/newsfirstlive-kannada/media/post_attachments/wp-content/uploads/2024/11/SIDDARAMAIAH-3.jpg)
ಅನುದಾನ.. ನಿಧಿ.. ಒಂದು ರಾಜ್ಯದ ಅಭಿವೃದ್ಧಿಗೆ ಹಣ ಅತೀ ಅವಶ್ಯಕ. ಇದಕ್ಕಾಗಿ ಸರ್ಕಾರದ ಖಜಾನೆ ತುಂಬಿರಬೇಕು. ಆದ್ರೆ ಪಂಚ ಗ್ಯಾರಂಟಿಗಳಿಂದ ಸರ್ಕಾರದ ಬಳಿ ದುಡ್ಡಿಲ್ಲ ಅನ್ನೋ ಆರೋಪ ಕೇಳಿಬರುತ್ತಲೇ ಇದೆ. ಆದ್ರೆ ಇದಕ್ಕೆಲ್ಲಾ ಸಿಎಂ ಉತ್ತರ ಕೊಟ್ಟಿದ್ದಾರೆ. ಕೊನೆಗೂ ಶಾಸಕರಿಗೆ ಸಿದ್ದರಾಮಯ್ಯ ಅನುದಾನ ಬಿಡುಗಡೆ ಮಾಡಿದ್ದಾರೆ.
ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದ ಖಜಾನೆಯೇ ಖಾಲಿಯಾಗಿದೆ. ನಮ್ಮ ಕ್ಷೇತ್ರಗಳಿಗೆ ಬಿಡಿಗಾಸು ಅನುದಾನ ಬರುತ್ತಿಲ್ಲ. ನಮ್ಮ ಕ್ಷೇತ್ರದ ಜನರ ಮುಂದೆ ಓಡಾಡೋಕೂ ಆಗ್ತಿಲ್ಲ. ಇದು ವಿಪಕ್ಷದ ಶಾಸಕರು ಒಂದು ವರ್ಷದಿಂದ ಹೇಳಿಕೊಂಡೇ ಬರುತ್ತಿದ್ದ ಮಾತುಗಳು. ಅಷ್ಟೇ ಏಕೆ ಖುದ್ದು ಕಾಂಗ್ರೆಸ್ ಶಾಸಕರೇ ಅನುದಾನದ ಬಗ್ಗೆ ಮಾತಾಡಿದ್ದರು. ಅಲ್ಲದೇ ಸದನದಲ್ಲೂ ಈ ಬಗ್ಗೆ ಕದನ ಏರ್ಪಟ್ಟಿತ್ತು. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಶಾಸಕರಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ರಾಜ್ಯದ 224 ಕ್ಷೇತ್ರಕ್ಕೆ ಅನುದಾನ ಬಿಡುಗಡೆಗೆ ಸಿಎಂ ಅಸ್ತು
ಒಟ್ಟು ₹2,240 ಕೋಟಿ ಅನುದಾನ ಬಿಡುಗಡೆಗೆ ಆದೇಶ
ರಾಜ್ಯದ 224 ಕ್ಷೇತ್ರಗಳಿಗೂ ಸಿಎಂ ಸಿದ್ದರಾಮಯ್ಯ ಅನುದಾನ ಬಿಡುಗಡೆಗೆ ಅಸ್ತು ಎಂದಿದ್ದಾರೆ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಮಾತ್ರವಲ್ಲದೇ ಎಲ್ಲ 224 ಶಾಸಕರಿಗೂ ಸಮಾನವಾಗಿ ಹಣ ರಿಲೀಸ್ ಮಾಡಿದ್ದಾರೆ.
₹2,240 ಕೋಟಿ ಅನುದಾನ!
ಒಟ್ಟು 2,240 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಅಭಿವೃದ್ಧಿಗೆ ಅನುದಾನ ಇಲ್ಲದೆ ಅಭಿವೃದ್ಧಿ ಶೂನ್ಯವಾಗಿದೆ ಅಂತ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಈಗ ವಿರೋಧ ಪಕ್ಷದ ಶಾಸಕರಿಗೂ ಸೇರಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಾಸಕರಿಗೆ ತಲಾ ₹10 ಕೋಟಿ ಅನುದಾನ ನೀಡಲು ತಾಕೀತು ಮಾಡಿದ್ದಾರೆ. ಬೇಸರಗೊಂಡ ಶಾಸಕರ ಸಮಾಧಾನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಡಿದೆದ್ರಾ ಸಿಎಂ ಆಪ್ತರು..? ಬಹಿರಂಗ ಹೇಳಿಕೆಗೆ ಬ್ರೇಕ್ ಹಾಕಲು ಪ್ಲಾನ್..!
ಇದಕ್ಕೂ ಮೊದಲು ಬಿಜೆಪಿ ಹಾಗೂ ಜೆಡಿಎಸ್ನ ಶಾಸಕರು ಸಿಎಂ ಸಿದ್ದರಾಮಯ್ಯಗೆ ಅನುದಾನದ ಕುರಿತು ಮನವಿ ಪತ್ರ ರವಾನಿಸಿದ್ದರು. ಶಾಸಕರಾಗಿ 1ವರ್ಷ 7ತಿಂಗಳು ಕಳೆದಿದ್ದು ಸರಿಯಾದ ಅನುದಾನ ಸಿಕ್ಕಿಲ್ಲ. ಒಟ್ಟು 100 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ ವಿಜಯೇಂದ್ರ, ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ, ಸಮೃದ್ಧಿ ಮಂಜುನಾಥ್ ಸೇರಿ ಹಲವರು ಸಿಎಂಗೆ ಪತ್ರ ಬರೆದಿದ್ದರು. ಈ ಬೆನ್ನಲ್ಲೇ ಅನುದಾನ ಬಿಡುಗಡೆಯಾಗಿದೆ. ಒಟ್ಟಾರೆ ಹಲವು ಸಮಯದಿಂದ ಎಲ್ಲಾ ಶಾಸಕರು ಕೇಳುತ್ತಿದ್ದ ಅನುದಾನವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ