newsfirstkannada.com

ಜುಲೈ 1ರಿಂದಲೇ 10 kg ಅಕ್ಕಿ ಯೋಜನೆ ಜಾರಿ ಅನುಮಾನ; ದೆಹಲಿಯಲ್ಲಿ ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ

Share :

Published June 21, 2023 at 6:01pm

Update June 21, 2023 at 6:02pm

    10 ಕೆಜಿ ಅಕ್ಕಿ ಯೋಜನೆ ಜಾರಿಗೆ ತರಲು ದೆಹಲಿಯಲ್ಲಿ ಸಿಎಂ ಕಸರತ್ತು

    ದ್ವೇಷದ ರಾಜಕಾರಣ ಮಾಡ್ತಿರೋದ್ರಿಂದ ವಿಳಂಬ ಎಂದ ಸಿದ್ದರಾಮಯ್ಯ

    ಕರ್ನಾಟಕದಲ್ಲಿ ಸಂಗ್ರಹವಾಗಿರೋದು 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ

ನವದೆಹಲಿ: ರಾಜ್ಯದ ಬಡವರಿಗೆ 10 ಕೆಜಿ ಅಕ್ಕಿ ಕೊಡೋ ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಯಾಗೋದು ಅನುಮಾನ. ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಜುಲೈ 1ಕ್ಕೆ ಅಕ್ಕಿ ಕೊಡುವ ಪ್ರಕ್ರಿಯೆ ಮಾಡ್ಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡ್ತಾ ಇದೆ. ಕೇಂದ್ರ ಸರ್ಕಾರ ಅಕ್ಕಿ ರಾಜಕೀಯ ಮಾಡಿರೋದ್ರಿಂದ ವಿಳಂಬವಾಗೋ ಸಾಧ್ಯತೆಯಿದೆ ಎಂದಿದ್ದಾರೆ.

ಕರ್ನಾಟಕದಲ್ಲೇ ಅನ್ನಭಾಗ್ಯ ಯೋಜನೆಗೆ ಬಹಳಷ್ಟು ಅಕ್ಕಿ ಸಿಗಲ್ಲ. ಓಪನ್ ಮಾರ್ಕೆಟ್‌ಗೆ ಹೋಗ್ಬೇಕು, ಟೆಂಡರ್ ಕರಿಬೇಕು. ಹೀಗೆಲ್ಲ ಆದ್ರೆ ಇನ್ನೂ 2 ತಿಂಗಳು ಹೆಚ್ಚು ಸಮಯ ಆಗುತ್ತೆ. ತೆಲಂಗಾಣ, ಪಂಜಾಬ್ ಸೇರಿದಂತೆ ಎಲ್ಲಾ ಕಡೆ ಅಕ್ಕಿ ಖರೀದಿ ಮಾಡಲು ಕೇಳಿದ್ದೇವೆ. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೇವಲ ಒಂದು ತಿಂಗಳು ನಮಗೆ ಕೊಡೋಕೆ ಸಾಧ್ಯ ಅಂತಾ ಛತ್ತಿಸ್‌ಘಡ ಹೇಳಿದೆ. 42 ರೂಪಾಯಿ ಒಂದು ಕೆಜಿಗೆ ಆಗುತ್ತೆ ಆಂಧ್ರದವರು ಹೇಳಿದ್ದಾರೆ. ಹೀಗಾಗಿ ಕೇವಲ ಗೋಧಿ ಮಾತ್ರ ಕೊಡೋಕೆ ಸಾಧ್ಯ ಅಂತಾ ತೆಲಂಗಾಣ ಹೇಳಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸಿಎಂ ಆಗಿದ್ದೇನೆ. ನಮ್ಮದು ಸಮ್ಮಿಶ್ರ ಸರ್ಕಾರ ಅಲ್ಲ. 136 ಶಾಸಕರು ನಮ್ಮ ಪಕ್ಷದಿಂದ ಆಯ್ಕೆ ಆಗಿದ್ದಾರೆ. ಅವರು ನನ್ನನ್ನ ಆಯ್ಕೆ ಮಾಡಿದ್ದಾರೆ. ಕೇಂದ್ರಿಯ ಭಂಡಾರ, ಎನ್‌ಸಿಸಿಎಫ್, ನಾಫೆಡ್‌ನಿಂದ ಖರೀದಿಗೆ ಪಟ್ಟಿ ನೀಡಲಿದ್ದಾರೆ. ನಂತರ ಅಕ್ಕಿ ಖರೀದಿಯ ಬಗ್ಗೆ ನಿರ್ಧಾರವಾಗಲಿದೆ. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮ್ಮ ಹತ್ರ ಇದೆ, ಕೊಡ್ತೀವಿ ಅಂತಾ ಹೇಳಿ ಈಗ ಯಾಕೆ ಕೊಡ್ತಿಲ್ಲ. ಜೂನ್ 12ನೇ ತಾರೀಖು ಅವ್ರು ನಮಗೆ ಯಾಕೆ ಪತ್ರ ಬರೆದ್ರು. ನಮಗೆ ಯಾಕೆ ಓಕೆ ಅಂತಾ ಹೇಳಿದ್ರು ಎಂದು ಸಿಎಂ ಪ್ರಶ್ನಿಸಿದ್ದಾರೆ.

ಇನ್ನು ಗವರ್ನ್‌ಮೆಂಟ್ ಆಫ್ ಇಂಡಿಯಾ ಏಜೆನ್ಸಿಗಳಲ್ಲೂ ಕೇಳಿದ್ದೇವೆ. ನಾಳೆ ನಮಗೆ ಅವ್ರು ಕೊಟೇಷನ್ ಕೊಡ್ತಾರೆ. ಅದರ ಮೇಲೆ ನಾವು ತೀರ್ಮಾನ ಮಾಡ್ತೇವೆ. ಈ ಕಾರಣದಿಂದ ಅಕ್ಕಿ ಕೊಡೋದು ಸ್ವಲ್ಪ ವಿಳಂಬ ಆಗಬಹುದು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿರೋದ್ರಿಂದ ವಿಳಂಬ ಆಗ್ತಿದೆ. ಈ ವಿಚಾರವಾಗಿ ನಾಳೆ ಸ್ಪಷ್ಟತೆ ಸಿಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಜುಲೈ 1ರಿಂದಲೇ 10 kg ಅಕ್ಕಿ ಯೋಜನೆ ಜಾರಿ ಅನುಮಾನ; ದೆಹಲಿಯಲ್ಲಿ ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2023/06/Siddaramaiah-Cm-1.jpg

Load More