ಕಾನ್​ಸ್ಟೆಬಲ್​ ಉದ್ಯೋಗಕಾಂಕ್ಷಿಗಳಿಗೆ ಗುಡ್​ನ್ಯೂಸ್​.. ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?

author-image
Bheemappa
Updated On
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರ್ಕಾರದಿಂದ ಶುಭ ಸುದ್ದಿ; ಏನದು?
Advertisment
  • ಗೃಹ ಸಚಿವ ಡಾ.ಜಿ ಪರಮೇಶ್ವರ್​​ಗೆ ಸಿಎಂ ಸೂಚಿಸಿದ್ದು ಏನು?
  • ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆ ಯಾವಾಗ?
  • ಗೃಹ ಸಚಿವರಿಂದ ಅಂತಿಮ ನಿರ್ಧಾರ ಹೊರ ಬೀಳಬೇಕಿದೆ

ರಾಜ್ಯ ಸರ್ಕಾರ ಪೊಲೀಸ್​ ಕಾನ್​ಸ್ಟೆಬಲ್ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನ ಮಾಡಬೇಕಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್​ ಕಾನ್​ಸ್ಟೆಬಲ್​ ಆಕಾಂಕ್ಷಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಹೆಚ್ಚಳ ಮಾಡುವ ಕುರಿತು ಈ ಒಂದು ಬಾರಿ ನಿರ್ಧಾರ ತೆಗೆದುಕೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಗೃಹ ಸಚಿವರಿಂದ ಅಂತಿಮ ನಿರ್ಧಾರ ಹೊರ ಬೀಳಬೇಕಿದೆ. ಅವಾಗಿನವರೆಗೆ ಮೊದಲಿನಿಂತೆ ನಿಯಮ ಇರಲಿದೆ. ಒಂದು ವೇಳೆ ರಾಜ್ಯ ಸರ್ಕಾರ ವಯೋಮಿತಿಯನ್ನು ಹೆಚ್ಚಳ ಮಾಡಿದರೆ ಕಾನ್​ಸ್ಟೆಬಲ್ ಹುದ್ದೆಗಳಿಗೆ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಹರಿದು ಬರಲಿವೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸವು ತುಂಬಲಿದೆ.

ಇದನ್ನೂ ಓದಿ: ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ? 

publive-image

ಕಾನ್‌ಸ್ಟೇಬಲ್ ನೇಮಕಾತಿ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಹೆಚ್ಚಳ ಮಾಡುವಂತೆ ಬೇಡಿಕೆ ಈಗಾಗಲೇ ಬಂದಿದೆ. ಒಂದು ಬಾರಿ ನಿರ್ಧಾರ ತೆಗೆದುಕೊಳ್ಳುವಂತೆ ಗೃಹ ಸಚಿವರಿಗೆ ಸೂಚನೆ ನೀಡಲಾಗಿದೆ. ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟು ಶೀಘ್ರದಲ್ಲೇ ನಡೆಸಬೇಕು ಎಂದು ಕೆಪಿಎಸ್​​ಸಿ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment