/newsfirstlive-kannada/media/post_attachments/wp-content/uploads/2024/11/Covid-prosecution-2.jpg)
ಕಮಲ ಪಡೆಯ ಮುಡಾ ಅಸ್ತ್ರಕ್ಕೆ. ಹಸ್ತಪಡೆ ಕೋವಿಡ್​​ ಅಸ್ತ್ರ ಪ್ರಯೋಗಿಸಿದೆ. ಕೋವಿಡ್ ಸಮಯದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ನ್ಯಾಯಮೂರ್ತಿ ಮೈಕಲ್ ಡಿ ಕುನ್ನಾ ವರದಿ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
2020 ಏಪ್ರಿಲ್‍ನಲ್ಲಿ ಚೀನಾದ ಎರಡು ಕಂಪನಿಗಳಿಂದ ಪಿಪಿಇ ಕಿಟ್ ಖರೀದಿಸುವಲ್ಲಿ ನಿಯಮ ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಲಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಈ ಅವ್ಯವಹಾರವೇ ಈಗ ಕಾಂಗ್ರೆಸ್ ಸರ್ಕಾರದ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಕೊರೊನಾ ಹಗರಣ ಸಂಬಂಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ತಯಾರಿ ಮಾಡಿಕೊಂಡಿದೆ.
/newsfirstlive-kannada/media/post_attachments/wp-content/uploads/2024/11/Covid-prosecution-3.jpg)
‘ಸುಳ್ಳು ಆರೋಪ ಮಾಡ್ತಿದ್ದಾರೆ’ ಬಿ.ವೈ ರಾಘವೇಂದ್ರ, ಸಂಸದ
ನಮ್ಮ ಸರ್ಕಾರ ಇದ್ದಾಗ ಯಶಸ್ವಿಯಾಗಿ ಕೋವಿಡ್​​ ಮಹಾಮಾರಿಯನ್ನು ನಿರ್ವಹಿಸಿತ್ತು. ಜನರ ಜೊತೆಗೆ ನಿಂತುಕೊಂಡು ಜನರ ಜೀವವನ್ನು ಉಳಿಸುವಂತ ಕೆಲಸ ಮಾಡಿತ್ತು. ಈವಾಗ ರಾಜಕಾರಣಕ್ಕೊಸ್ಕರ ಅವರ ಮೇಲೆ ಬಂದಂತ ಹಗರಣವನ್ನು ಮುಚ್ಚಿಕೊಳ್ಳಲು, ನಿನ್ನ ಹಗರಣವನ್ನ ನಾನು ಮುಚ್ಚಿಕೊಳ್ಳುತ್ತೇನೆ ನನ್ನ ಹಗರಣವನ್ನ ನೀನು ಮುಚ್ಚಿಕೊ ಎನ್ನುವ ನಿಟ್ಟಿನಲ್ಲಿ ಸಿಎಂ ಡಿಸಿಎಂ ಒಬ್ಬರಿಗೊಬ್ಬರು ಶಾಮೀಲಾಗಿದ್ದಾರೆ ಎಂದು ಬಿ.ವೈ ರಾಘವೇಂದ್ರ ಕುಟುಕಿದ್ದಾರೆ.
ಇನ್ನೂ ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ ಸಿದ್ದರಾಮಯ್ಯ ತಾವು ಉಳಿದುಕೊಳ್ಳಲು ಯಾವೆಲ್ಲ ಕಳ್ಳ ದಾರಿ ಇದೆ, ಆ ಕಳ್ಳ ದಾರಿಯನ್ನು ಹುಡುಕುತ್ತಿದ್ದೀರಿ ಅಂತ ಮಾಜಿ ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ:ವಕ್ಫ್ ವಿವಾದ ಬಗೆಹರಿಸಲು ತಾವೇ ಅಖಾಡಕ್ಕೆ ಇಳಿದ ಸಿಎಂ ; ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯಲು ಸೂಚನೆ
/newsfirstlive-kannada/media/post_attachments/wp-content/uploads/2024/11/Covid-prosecution-1.jpg)
ಈ ಮಾತುಗಳಿಗೆ ತಿರುಗೇಟು ಕೊಡೋ ರೀತಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿ ವಾಗ್ಯುದ್ಧ ಮುಂದುವರೆಸಿದ್ದಾರೆ. ನಮ್ಮ ದೇಶದಲ್ಲಿರುವ ಕಂಪೆನಿಗಳು ಪಿಪಿಇ ಕಿಟ್​ಗಳನ್ನು 200 ರಿಂದ 300 ರೂಪಾಯಿ ದರದಲ್ಲಿ ಮಾರಾಟ ಮಾಡಲು ಸಿದ್ಧ ಇರುವಾಗ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಸೇರಿಕೊಂಡು ಚೀನಾದ ಕಂಪೆನಿಯಿಂದ ರೂ.2,000ಕ್ಕೆ ಒಂದರಂತೆ ಪಿಪಿಇ ಕಿಟ್​​ಗಳನ್ನು ಖರೀದಿ ಮಾಡಿರುವುದನ್ನು ದಾಖಲೆ ಸಹಿತ ಕೊರೊನಾ ಕಾಲದಲ್ಲಿಯೇ ನಾವು ಹೇಳಿದ್ದೆವು
ಇಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧವೂ ಕಿಡಿಕಾರಿದ್ದು, ಮಾಧ್ಯಮ ಪ್ರಕಟಣೆಯನ್ನ ಹೊರಡಿಸಿದ್ದಾರೆ. ಒಟ್ಟಾರೆ, ಹಸ್ತದ ವಿರುದ್ಧ ಸರಣಿ ಆರೋಪಗಳನ್ನ ಮಾಡ್ತಿದ್ದ ಬಿಜೆಪಿ ಮೇಲೆ ಕಾಂಗ್ರೆಸ್ ಕೋವಿಡ್​​ ಬಾಣ ಬಿಟ್ಟಿದೆ.. ಇದಕ್ಕೆ ಬಿಜೆಪಿ ಯಾವ ರೀತಿ ಪ್ರತಿದಾಳಿ ನಡೆಸುತ್ತೋ ಕಾದುನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us