿದ್ದಾರೆ. ಅಲ್ಲದೇ ದೆಹಲಿಯಲ್ಲಿ ಹೋರಾಟ ನಡೆಸುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ವಕೀಲೆ ವಾಸುಕಿ ಅನುಮಾನಾಸ್ಪದ ಸಾವು.. ಅಸಲಿಗೆ ಆಗಿದ್ದೇನು?
ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ
ಸಿಎಂ, ಡಿಸಿಎಂ ಡೆಲ್ಲಿಗೆ ಪ್ರಯಾಣ ಬೆಳೆಸಿದ್ದು. ಹೈಕಮಾಂಡ್ ಭೇಟಿ ಮಾಡಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ಮೂಲಕ ರಾಜ್ಯಪಾಲರ ವಿರುದ್ಧ ಮತ್ತೊಂದು ರೀತಿಯ ಸಮರಕ್ಕೆ ಹಸ್ತ ನಾಯಕರು ಅಣಿಯಾಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ