Advertisment

ದರ್ಶನ್ & ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌? ಎಲ್ಲಿಗೆ ಹೋಗ್ತಾರೆ? ಆ ಕತ್ತಲ ಕೋಣೆಯಲ್ಲಿ ಲಾಕ್‌ ಆಗ್ತಾರಾ?

author-image
Bheemappa
Updated On
ದರ್ಶನ್​ ಗ್ಯಾಂಗ್​ಗೆ ರೇಣುಕಾಸ್ವಾಮಿ ಸಿಕ್ಕಿಬಿದ್ದಿದ್ದು ಹೇಗೆ? ಪವಿತ್ರಾ ಗೌಡಗೆ ಏನ್​ ಮೆಸೇಜ್​ ಕಳಿಸಿದ್ರು?
Advertisment
  • ಆ ಜೈಲಿನಲ್ಲಿ ಈಗಾಗಲೇ 15 ಅಂಧೇರಿ ಅಂದ್ರೆ ಕತ್ತಲೆಯ ಸೆಲ್‌ಗಳು ಖಾಲಿ!
  • ಇಂದೇ ನಟ ದರ್ಶನ್‌ ಗ್ಯಾಂಗ್‌ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುತ್ತಾರಾ?
  • ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಬೇರೆ ಜೈಲಿಗೆ ಶಿಫ್ಟ್​..?

ಬೆಂಗಳೂರು: ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ವಿಚಾರ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ಶಿಫ್ಟ್​ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ದರ್ಶನ್​ರನ್ನ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಹೆಚ್ಚಾಗಿದೆ.

Advertisment

ಇದನ್ನೂ ಓದಿ: ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ?

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಶತಮಾನಗಳ ಇತಿಹಾಸ ಹೊಂದಿದೆ. ಈ ಜೈಲಿನಲ್ಲಿ 15 ಅಂಧೇರಿ ಸೆಲ್‌ಗಳು ( ಕತ್ತಲು ಕೋಣೆಗಳು) ಖಾಲಿ ಇವೆ. ಈ ಬಗ್ಗೆ ನ್ಯೂಸ್ ಫಸ್ಟ್​​ಗೆ ಜೈಲಿನ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂದು ಸಂಜೆ ನಟನನ್ನು ಬೇರೆಡೆಗೆ ಸ್ಥಳಾಂತರ ಮಾಡುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು? 

Advertisment

publive-image

ಪರಪ್ಪನ ಜೈಲಿನಲ್ಲಿರುವ ದರ್ಶನ್ ಸೇರಿ ಇತರರನ್ನು ಸ್ಥಳಾಂತರ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಡಿಜಿಐಜಿಪಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ದರ್ಶನ್​ರನ್ನ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ದರ್ಶನ್ ಶಿಫ್ಟ್ ಮಾಡುವ ಕುರಿತು ಮಾಹಿತಿ ಹೊರ ಬೀಳಬಹುದು.

publive-image

ಇನ್ನು ದರ್ಶನ್​​ರನ್ನ ಹಿಂಡಲಗಾ ಜೈಲಿಗೆ ಕಳುಹಿಸುವುದು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ಕೋಕಾ ಕಾಯ್ದೆಯಡಿ ಇರುವವರನ್ನ ಶಿಫ್ಟ್ ಮಾಡಲು ಬೆಂಗಳೂರು ಪೊಲೀಸರು ಪತ್ರ ಬರೆದಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನ ಸ್ಥಳಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಜೈಲು ಅಧಿಕಾರಿಗಳು ಕಾನೂನು ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ನ್ಯಾಯಾಲಯದ ಅನುಮತಿ ಬೇಕಾ ಅಥವಾ ಜೈಲು ಆಡಳಿತವೇ ನಿರ್ಧರಿಸಬಹುದಾ ಎಂದು ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಜೈಲು ಆಡಳಿತವೆ ನಿರ್ಧಾರ ತೆಗೆದುಕೊಂಡರೆ ಇಂದೇ ಅವರನ್ನು ಶಿಪ್ಟ್ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment