newsfirstkannada.com

ಪ್ರೀತಿ ಮಾಡಿದ ಹುಡುಗಿಯನ್ನ ಇನ್ನೂ ಮರೆಯದ ಸಿಎಂ ಸಿದ್ದು; ಮೊದಲ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನು?

Share :

Published May 24, 2024 at 12:14pm

  ಸಿಎಂ ಸಿದ್ದರಾಮಯ್ಯ ಹಳೆ ಹುಡ್ಗಿನಾ ನೆನೆದು ಫುಲ್ ಫೀಲಿಂಗ್ ಆದ್ರು

  ಕಾಲೇಜಿನ ದಿನಗಳಲ್ಲಿನ ಪ್ರೀತಿ-ಪ್ರೇಮಾವನ್ನು ನೆನೆದ ಸಿದ್ದರಾಮಯ್ಯ

  ಸಿಎಂ ಮನದ ಪುಟದಲ್ಲಿ ಹುಡುಗಿಯ ಪ್ರೀತಿ ಇನ್ನು ಹಾಗೆ ಇದೆಯಾ.?

ಪ್ರೀತಿ ಅನ್ನೋ ಮಾಯೆ ಯಾರನ್ನ ಬಿಟ್ಟಿದೆ ಹೇಳಿ. ಅದ್ರಲ್ಲೂ ಈ ಮೊದಲ ಪ್ರೇಮದ ಹೃದಯಕ್ಕೆ ಹತ್ತಿರ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ. ಅದರಂತೆ ತಮ್ಮ ಕಾಲೇಜಿನ ದಿನದ ಲವ್ ಸ್ಟೋರಿಯೊಂದನ್ನ ಸಿಎಂ ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ.

ಈ ಪ್ರೀತಿ ಒಂಥರಾ ಕಚಗುಳಿ.. ಈ ಕಚಗುಳಿ ಅನುಭವನ್ನ ಬಿಚ್ಚಿಟ್ಟಿದ್ದು, ಸಿಎಂ ಸಿದ್ದರಾಮಯ್ಯ. ಮೈಸೂರಿನ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜಿನ ದಿನಗಳ ಹಿನ್ನೋಟಕ್ಕೆ ಜಾರಿದ್ರು. ಸ್ನೇಹದ ಗೆಳತಿಯ ಜೊತೆಗಿನ ಬಾಂಧವ್ಯವನ್ನ ನೆನೆದರು. ಅಂತರ್ಜಾತಿ ಮದುವೆ ಆಗಬೇಕು ಅನ್ನೋ ಕಂಡಿದ್ದ ಕನಸು ಅನ್ನು ಎಲ್ಲರ ಮುಂದೆ ಬಿಚ್ಚಿಟ್ಟರು.

ಒಂದು ಹುಡುಗಿ ಜೊತೆ ಸ್ನೇಹ ಮಾಡಿಕೊಂಡಿದ್ದೆ

ನಾನು ಅಂತರ್ಜಾತಿ ವಿವಾಹ ಮಾಡಿಕೊಳ್ಳಬೇಕು ಅಂತಿದ್ದೆ. ಆದರೆ ಆಗಲಿಲ್ಲ. ಹುಡುಗಿನೇ ಒಪ್ಪಲಿಲ್ಲ. ನಾನು ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಮಾಡಿಕೊಂಡಿದ್ದೆ. ಲಾ ಓದುವಗಲೇ ಆ ಹುಡುಗಿ ಜೊತೆ ಸ್ನೇಹ ಆಗಿತ್ತು. ಬೇರೆ ಏನಾದರೂ ಅರ್ಥ ತಿಳಿದುಕೊಂಡಿರಾ?. ಮದುವೆ ಮಾಡಿಕೊಳ್ಳಬೇಕಿತ್ತು ಅನ್ಕೊಂಡಿದ್ದೆ. ಆದ್ರೆ ಹುಡುಗಿ ಮನೆಯವರು ಒಪ್ಪಲಿಲ್ಲ. ಹುಡುಗಿನೂ ಒಪ್ಪಲಿಲ್ಲ. ನಾನುನೂ ಮದುವೆ ಆಗಲಿಲ್ಲ.

ಹುಡುಗಿನೂ ಒಪ್ಪಲಿಲ್ಲ. ನಾನುನೂ ಮದುವೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯವರನ್ನೇ ಮದುವೆ ಆಗೋ ಪರಿಸ್ಥಿತಿ ಬಂತು. ಆದರೆ ಸ್ನೇಹ ಈಗಲು ನನ್ನಲ್ಲಿದೆ. ಈಗ ನನ್ನ ಜಾತಿಯವರನ್ನೇ ಮದುವೆ ಆಗಿದ್ದೀನಿ. ನನಗೆ ಎಷ್ಟರ ಮಟ್ಟಿಗೆ ನೈತಿಕತೆ ಇದೆ ಎಂಬುದು ನಿಮಗೆಲ್ಲ ಗೊತ್ತಿದೆ. ನನ್ನ ಸಂಪೂರ್ಣ ಬೆಂಬಲ ಅಂತರ್ಜಾತಿ ಮದುವೆಗಳಿಗೆ ಇದೆ.

ಸಿದ್ದರಾಮಯ್ಯ, ಸಿಎಂ 

ಹೀಗೆ ತಮ್ಮ ಕಾಲೇಜು ಲೈಫಿನ ಲವ್ ಸ್ಟೋರಿಯನ್ನ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. ಹುಡುಗಿ ಸ್ನೇಹ ವಿಚಾರ ಹೇಳಿ ಸಭೆಯನ್ನ ನಗೆಗಡಲಲ್ಲಿ ತೇಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿ ಮಾಡಿದ ಹುಡುಗಿಯನ್ನ ಇನ್ನೂ ಮರೆಯದ ಸಿಎಂ ಸಿದ್ದು; ಮೊದಲ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನು?

https://newsfirstlive.com/wp-content/uploads/2024/05/CM_SIDDARAMAIAH_LOVE_1.jpg

Load More