/newsfirstlive-kannada/media/post_attachments/wp-content/uploads/2024/09/cm-siddu-1.jpg)
ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸುವ ಕಾರಣ ನೀಡಿ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂದು ರಾಜ್ಯದ ಶಾಸಕರು ಸರ್ಕಾರದ ಮೇಲೆ ಗರಂ ಆಗಿದ್ದಾರೆ. ಇದು ಕೇವಲ ಬಿಜೆಪಿ, ಜೆಡಿಎಸ್ ಶಾಸಕರ ಅಸಮಾಧಾನವಲ್ಲ. ಸ್ವತಃ ಕಾಂಗ್ರೆಸ್ ಸರ್ಕಾರದ ಶಾಸಕರೇ ಖುದ್ದು ಸಿದ್ದರಾಮಯ್ಯ ಮೇಲೆ ಕಿಡಿಕಾರಿದ್ದರು. ಕಾಂಗ್ರೆಸ್ ಶಾಸಕರ ಅಸಮಾಧಾನ ಭುಗಿಲೇಳುತ್ತಿದ್ದಂತೆಯೇ ಹೈಕಮಾಂಡ್ ನಾಯಕ ರಣದೀಪ್ ಸಿಂಗ್ ಸರ್ಜೇವಾಲಾ ಅವರು, ಸರಣಿಯಾಗಿ ಒನ್ ಟು ಒನ್ ಸಭೆ ನಡೆಸಿದ್ದರು. ಸಭೆಯ ಪ್ರತಿಫಲವಾಗಿ ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ಗುಡ್ನ್ಯೂಸ್ ನೀಡಿದ್ದಾರೆ.
ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್ ಬಾಕ್ಸ್ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
ಸುರ್ಜೇವಾಲಾರ ಜೊತೆಗಿನ ಒನ್ ಟು ಒನ್ ಸಭೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ಅನುದಾನ ರಿಲೀಸ್ ಮಾಡಲಾಗಿದೆ. ಶಾಸಕರ ಅಸಮಾಧಾನ ತಣಿಸಲು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಮೂಲಕ ತಮ್ಮ ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ ನೀಡಿದ್ದಾರೆ.
ಹೌದು, ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆ, ಕಾಮಗಾರಿ, ಗ್ರಾಮೀಣ ರಸ್ತೆ ಹಾಗೂ ನಗರ ಕಾಮಗಾರಿಗಳಿಗೆ 37.5 ಕೋಟಿ ಮೀಸಲಿಡಲಾಗುತ್ತಿದೆ. ಜೊತೆಗೆ 12.5 ಕೋಟಿ ಶಾಸಕರ ವಿವೇಚನಾಧಿಕಾರಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ. ಇನ್ನೂ, ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಜುಲೈ 30-31ರಂದು ಎರಡು ದಿನ ಶಾಸಕರೊಂದಿಗೆ ಮ್ಯಾರಥಾನ್ ಮೀಟಿಂಗ್ ಮಾಡಲಿದ್ದಾರೆ. ಶಾಸಕರು ಕ್ಷೇತ್ರದ ಬೇಡಿಕೆಗಳ ಪಟ್ಟಿ ಸಮೇತ ವಿವರಗಳನ್ನು ನೀಡುವಂತೆ ಸೂಚನೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ