newsfirstkannada.com

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪ್ರತಿ ಪೈಸೆ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ; ಎಲ್ಲರೂ ಫುಲ್​ ಶಾಕ್​!

Share :

Published February 7, 2024 at 12:35pm

Update February 7, 2024 at 12:41pm

    2015-16 ರಿಂದ 2019-20ರ ವರೆಗೆ 15ನೇ ಹಣಕಾಸು ಅಯೋಗ ವರದಿ

    UPಗೆ ₹2.80 ಲಕ್ಷ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಕೊಡುತ್ತಿದೆ

    ಕೇಂದ್ರದ ಕರ್ನಾಟಕ್ಕೆ ಕೇವಲ ₹50 ಸಾವಿರದ 257 ಕೋಟಿ ಕೊಡುತ್ತಿದೆ

ನವದೆಹಲಿ: ಕರ್ನಾಟಕದ ಹಿತದೃಷ್ಟಿಯಿಂದ ಈ ಪ್ರತಿಭಟನೆಯನ್ನು ಮಾಡಲಾಗುತ್ತಿದ್ದು ನಮಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಲ್ಲಿವರೆಗೆ 15 ಹಣಕಾಸು ಆಯೋಗ ವರದಿಗಳನ್ನು ನೀಡಿವೆ. ಈ ವರದಿ ಆಧಾರದ ಮೇಲೆ ಕೇಂದ್ರಾಡಳಿತ ಪ್ರದೇಶ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಂಚಿಕೆ ಮಾಡಿಕೊಳ್ಳುತ್ತೇವೆ. ವಿಧಿ 7ನೇ ಪ್ರಕಾರ ಎಲ್ಲರೂ ತೆರಿಗೆ ಹಣವನ್ನು ಹಂಚಿಕೆ ಮಾಡಿಕೊಳ್ಳಬೇಕು. 2015-16 ರಿಂದ 2019-20ರ ವರೆಗೆ 15ನೇ ಹಣಕಾಸು ಅಯೋಗ ವರದಿ ನೀಡಿದೆ. ಶೇ.42 ಮತ್ತು ಶೇ.58 ರಷ್ಟು ಕೇಂದ್ರಕ್ಕೆ ಎಂದು ವರದಿ ನೀಡಿದೆ. 15ನೇ ಹಣಕಾಸು ವರದಿಯಲ್ಲಿ ಶೇ.42 ರಿಂದ 41ಕ್ಕೆ ಇಳಿಕೆ ಮಾಡಿದರು. ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲನ್ನು 4.71 ರಿಂದ 3.64ಕ್ಕೆ ಇಳಿಕೆ ಮಾಡಿದರು. ಇದರ ಅರ್ಥ 1.07 ರಷ್ಟು ಕಡಿಮೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

1971ನೇ ಜನಗಣತಿ ಆಧಾರದ ಮೇಲೆ ತೆರಿಗೆ ಹಂಚಿಕೆ ಮಾಡುತ್ತಿದ್ದರು. ಆದರೆ 15ನೇ ಹಣಕಾಸಿನಲ್ಲಿ ಇದನ್ನು ಬಿಟ್ಟು 2011ರ ಜನಗಣತಿ ಪರಿಗಣಿಸಲಾಗುತ್ತಿದೆ. ಉತ್ತರ ಭಾರತದ ಟನೇಕ ರಾಜ್ಯಗಳು ಜನಸಂಖ್ಯೆಯನ್ನು ಸರಿಯಾಗಿ ನಿಯಂತ್ರ ಮಾಡಲಿಲ್ಲ. ದಕ್ಷಿಣ ಭಾರತ ಜನಸಂಖ್ಯೆ ನಿಯಂತ್ರಣ ಮಾಡಿದೆ. ಇದೇ ನಮಗೆ ಶಾಪ ಆಗಿದೆ. ಅಭಿವೃದ್ಧಿಯಾಗದೇ ಇರುವ ರಾಜ್ಯಕ್ಕೆ ಹಣ ಕೊಡಿ ವಿರೋಧ ಇಲ್ಲ, ಆದರೆ ಕೋಳಿ ಚಿನ್ನದ ಮೊಟ್ಟೆ ಇಡುತ್ತಿದೆ ಎಂದು ಕೋಳಿ ಕುಯ್ಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶಕ್ಕೆ 2 ಲಕ್ಷದ 80 ಸಾವಿರ ಕೋಟಿ ರೂಪಾಯಿ ತೆರಿಗೆಯ ಪಾಲು ಹಣ ಸಿಗುತ್ತದೆ. ಆದರೆ ಕರ್ನಾಟಕಕ್ಕೆ 50 ಸಾವಿರದ 257 ಕೋಟಿ ರೂಪಾಯಿ ತೆರಿಗೆ ಪಾಲು ಸಿಗುತ್ತದೆ. ಮಹಾರಾಷ್ಟ್ರದ ನಂತರ 2ನೇ ಅಧಿಕ ಟ್ಯಾಕ್ಸ್ ಕಟ್ಟುತ್ತೇವೆ. ಯಾಕೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಕರ್ನಾಟಕ ಈ ಬಾರಿ ಕೇಂದ್ರಕ್ಕೆ ಒಟ್ಟು 4 ಲಕ್ಷ 30 ಸಾವಿರ ಕೋಟಿ ರೂಪಾಯಿ ತೆರಿಗೆ ಹಣ ಪಾವತಿ ಮಾಡಿದ್ದೇವೆ. ಉದಾಹರಣೆಗೆ 100 ರೂಪಾಯಿ ಟ್ಯಾಕ್ಸ್ ನಾವು ಕಟ್ಟಿದರೆ ಅದರಲ್ಲಿ ನಮಗೆ ಕೇವಲ 12 ರೂಪಾಯಿ ಬರುತ್ತಿದೆ. ಇದರಿಂದ 62 ಸಾವಿರದ 98 ಕೋಟಿ ರೂಪಾಯಿ ನಾವು ನಷ್ಟವಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

2017-18 ರಲ್ಲಿ 21 ಲಕ್ಷದ 46 ಸಾವಿರದ 235 ಕೋಟಿ ರೂ. ಕೇಂದ್ರದ ಬಜೆಟ್ ಇತ್ತು. ಇದರಲ್ಲಿ ನಮ್ಮ ಕರ್ನಾಟಕಕ್ಕೆ 31 ಸಾವಿರ 908 ಕೋಟಿ ಟ್ಯಾಕ್ಸ್ ಬರುತ್ತಿತ್ತು. ಇಂದಿರಾ ಆವಾಸ್ ಯೋಜನೆಯಲ್ಲಿ ಪ್ರತಿ ಮನೆಗೆ ಕೇಂದ್ರ, ರಾಜ್ಯ ಎರಡು ಕೊಡುತ್ತಾವೆ. ಆದರೆ ಇದಕ್ಕೆ ಪ್ರಧಾನಿ ಆವಾಸ್ ಮನೆ ಎಂದು. ಇದರಲ್ಲಿ ನಮ್ಮ ಪಾಲು ಏಕೆ ಹೇಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪ್ರತಿ ಪೈಸೆ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ; ಎಲ್ಲರೂ ಫುಲ್​ ಶಾಕ್​!

https://newsfirstlive.com/wp-content/uploads/2024/02/SIDDARAMAIH_CM.jpg

Load More