ಒಳ ಮೀಸಲಾತಿಗಾಗಿ ಮನೆಮನೆ ಗಣತಿ, ಒಟ್ಟು 3 ಹಂತದಲ್ಲಿ ಸರ್ವೇ! CM ಸುದ್ದಿಗೋಷ್ಟಿಯ ಹೈಲೈಟ್ಸ್..!

author-image
Ganesh
Updated On
ಒಳ ಮೀಸಲಾತಿಗಾಗಿ ಮನೆಮನೆ ಗಣತಿ, ಒಟ್ಟು 3 ಹಂತದಲ್ಲಿ ಸರ್ವೇ! CM ಸುದ್ದಿಗೋಷ್ಟಿಯ ಹೈಲೈಟ್ಸ್..!
Advertisment
  • ಒಳಮೀಸಲಾತಿಗಾಗಿ ಇಂದಿನಿಂದ ರಾಜ್ಯದಲ್ಲಿ ಮನೆ‌ಮನೆ ಗಣತಿ
  • ನಾಗಮೋಹನ್ ದಾಸ್ ಆಯೋಗ ನಡೆಸುತ್ತಿರುವ ಸಮೀಕ್ಷೆ
  • ವಿಧಾನಸೌಧದಲ್ಲಿ ಸಿದ್ದರಾಮಯ್ಯರಿಂದ ಮಹತ್ವದ ಸುದ್ದಿಗೋಷ್ಟಿ

ಬೆಂಗಳೂರು: ಪರಿಶಿಷ್ಠ ಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಇಂದಿನಿಂದ ರಾಜ್ಯದಲ್ಲಿ ಮನೆ‌ಮನೆ ಗಣತಿ ಆರಂಭವಾಗಿದೆ. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ನೇತೃತ್ವದಲ್ಲಿ ಆ್ಯಪ್ ಮೂಲಕ ಪರಿಶಿಷ್ಟ ಸಮುದಾಯದ ಜನರ ವಿವರ ಸಂಗ್ರಹ ಕಾರ್ಯ ಆರಂಭವಾಗಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಸಿದ್ದರಾಮಯ್ಯ ನೀಡಿದ ಪ್ರಮುಖ ವಿಚಾರಗಳು

  • ಇಂದಿನಿಂದ ಮೇ.17ರವರೆಗೆ ಪರಿಶಿಷ್ಟ ಜಾತಿಗಳ ಗಣತಿ ನಡೆಯುತ್ತಿದೆ. ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿದ್ದೇವೆ. ಅವರಿಗೆ ಕೊಟ್ಟಿರುವ ಜವಾಬ್ದಾರಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ನಿಖಿರವಾದ ವರದಿ ನೀಡಬೇಕು.
  • ಆರ್ಟಿಕಲ್ 341ರಲ್ಲಿ 101 ಜಾತಿಗಳನ್ನು ಸೇರಿಸಲಾಗಿದೆ. ಕೊರಮ, ಕೊರಚ, ಭೋವಿ ಸೇರಿದಂತೆ ಇತರ ಒಳಪಂಗಡಗಳು ಸೇರಿದಂತೆ ಅನೇಕ ಜಾತಿಗಳು ಬರುತ್ತೆ. ಒಟ್ಟು 101 ಜಾತಿಗಳಲ್ಲಿ ಎಂಪರಿಕಲ್ ಡಾಟಾ ಇದೆ. ಸದಾಶಿವ ಆಯೋಗ ವರದಿ ಕೊಟ್ಟಾಗ 2011ರ ಜನಗಣತಿ ಆಧಾರದಲ್ಲಿ ಈ ಸಂಖ್ಯೆಯನ್ನು ಗುರುತಿಸಲಾಗಿದೆ.
  • ಕಳೆದ 1-08- 2024ರಲ್ಲಿ ಸುಪ್ರೀಂ ಕೋರ್ಟ್ ಒಂದು ತೀರ್ಪು ಕೊಡುತ್ತದೆ. ಸಂವಿಧಾನದಲ್ಲಿ ಒಳಮೀಸಲಾತಿ ಮಾಡಲು ಅಧಿಕಾರ ಇದೆ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್​ ಅಧಿಕಾರ ನೀಡಿದೆ. ಆ ನಂತರ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನ ರಚಿಸಲಾಗಿತ್ತು. ಅವರು ಮಧ್ಯಂತರ ವರದಿ ನೀಡಿದ್ದಾರೆ.
  • ಎಂಪೆರಿಕಲ್‌ ಡಾಟಾ ಇರಲೇಬೇಕೆಂದು ಹೇಳಿದ್ದಾರೆ. ಆದಿದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂದ್ರ ಅಂತಾ ಬರೆದುಕೊಂಡು ಹೋಗಿರುತ್ತಾರೆ. ಇವರು ನಿರ್ಧಿಷ್ಟವಾಗಿ ಎಡ ದಲಿತನೋ ಬಲನೋ ಅಂತಾ ಗೊತ್ತಾಗೋದೇ ಇಲ್ಲ. ಕೆಲ‌ ಭಾಗದಲ್ಲಿ ಎಡಗೈ ಅಂತಾ ಬರೆಸಿರುತ್ತಾರೆ. ಇವರೇ ಮತ್ತೊಂದು ಕಡೆ ಬಲಗೈ ಅಂತಾ ಬರೆಸಿದ್ದಾರೆ. 101 ಜಾತಿಗಳಲ್ಲಿ ಒಳಮೀಸಲು ಕೊಡಬೇಕಾದರೆ ನಿರ್ಧಿಷ್ಟವಾದ ಅಂಕಿ ಅಂಶಗಳ ಅಗತ್ಯ ಇದೆ
  • ಸಮೀಕ್ಷೆಗೆ ನಾಗಮೋಹನ್ ದಾಸ್ ಆಯೋಗ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಎಂಪೆರಿಕಲ್ ಡಾಟಾವನ್ನ ಮನೆಮನೆಗೆ ಹೋಗಿ ವಿವರ ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ಸುಮಾರು 65 ಸಾವಿರ ಟೀಚರ್​ಗಳನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದಾರೆ
  • 10-12 ಜನರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮೊದಲ ಹಂತದಲ್ಲಿ 17-05-2025ರವರೆಗೆ ನಡೆಯಲಿದೆ. ಇದು ಮನೆ ಮನೆಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ಆಗಿದೆ.
  • ಎರಡನೇ ಹಂತದಲ್ಲಿ 10-05-2025ರಿಂದ 21-05-2025 ವರೆಗೆ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
  • ಮೂರನೇ ಹಂತದಲ್ಲಿ 19 ರಿಂದ 23 ವರೆಗೆ ಆನ್ ಲೈನ್ ಮೂಲಕವೂ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು. ಒಟ್ಟು ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
  • ಕಾಂತರಾಜ್ ವರದಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ, ಇದಕ್ಕೆ ಎಡ, ಬಲ ಎಲ್ಲರ ಒಮ್ಮತವೂ ಇದೆ.

ಇದನ್ನೂ ಓದಿ: ಕೊಹ್ಲಿಯ ಅದೊಂದು ನಿರ್ಧಾರದಿಂದ ಟೀಂ ಇಂಡಿಯಾಗೆ ಬಿಗ್ ಲಾಸ್.. ತಪ್ಪು ಮಾಡಿಬಿಟ್ರಾ ವಿರಾಟ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment