/newsfirstlive-kannada/media/post_attachments/wp-content/uploads/2025/03/SIDDU-BUDGET.jpg)
ಬೆಂಗಳೂರು: 2025-26ನೇ ಸಾಲಿನ ಕರ್ನಾಟಕ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿದ್ದು ಇದು ಅವರ 16ನೇ ಬಜೆಟ್ ಆಗಿದೆ. ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಹೆಚ್ಚು ಬಜೆಟ್ ಮಂಡನೆ ಮಾಡಿದವರಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಆದರೆ ಈ ಬಾರಿ ಇನ್ನು ಹೆಚ್ಚಿನ ಮೊತ್ತ ಹೊಂದಿದ ಬಜೆಟ್ ಮಂಡಿಸುತ್ತಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯರ ಬಜೆಟ್ ಕುರಿತು ಜನರು ಕೂಡ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
ಮುಂಗಡ ಪತ್ರದ ಗಾತ್ರವು 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿದ್ದಾರೆ. ಹೊಸ ಹೊಸ ಯೋಜನೆಗಳನ್ನು, ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು, ಕಾಮಗಾರಿ ಘೋಷಣೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 2025ರ ಬಜೆಟ್ ಅನ್ನು, ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ಕರ್ನಾಟಕ ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎನ್ನುವಂತ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಭಾಷಣದ ಹೈಲೈಟ್ಸ್
- ಬಜೆಟ್ ಮಂಡನೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ
- 2025-26ನೇ ಸಾಲಿನ ಬಜೆಟ್ ಗಾತ್ರ- ₹4,09,549 ಲಕ್ಷ ಕೋಟಿ
- 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ
- 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ
- 7 ಕೋಟಿ ಜನರ ಬದುಕಿನ ಭರವಸೆಯ ಉಸಿರು ಬಜೆಟ್
- ಕುವೆಂಪು ಬರೆದ ಪದ್ಯ ಹೇಳಿದ ಸಿಎಂ ಸಿದ್ದರಾಮಯ್ಯ
- ರಾಜ್ಯದ ಪ್ರತಿ ಪ್ರಜೆಯ ಕನಸು ಸಾಕಾರಗೊಳಿಸೋ, ನಾಳೆಯ ಭರವಸೆ
- ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮಹತ್ವದ ಯೋಜನೆಗಳು ಜಾರಿ
- 1 ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಸರ್ಕಾರದ ಫಲಾನುಭವಿಗಳಿಗೆ ನೀಡಲಾಗಿದೆ
- ಕಲ್ಯಾಣ ಇಲಾಖೆಗಳ ಮೂಲಕ ಅಸಹಾಕರ ಅಭಿವೃದ್ಧಿಗೆ ಹೊತ್ತು ನೀಡಲಾಗಿದೆ
- ಇಂಧನ ಇಲಾಖೆಗೆ 26,896 ಕೋಟಿ ರೂಪಾಯಿ ಅನುದಾನ
- ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ 3,977 ಕೋಟಿ ರೂಪಾಯಿ
- ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ರೂ. ಅನುದಾನ
- ಬಿಸಿಯೂಟ ಕಾರ್ಯಕರ್ತೆಯರ ಗೌರವಧನವು 1000 ರೂಪಾಯಿ ಹೆಚ್ಚಳ
- ನೀರಾವರಿ ಇಲಾಖೆಗೆ 22,181 ಕೋಟಿ ರೂಪಾಯಿ ನೀಡಲಾಗಿದೆ
- ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಗಳಿಗೆ ವಿಸ್ತರಣೆ
- ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣ ವಿತರಣೆ ಮಾಡಲು 1,500 ಕೋಟಿ ರೂಪಾಯಿ
- ಗ್ಯಾರಂಟಿ ಕೊಡುಗೆಗಳು ಅಲ್ಲ, ಅವುಗಳೆಲ್ಲಾ ಸಾಮಾಜಿಕ ತತ್ವದ ಹೂಡಿಕೆ
- ಕೃಷಿ ಯಾಂತ್ರಿಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ನೆರವು
- ಬೆಂಗಳೂರಿನ ಅನುದಾನ 7 ಸಾವಿರ ಕೋಟಿ ರೂಪಾಯಿಗೆ ಏರಿಕೆ
- ಸಿಲಿಕಾನ್ ಸಿಟಿಯಲ್ಲಿ ವಿಶೇಷ ಪರ್ಪಲ್ ವಾಹನಗಳ ಸ್ಥಾಪನೆ
- ಯೋಜನೆಗಳ ಅನುಷ್ಠಾನ ಮಾಡಲು ಸಂಸ್ಥೆಯನ್ನು ಸ್ಥಾಪನೆ ಮಾಡಲಾಗುವುದು
- ಉದ್ಯಾನ ನಗರಿ ಬೆಂಗಳೂರಿನ ಟನಲ್ ಯೋಜನೆಗೆ 40 ಸಾವಿರ ಕೋಟಿ ರೂಪಾಯಿ
- 19 ಸಾವಿರ ಕೋಟಿ ರೂಪಾಯಿ ಶೂರಿಟಿ ನೀಡಲಿರುವ ರಾಜ್ಯ ಸರ್ಕಾರ
- ಕರ್ನಾಟಕವನ್ನು ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವನ್ನಾಗಿ ಮಾಡಲಾಗುವುದು
- ರೈತರ ಆದಾಯ ಪೌಷ್ಟಿಕ ಭದ್ರತೆ ಸುಧಾರಿಸಲು 88 ಕೋಟಿ ರೂ.
- ಕೃಷಿ ವಲಯದ ಅಭಿವೃದ್ಧಿಗೆ 51,339 ಕೋಟಿ ರೂಪಾಯಿ ಮೀಸಲು
- ಕೃಷಿ ಭಾಗ್ಯ ಯೋಜನೆ- 3 ಲಕ್ಷಕ್ಕಿಂತ ಹೆಚ್ಚು ಕೃಷಿ ಹೊಂಡ ನಿರ್ಮಾಣ
- ರಸಗೊಬ್ಬರ, ಬಿತ್ತನೆ ಬೀಜಗಳ ಗುಣಮಟ್ಟ ಪರೀಕ್ಷೆಗೆ 58 ಪ್ರಯೋಗಾಲಯ
- ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,955 ಕೋಟಿ ರೂಪಾಯಿ
- ಮಹಿಳೆಯರಿಗೆ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ
- ಲೋಕೋಪಯೋಗಿ ಇಲಾಖೆಗೆ 11, 841 ಕೋಟಿ ಅನುದಾನ
- ಮಲ್ಟಿಪ್ಲೆಕ್ಸ್ಗಳಿಗೆ ಏಕರೂಪ ದರ ನಿಗದಿ ಮಾಡಿದ ಸರ್ಕಾರ
- ಸಿನಿಮಾ ಟಿಕೆಟ್ ದರ 200 ರೂಪಾಯಿ ನಿಗದಿ ಮಾಡಿದ ಸರ್ಕಾರ
- ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ 25 ಕೋಟಿ ಅನುದಾನ
- ಪ್ರಸಕ್ತ ಸಾಲಿನಲ್ಲಿ ಕೃಷಿ ವಿವಿಯ ತರಗತಿಗಳು ಆರಂಭ
- ಅಬಕಾರಿ ಇಲಾಖೆಯಿಂದ 40 ಸಾವಿರ ಕೋಟಿ ರೂ. ಟಾರ್ಗೆಟ್
- ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅನುದಾನ ಘೋಷಣೆ
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ