newsfirstkannada.com

ಹಣೆಗೆ ಕುಂಕುಮ ಬೇಡ ಅಂದ್ರಾ ಸಿಎಂ? ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಬ್ರಹ್ಮಾಸ್ತ್ರ! ಅಸಲಿಗೆ ಆಗಿದ್ದೇನು?

Share :

Published February 3, 2024 at 9:00pm

Update February 3, 2024 at 10:01pm

  ಮಂಗಳಾರತಿ ಬಳಿಕ ಕುಂಕುಮ ಧಾರಣೆಗೆ ಹೇಳಿದ ಅರ್ಚಕ!

  ಪೂಜೆಗೆ ಬಂದು ಮಂಗಳಾರತಿ ಸ್ವೀಕರಿಸಿದ್ದ ಸಿಎಂ ಸಿದ್ದರಾಮಯ್ಯ

  ಕುಂಕುಮ ಹಚ್ಚಲು ನಿರಾಕರಣೆ ಮಾಡಿದ್ರಾ ಸಿಎಂ ಸಿದ್ದರಾಮಯ್ಯ?

ಸಿದ್ದರಾಮಯ್ಯಗೂ ಸಂಪ್ರದಾಯ ಆಚರಣೆಗಳಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ಹಲವು ಬಾರಿ ಸನಾತನ ಜೊತೆ ಅವರ ಸಂಘರ್ಷ ಸೂಕ್ಷ್ಮವಾಗಿ ಪ್ರದರ್ಶನವಾಗಿದ್ದಿದೆ. ಆದ್ರೆ, ಅವರ ಈ ಆಚರಣೆ ದ್ವಂದ್ವ ಮತ್ತು ಗೊಂದಲದಿಂದ ಕೂಡಿದೆ. ಒಮ್ಮೊಮ್ಮೆ ಹಣೆಗೆ ಉದ್ದನಾಮ ಧರಿಸಿದ್ರೆ, ಇನ್ನೊಮ್ಮೆ ನಯವಾಗಿ ರಿಜೆಕ್ಟ್​​ ಮಾಡಿದ್ದಾರೆ. ಈಗ ಅಂಥದ್ದೆ ವಿವಾದ ಸಿದ್ದು ಸುತ್ತಾ ಮತ್ತೆ ಸುತ್ತಿಕೊಂಡಿದೆ.

ಕುಂಕುಮ ಧರಿಸಲು ನಿರಾಕರಿಸಿ ಮತ್ತೊಮ್ಮೆ ಸುದ್ದಿಯಾದ ಸಿದ್ದು

ಕೇವಲ ನಾಲ್ಕು ಸೆಕೆಂಡ್​​ನ ಈ ದೃಶ್ಯ ಸಿದ್ದರಾಮಯ್ಯರ ವಿರುದ್ಧ ಕೇಸರಿ ಸೇನೆಯನ್ನ ಕೆರಳುವಂತೆ ಮಾಡಿದೆ. ಹಂಪಿ ಉತ್ಸವಕ್ಕೆ ಚಾಲನೆ ನೀಡಲು ವಿಜಯನಗರಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಕಟ್ಟಡವೊಂದರ ಲೋಕಾರ್ಪಣೆ ವೇಳೆ ಕುಂಕುಮ ಧಾರಣೆಯನ್ನ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಕುಂಕುಮ ಧಾರಣೆ ನಿರಾಕರಣೆ ಸಿಎಂ ಸಿದ್ದರಾಮಯ್ಯರನ್ನ ಮತ್ತೊಮ್ಮೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಬಿಜೆಪಿಗೆ ಹೊಸ ಅಸ್ತ್ರ ಕೊಟ್ಟಿದೆ.

ತಟ್ಟೆಗೆ ಕಾಸು ಹಾಕಿ, ಕುಂಕುಮ ಧರಿಸಲು ನಿರಾಕರಿಸಿದ ಸಿಎಂ

ಕಟ್ಟಡದ ವಾಸ್ತುಶಾಂತಿಗಾಗಿ ಆಯೋಜನೆ ಆಗಿದ್ದ ಪೂಜೆಗೆ ಬಂದ ಸಿಎಂ ಮತ್ತು ಸಚಿವರು, ಮೊದಲು ದೂರದಲ್ಲೇ ತಮ್ಮ ಚಪ್ಪಲಿ, ಶೂ ಬಿಟ್ಟು ಬಂದು ಪೂಜೆಗೆ ಬಂದ್ರು. ಅಲ್ಲಿವರೆಗೆ ಎಲ್ಲವೂ ಸರಿಯಿತ್ತು. ಆರತಿ ತಟ್ಟೆಯಿಂದ ಮಂಗಳಾರತಿ ಸ್ವೀಕರಿಸಿದ ಸಿಎಂ, ತಟ್ಟೆಗೆ ಕಾಸು ಹಾಕಿದ್ರು. ಆ ಬಳಿಕ ಸಿಎಂ ಹಣೆಗೆ ಕುಂಕುಮ ಧರಿಸಲು ಅರ್ಚಕರು ಕೇಳಿದ್ದಾರೆ. ಆಗ ಸನ್ನೆಯಲ್ಲೇ ಸಿಎಂ ನಿರಾಕರಿಸಿದ್ದಾರೆ.

ಕುಂಕುಮಧಾರಣೆ ನಿರಾಕರಿಸಿದ ಬೆನ್ನಲ್ಲೆ ಬಿಜೆಪಿ ಕಿಡಿ!

ಹೀಗೆ ಕುಂಕುಮ ಧಾರಣೆಗೆ ನಿರಾಕರಿಸಿದ ಬೆನ್ನಲ್ಲೆ ವಿಪಕ್ಷ ನಾಯಕ ಅಶೋಕ್‌ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದಾನೆ. ಕೇಸರಿ ಪೇಟ ಕಿತ್ತು ಬಿಸಾಕ್ತಾರೆ. ಸಿದ್ದರಾಮಯ್ಯ ಹೃದಯದ ತುಂಬಾ ಟಿಪ್ಪು ಇದ್ದಾನೆ ಅಂತ ವಾಗ್ದಾಳಿ ನಡೆಸಿದ್ರು. ಅವರು ನಾಮ ಇಡದಿದ್ರೆ ತೊಂದರೆ ಇಲ್ಲ. ಮೊದ ಮೊದಲು ಹೃದಯದಲ್ಲಿ ರಾಮನ ಇಟ್ಕೊಳ್ಳಲಿ ಅಂತ ಕುಟುಕಿದ್ದಾರೆ.

ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದಾನೆ. ಕೇಸರಿ ಪೇಟ ಕಿತ್ತು ಬಿಸಾಕ್ತಾರೆ. ಸಿದ್ದರಾಮಯ್ಯ ಹೃದಯದ ತುಂಬಾ ಟಿಪ್ಪು ಇದಾನೆ. ಅವರು ನಾಮ ಇಡದಿದ್ರೆ ಏನೂ ತೊಂದರೆ ಇಲ್ಲ. ಮೊದಲು ಹೃದಯದಲ್ಲಿ ರಾಮನ ಇಟ್ಟುಕೊಳ್ಳಲಿ.

– ಆರ್​.ಅಶೋಕ್​​, ವಿಪಕ್ಷ ನಾಯಕ

ಸಿಎಂ ಸಿದ್ದರಾಮಯ್ಯ ಪರ ವಕಾಲತ್ತಿಗೆ ಬಂದ ಡಿಸಿಎಂ ಡಿಕೆ!

ಈ ವಿವಾದಕ್ಕೆ ಸಂಂಧಿಸಿದಂತೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ರು.. ಸಿಎಂ ಸಿದ್ದರಾಮಯ್ಯ ಯಾವತ್ತೂ ಹಣೆಗೆ ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದವರಲ್ಲ. ಅವರೇನು ದೊಡ್ಡದಾಗಿ ಹೆಣ್ಣು ಮಕ್ಕಳ ರೀತಿ ಕುಂಕುಮ ಹಚ್ಕೊಳ್ಳಬೇಕಾ ಅಂತ ಪ್ರಶ್ನಿಸಿದ್ದಾರೆ. ಕೆಲವರಿಗೆ ಅಲರ್ಜಿ, ಏನೇನೋ ಇರುತ್ತೆ ಅಂತ ತಮಗಿರುವ ಸುಗಂಧರಾಜ ಅಲರ್ಜಿ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಾರೆ, ಈ ಹಿಂದೆ ನಾಮದ ಬಗ್ಗೆ ಮಾತ್ನಾಡಿ ಸಿದ್ದರಾಮಯ್ಯ ವಿವಾದ ಸೃಷ್ಟಿಸಿಕೊಂಡಿದ್ರು. ಕೇಸರಿಶಾಲು ಬಗ್ಗೆಯೂ ಕ್ಯಾತೆ ಎತ್ತಿದ್ರು. ಆದ್ರೆ, ಕುಂಕುಮಧಾರಣೆ ಕುರಿತು ತೋರಿದ ನಿರ್ಲಕ್ಷ್ಯದಿಂದ ಸುಖಾಸುಮ್ಮನೆ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣೆಗೆ ಕುಂಕುಮ ಬೇಡ ಅಂದ್ರಾ ಸಿಎಂ? ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಬ್ರಹ್ಮಾಸ್ತ್ರ! ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/02/siddu-35.jpg

Load More