/newsfirstlive-kannada/media/post_attachments/wp-content/uploads/2024/07/Darshan_Siddaramaiah.jpg)
ಬೆಂಗಳೂರು: ಕೊಲೆ ಕೇಸ್​ವೊಂದರಲ್ಲಿ ನಟ ದರ್ಶನ್​​ ಅರೆಸ್ಟ್​ ಆಗಿ ಬರೋಬ್ಬರಿ ಒಂದು ತಿಂಗಳು. ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್​ ಜೈಲು ಸೇರಿದ್ದಾರೆ. ಈ ಬಗ್ಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ರಿಯಾಕ್ಟ್​ ಮಾಡಿದ್ದಾರೆ.
ನ್ಯೂಸ್​ಫಸ್ಟ್​ಗೆ ನೀಡಿದ ಎಕ್ಸ್​ಕ್ಲೂಸಿವ್​​ ಸಂದರ್ಶನದಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ ಅವರು, ನಟ ದರ್ಶನ್​​ ಕೊಲೆ ಕೇಸಲ್ಲಿ ಪೊಲೀಸ್ರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಕೇವಲ ದರ್ಶನ್​ ಮಾತ್ರವಲ್ಲ ರೇವಣ್ಣ ಫ್ಯಾಮಿಲಿ ಕೇಸಲ್ಲೂ ಯಾರಿಂದಲೂ ಒತ್ತಡ ಕೇಳಿ ಬಂದಿರಲಿಲ್ಲ ಎಂದರು.
ಪೊಲೀಸರ ಮೇಲೆ ಸಚಿವರಾಗಲಿ, ಶಾಸಕರಾಗಲಿ, ಕಾರ್ಯಕರ್ತರಾಗಲಿ, ವಿಪಕ್ಷ ನಾಯಕರಾಗಲಿ ಯಾರು ಒತ್ತಡ ಹಾಕಿಲ್ಲ. ನಾವು ಪೊಲೀಸರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದೇವೆ. ಪೊಲೀಸರ ತನಿಖೆಗೆ ಯಾವುದೇ ಅಡ್ಡಿ ಮಾಡಿಲ್ಲ. ಸರ್ಕಾರ ಯಾವುದೇ ಕೇಸಲ್ಲೂ ಹಸ್ತಕ್ಷೇಪ ಮಾಡಲ್ಲ. ಯಾರು ತಪ್ಪು ಮಾಡಿದ್ರೂ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದರು.
ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್.. ಇನ್ನೊಂದು ವಾರದಲ್ಲಿ ದರ್ಶನ್ ಗ್ಯಾಂಗ್ ಹಣೆಬರಹ ನಿರ್ಧಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us