newsfirstkannada.com

ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು.. ಕೊನೆಗೆ ದೇಗುಲಕ್ಕೆ ಪ್ರವೇಶ ಇಲ್ಲ -ಸಿದ್ದರಾಮಯ್ಯ ವಾಗ್ದಾಳಿ

Share :

Published January 16, 2024 at 7:18am

    ದೇವಸ್ಥಾನ ಕಟ್ಟುವ ಭೋವಿ ಸಮುದಾಯದವರಿಗೆ ಅದರೊಳಗೆ ಪ್ರವೇಶವಿಲ್ಲ

    ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಆಚರಣೆಯಲ್ಲಿ ಧರ್ಮ ತಾರತಮ್ಯ

    ಕಾಂತರಾಜು ವರದಿ ಸ್ವೀಕಾರ ಮಾಡಿ ಬಿಡುಗಡೆ ಮಾಡುವಂತೆ ಒತ್ತಾಯ

ಸಂಕ್ರಾಂತಿ ಸಂಭ್ರಮದಂದು ನಿನ್ನೆ ಬೆಂಗಳೂರಿನಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಆಡಿದ ಮಾತುಗಳು ಸಂಚಲನ ಸೃಷ್ಟಿಸಿವೆ. ಅಲ್ಲದೆ ಮತ್ತೆ ಕಾಂತರಾಜು ವರದಿ ಸ್ವೀಕಾರಕ್ಕೆ ಒತ್ತಾಯ ಕೇಳಿ ಬಂದಿದೆ.

‘ಅವಕಾಶ ವಂಚಿತರ ಪರವಾಗಿ ಇರುವವನು ಸಿದ್ದರಾಮಯ್ಯ’

ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು, ವಿಗ್ರಹ ತರೋರು ನೀವು. ಆದರೆ ದೇವಸ್ಥಾನ ಪ್ರವೇಶಕ್ಕೆ ಮಾತ್ರ ಭೋವಿ ಸಮುದಾಯದವರಿಗೆ ಅವಕಾಶವಿಲ್ಲ. ಇದನ್ನು ಒಪ್ಪಿಕೊಳ್ಳಬೇಕಾ ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ಇವತ್ತು ನಡೆಯುತ್ತಿದೆ. ಆದರೆ ಬಸವಾದಿ ಶರಣರು ಜಾತಿ-ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯವಾದದ್ದು ಎಂದು ಕಿಡಿಕಾರಿದರು.

     ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು, ವಿಗ್ರಹ ತರೋರು ನೀವು, ಆದರೆ ದೇವಸ್ಥಾನ ಪ್ರವೇಶಕ್ಕೆ ಮಾತ್ರ ಭೋವಿಗಳಿಗೆ ಅವಕಾಶ ಇಲ್ಲ ಎಂದರೆ ಒಪ್ಪಿಕೊಳ್ಳಬೇಕಾ ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ನಿಮ್ಮನ್ನು ಒಳಗೆ ಸೇರಿಸದ ದೇವಸ್ಥಾನಗಳನ್ನು ನೀವೇ ತಿರಸ್ಕರಿಸಿ, ನಿಮ್ಮದೇ ದೇವಸ್ಥಾನ ನಿರ್ಮಿಸಿಕೊಳ್ಳಿ. ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಬಾಯಲ್ಲಿ ಹೇಳಿ ಆಚರಣೆಯಲ್ಲಿ ಧರ್ಮ ತಾರತಮ್ಯ ಮಾಡುವುದು ಇವತ್ತು ನಡೆಯುತ್ತಿದೆ. ಆದರೆ ಬಸವಾದಿ ಶರಣರು ಜಾತಿ, ಧರ್ಮ ಆಧಾರದಲ್ಲಿ ಮನುಷ್ಯರನ್ನು ವಿಭಜಿಸಲಿಲ್ಲ. ಮನುಷ್ಯರನ್ನು ಜಾತಿ-ಧರ್ಮದ ಆಧಾರದಲ್ಲಿ ದ್ವೇಷಿಸುವುದು ಅಮಾನವೀಯವಾದದ್ದು. ವೈಚಾರಿಕ, ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರುಸಿದ್ದರಾಮಯ್ಯ, ಮುಖ್ಯಮಂತ್ರಿ

ಮುಂದುವರೆದು ಮಾತನಾಡಿದ ಅವರು, ಯಾವ ಕೆಲಸ ಮೇಲು ಅಲ್ಲ, ಕೀಳೂ ಅಲ್ಲ. ಈ ಕಾರಣಕ್ಕೇ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಎಲ್ಲರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು, ಅದನ್ನು ಎಲ್ಲರಿಗೂ ವಿತರಿಸಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು. ನಮ್ಮ ಸರಕಾರದ ಕಾರ್ಯಕ್ರಮಗಳೂ ಈ ಆಶಯಕ್ಕೆ ಪೂರಕವಾಗಿವೆ ಎಂದರು. ಅಲ್ಲದೆ ಭೋವಿ ಸಮುದಾಯದ ಬೇಡಿಕೆಯಂತೆ ಅಧ್ಯಯನ ಪೀಠ ಸ್ಥಾಪನೆ ಸೇರಿ ನನ್ನ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಶ್ರೀ ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಾಂತರಾಜು ವರದಿ ಸ್ವೀಕಾರ ಮಾಡಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ಭೋವಿ ಸಮುದಾಯದವರಿಗೆ ಈ ಬಾರಿಯ ಲೋಕಸಭಾ ಟಿಕೆಟ್ ನೀಡಲೇಬೇಕು. ಸಮುದಾಯದ ಒಬ್ಬರನ್ನ KPSC ಮೆಂಬರ್ ಮಾಡಬೇಕು ಅಂತ ಒತ್ತಾಯಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲ್ಲು ಒಡೆಯೋರು ನೀವು, ಗುಡಿ ಕಟ್ಟೋರು ನೀವು.. ಕೊನೆಗೆ ದೇಗುಲಕ್ಕೆ ಪ್ರವೇಶ ಇಲ್ಲ -ಸಿದ್ದರಾಮಯ್ಯ ವಾಗ್ದಾಳಿ

https://newsfirstlive.com/wp-content/uploads/2024/01/SIDDARAMAIAH-12.jpg

Load More