newsfirstkannada.com

ಗಳಸ್ಯ ಗಂಟಸ್ಯ ಮೋದಿ, ದೇವೇಗೌಡ ಸುಳ್ಳುಗಾರರು.. ಕನಕಪುರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

Share :

Published March 28, 2024 at 2:51pm

    ಕನಕಪುರದಲ್ಲಿ ಕಾಂಗ್ರೆಸ್ ನಾಯಕರಿಂದ ಬೃಹತ್ ಶಕ್ತಿ ಪ್ರದರ್ಶನ

    ದೇವೇಗೌಡರ ಅಳಿಯ ಅಂತ ಡಾ.ಸಿ. ಎನ್ ಮಂಜುನಾಥ್‌ಗೆ ಬಿಜೆಪಿ ಟಿಕೆಟ್

    ಮಂಡ್ಯದಲ್ಲೂ ಕುಮಾರಸ್ವಾಮಿ ನೂರಕ್ಕೆ ನೂರು ಸೋಲುತ್ತಾರೆ ಎಂದ ಸಿಎಂ ಸಿದ್ದು

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಕನಕಪುರದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಚುನಾವಣೆಯ ರಣರಂಗದ ಕಿಚ್ಚು ಹೆಚ್ಚಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೆಚ್‌.ಡಿ ದೇವೇಗೌಡರ ಅಳಿಯ ಅಂತ ಬಿಜೆಪಿಯವರು ಡಾ.ಸಿ. ಎನ್ ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಅವರಿಗೆ ಅಭ್ಯರ್ಥಿಯೇ ಇರಲಿಲ್ಲ. ದೇವೇಗೌಡರು, ಪ್ರಧಾನಿ ಮೋದಿ ಸುಳ್ಳುಗಾರರು. ಕಾವೇರಿ ಜಲಾನಯನ ಪ್ರದೇಶಕ್ಕೆ ದೇವೇಗೌಡ ಕುಟುಂಬದ ಕೊಡುಗೆ ಶೂನ್ಯ. ಜನರು ಮೋಸ ಹೋಗಬೇಡಿ. ಬಿಜೆಪಿ, ಜೆಡಿಎಸ್‌ನವರೂ ಎಂದೂ ನುಡಿದಂತೆ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇವೇಗೌಡರು, ಪ್ರಧಾನಿ ಮೋದಿ ಗಳಸ್ಯ ಗಂಟಸ್ಯ ಎಂಬಂತೆ ಇದ್ದಾರೆ. ನನಗೂ ಮೋದಿ ಅವರ ಜೊತೆಗೆ ಅವಿನಾಭಾವ ಸಂಬಂಧ ಇದೆ ಎಂದು ದೇವೇಗೌಡರು ಹೇಳಿದ್ದಾರೆ. ದೇವೇಗೌಡರ ಕುಟುಂಬ ಅನೇಕ ವರ್ಷಗಳಿಂದ ಪ್ರತಿನಿಧಿಸಿದ್ದರು ಯಾಕೆ ಇಲ್ಲಿ ಅಭಿವೃದ್ಧಿ ಮಾಡಲಿಲ್ಲ. ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. ಮಗ,‌ ಮೊಮ್ಮಗ, ಸೊಸೆ ಅಧಿಕಾರದಲ್ಲಿದ್ದರು ಯಾಕೆ ಅಭ್ಯರ್ಥಿ ಮಾಡಿಲ್ಲ.

ಇದನ್ನೂ ಓದಿ: ‘ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಮಾರಣ್ಣ’ ವಿಜಯೇಂದ್ರ ಅಧಿಕೃತ ಘೋಷಣೆ

ಬಿಜೆಪಿ – ಜೆಡಿಎಸ್‌ನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಅಭ್ಯರ್ಥಿಯನ್ನೇ ಹಾಕಬಾರದಿತ್ತು. ಜೆಡಿಎಸ್, ಬಿಜೆಪಿ ಹೆಣ್ಣು ಮಕ್ಕಳು ಶಕ್ತಿ ಯೋಜನೆಯ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ನಮ್ಮ ಯೋಜನೆಗಳ ಲಾಭ ಅವರು ಪಡೆಯುತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಮಗನನ್ನ ಗೆಲ್ಲಿಸಿಕೊಳ್ಳಲಿಲ್ಲ. ರಾಮನಗರದಲ್ಲೂ ಪುತ್ರನನ್ನ ಗೆಲ್ಲಿಸಿಕೊಳ್ಳಲಿಲ್ಲ. ಈಗ ಲೋಕಸಭೆಗೆ ನಿಲ್ಲಲು ಕುಮಾರಸ್ವಾಮಿ ಮಂಡ್ಯಕ್ಕೆ ಹೋಗುತ್ತಿದ್ದಾರೆ. ಮಂಡ್ಯದಲ್ಲೂ ಕುಮಾರಸ್ವಾಮಿ ನೂರಕ್ಕೆ ನೂರು ಸೋಲುತ್ತಾರೆ. ಈಗಾಗಲೇ ಸಂಸದ ಡಿ.ಕೆ ಸುರೇಶ್ ಅವರು ಗೆದ್ದಾಗಿದೆ. ಆದರೂ ಅತಿಯಾದ ಆತ್ಮವಿಶ್ವಾಸ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಳಸ್ಯ ಗಂಟಸ್ಯ ಮೋದಿ, ದೇವೇಗೌಡ ಸುಳ್ಳುಗಾರರು.. ಕನಕಪುರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ

https://newsfirstlive.com/wp-content/uploads/2024/03/Siddaramaiah-Dkshivakumar-4.jpg

Load More