Advertisment

ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

author-image
admin
Updated On
ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
Advertisment
  • ಮುಡಾ ಸೈಟ್ ವಾಪಸ್ ನೀಡುವುದಾಗಿ ಸಿಎಂ ಪತ್ನಿ ಪಾರ್ವತಿ ಪತ್ರ
  • ಪತ್ರ ಬರೆಯೋ ಬಗ್ಗೆ ನನ್ನ ಪತ್ನಿ ನನಗೆ ತಿಳಿಸಿರಲಿಲ್ಲ - ಸಿದ್ದರಾಮಯ್ಯ
  • ಸೈಟ್ ವಾಪಸ್ ಕೊಟ್ಟಿದ್ದು ತಪ್ಪಲ್ಲ.. ತಪ್ಪು ಒಪ್ಪಿಕೊಂಡ ಹಾಗೆ ಆಗಲ್ಲ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸುತ್ತಾ ಸುಂಟರಗಾಳಿಯಂತೆ ಸುಳಿದಾಡುತ್ತಿರುವ ಮುಡಾ ಹಗರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. FIR ದಾಖಲಾದ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್‌ ವಾಪಸ್ ನೀಡುವುದಾಗಿ ಪತ್ರ ಬರೆದಿದ್ದಾರೆ. ಇದೀಗ ಸಿಎಂ ಪತ್ನಿ ಬರೆದ ಪತ್ರದ ಬಗ್ಗೆ ಕಾವೇರಿದ ಚರ್ಚೆಯಾಗುತ್ತಿದೆ.

Advertisment

ಮುಡಾ ಸೈಟ್ ವಾಪಸ್ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯನವರು ಪತ್ರ ಬರೆದ ಮೇಲೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಹೆಂಡತಿ ಸ್ವತಂತ್ರವಾಗಿ ತೀರ್ಮಾನ ಮಾಡಿದ್ದಾರೆ. ಪತ್ರ ಬರೆಯೋ ಬಗ್ಗೆ ನನ್ನ ಪತ್ನಿ ನನಗೆ ತಿಳಿಸಿರಲಿಲ್ಲ. ಈ ಬಗ್ಗೆ ವಿವಾದ ಆಯ್ತು, ಇದ್ರಿಂದ ಮನನೊಂದಿದ್ದಾರೆ ಎಂದು ಪತ್ನಿ ಪಾರ್ವತಿ ಅವರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.

publive-image

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನನ್ನ ಪತ್ನಿ ನನ್ನ ಜೊತೆ ಚರ್ಚೆ ಮಾಡಿಲ್ಲ. ಅವರ ಅಣ್ಣ ಅವರಿಗೆ 3.14 ಗುಂಟೆ ಜಮೀನು ಗಿಫ್ಟ್ ಕೊಟ್ಟಿದ್ದರು. ಮುಡಾದವರು ಒತ್ತುವರಿ ಮಾಡಿ ಸೈಟ್ ಮಾಡಿದ್ದರು. ಅದಕ್ಕೆ ಬದಲಿ ಸೈಟ್ ಕೇಳಿದ್ದು, ಮುಡಾದವರೇ ವಿಜಯನಗರದಲ್ಲಿ ಕೊಟ್ಟಿದ್ದಾರೆ. ಇದು ವಿವಾದ ಆಗಿದ್ದು, ಇದರಿಂದ ಮನನೊಂದು ನಮ್ಮ ಯಜಮಾನರಿಗೆ ತೇಜೋವಧೆ ಆಗುತ್ತಾ ಇದೆ. ಮುಡಾ ಸೈಟ್ ಬೇಡ ಅಂತ ಹೇಳಿ ಈಗಾಗಲೇ ವಾಪಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು? 

Advertisment

ಇದರಲ್ಲಿ ನನ್ನ ಪಾತ್ರ ಇಲ್ಲ. ಸೈಟ್ ವಾಪಸ್ ಕೊಟ್ಟಿದ್ದು ತಪ್ಪಲ್ಲ. ತಪ್ಪನ್ನು ಒಪ್ಪಿಕೊಂಡ ಹಾಗೆ ಹೇಗೆ ಆಗುತ್ತೆ. ನಾನು ತಪ್ಪೇ ಮಾಡಿಲ್ಲ. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment