/newsfirstlive-kannada/media/post_attachments/wp-content/uploads/2025/06/siddu-dk.jpg)
ಮೈಸೂರು: ಐದು ವರ್ಷ ನಮ್ಮ ಸರ್ಕಾರ ಬಂಡೆ ಥರ ಗಟ್ಟಿಯಾಗಿರುತ್ತೆ ಎಂದು ಡಿಕೆ ಶಿವಕುಮಾರ್ ಅವರ ಕೈ ಹಿಡಿದು ನಾವು ಗಟ್ಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈಯನ್ನು ಎತ್ತಿ ತೋರಿಸಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ನಮ್ಮ ಸರ್ಕಾರ ಬಂಡೆ ಥರ ಗಟ್ಟಿಯಾಗಿರುತ್ತೆ. ನಾವು ಗಟ್ಟಿ. ನಾವು ಒಗ್ಗಟ್ಟಾಗಿ ಇರ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನೂ, ಇದೇ ವೇಳೆ ಸುರ್ಜೆವಲಾ ರಾಜ್ಯಕ್ಕೆ ಬರುತ್ತಿರುವ ವಿಚಾರದ ಬಗ್ಗೆ ಮಾತಾಡಿದ ಸಿಎಂ ಸಿದ್ದರಾಮಯ್ಯನವರು, ಸಂಘಟನೆ ಬಲ ಪಡಿಸಲು ರಾಜ್ಯಕ್ಕೆ ಬರ್ತಿದ್ದಾರೆ. ಅವರ ಕೆಲ್ಸ ಅವರು ಮಾಡ್ತಾರೆ ಅಂತ ಹೇಳಿದ್ದಾರೆ.
ಸೆಪ್ಟಂಬರ್ ಕ್ರಾಂತಿ ಎಂಬುವುದು ಕಾಂಗ್ರೆಸ್ನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಸೆಪ್ಟಂಬರ್ನಲ್ಲಿ ಸಿಎಂ ಬದಲಾಗುತ್ತಾರೆ ಎಂಬ ವಿಚಾರವಾಗಿ ಕಾಂಗ್ರೆಸ್ನಾಯಕರು ಒಂದಲ್ಲಾ ಒಂದು ಹೇಳಿಕೆ ನೀಡುತ್ತಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಸರ್ಕಾರದವರು ಕೂಡ ಮೈಸೂರು ದಸರಾ ಅಷ್ಟೊತ್ತಿಗೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗೆ ಇಳಿತಾರೆ ಅಂತ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಈ ರೀತಿಯ ಹೇಳಿಕೆ ನೀಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ