ದೆಹಲಿಯಲ್ಲಿ ಸಿಎಂ, ಡಿಸಿಎಂ; ಸಂಪುಟ ಸರ್ಜರಿ ಜೊತೆಗೆ KPCC ಅಧ್ಯಕ್ಷರನ್ನು ಬದಲಾವಣೆ ಮಾಡ್ತಾರಾ?

author-image
Bheemappa
Updated On
ಸಿಎಂ ಕುರ್ಚಿಗಾಗಿ ಬಿಗ್​ ಫೈಟ್​​; ಡಿಸಿಎಂ ಡಿಕೆಶಿ ದಿಢೀರ್​​ ಯೂಟರ್ನ್​ ಹೊಡೆಯಲು ಕಾರಣವೇನು?
Advertisment
  • ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
  • ಮೊದಲು ಡಿ.ಕೆ ಶಿವಕುಮಾರ್ ಹೋದ್ರು, ಆ ಮೇಲೆ ಸಿಎಂ ಹೋದ್ರು
  • ಸಂಪುಟ ಪುನಾರಚನೆ ಜತೆಗೆ KPCC ಅಧ್ಯಕ್ಷರ ಸ್ಥಾನ ಬದಲಾವಣೆ?

ಮಿನಿ ಸಮರ ಗೆದ್ದಾಗಿದೆ. ಎದುರಾಳಿಗಳ ಬಾಯಿ ಮುಚ್ಚಿಸಿದ್ದಾಯಿತು. ಅಧಿಕಾರದ ಗದ್ದುಗೆಯನ್ನ ಭದ್ರಪಡಿಸಿಕೊಂಡಿದ್ದು ಆಯಿತು. ಈಗೇನಿದ್ದರೂ ಸಿದ್ದರಾಮಯ್ಯಗೆ ಆಡಳಿತವನ್ನ ಮತ್ತಷ್ಟು ಹುರುಪಿನಿಂದ ನಡೆಸೋದೇ ಪ್ಲಾನ್. ಈ ನಿಟ್ಟಿನಲ್ಲಿ ಸಂಪುಟ ಸರ್ಜರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕ್ಯಾಬಿನೆಟ್‌ ಪುನಾರಚನೆ ಮಾಡುವ ಸರ್ಕಸ್ ಜೋರಾಗಿದೆ. ಇದೇ ಟಾಸ್ಕ್‌ನ ಹೊತ್ತು ಸಿಎಂ ಸಿದ್ದರಾಮಯ್ಯ ಡೆಲ್ಲಿ ಯಾತ್ರೆ ಮಾಡಿದ್ದಾರೆ. ಈ ಮಧ್ಯೆ ಯಾರಿಗೆ ಕೊಕ್? ಯಾರಿಗೆ ಮಣೆ ಎಂಬ ಚರ್ಚೆಯೂ ಜೋರಾಗಿದೆ.

ಡಿ.ಕೆ ಶಿವಕುಮಾರ್ ಬೆನ್ನಲ್ಲೇ ದೆಹಲಿಗೆ ತೆರಳಿದ ಸಿದ್ದರಾಮಯ್ಯ

ಮೂರು ಕ್ಷೇತ್ರಗಳ ಬೈಎಲೆಕ್ಷನ್​ನಲ್ಲಿ ಭರ್ಜರಿ ಕಮಾಲ್​ ಮಾಡಿರುವ ಕಾಂಗ್ರೆಸ್​ ರಣೋತ್ಸಾಹದಲ್ಲಿದೆ. ಇದರ ನಡುವೆ ಕಾಂಗ್ರೆಸ್​ನಲ್ಲಿ ಸಂಪುಟ ಪುನಾರಚನೆ ಸುದ್ದಿ ಸದ್ದು ಮಾಡುತ್ತಿದೆ. ನಾಯಕರ ನಿಗೂಢ ನಡೆ ಇಂತಹದೊಂದು ಚರ್ಚೆಗೆ ಕಾರಣ ಆಗಿದೆ. ಕಳೆದ ಎರಡು ದಿನಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ರಾಷ್ಟ್ರ ರಾಜಧಾನಿಗೆ ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್​ನಲ್ಲಿ ಸಂಪುಟ ಸರ್ಜರಿಯ ಕುತೂಹಲ ಮತ್ತಷ್ಟು ಗರಿಗೆದರಿದೆ.

ಇದನ್ನೂ ಓದಿ:ಕೊನೆಗೂ ಮದ್ಯ ಮಾರಾಟಗಾರರ ಬಂದ್ ವಾಪಸ್.. ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆಗಳು ಏನು?

publive-image

ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಟಾಸ್ಕ್‌ನ ಹೊತ್ತು ಕಳೆದ ರಾತ್ರಿಯೇ ರಾಷ್ಟ್ರರಾಜಧಾನಿ ದೆಹಲಿಗೆ ಹೋಗಿದ್ದಾರೆ. ಬೆಂಗಳೂರಿನ ಹೆಚ್‌ಎಎಲ್ ವಿಮಾನನಿಲ್ದಾಣದಿಂದ ಸ್ಪೆಷಲ್ ಫ್ಲೈಟ್‌ನಲ್ಲಿ ಸಿದ್ದರಾಮಯ್ಯ ಡೆಲ್ಲಿಗೆ ಹಾರಿದರು. ಸಚಿವ ಸಂಪುಟದಲ್ಲಿ 10ಕ್ಕೂ ಹೆಚ್ಚು ಸಚಿವರಿಗೆ ಕೊಕ್ ನೀಡಲಾಗುತ್ತಿದೆ ಎಂಬ ಚರ್ಚೆ ನಡೀತಿದೆ. ಇವತ್ತು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಭೇಟಿ ಮಾಡಿ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ.

ಸಿಎಂ ದೆಹಲಿ ಪ್ರವಾಸವೇಕೆ?

ಕಾರಣ 1: CWC ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ ಸಿದ್ದರಾಮಯ್ಯ
ಕಾರಣ 2: ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ
ಕಾರಣ 3: ಸಂಪುಟಕ್ಕೆ ಯಾರ ಸೇರ್ಪಡೆ? ಯಾರಿಗೆ ಕೊಕ್ ಎಂಬ ಚರ್ಚೆ
ಕಾರಣ 4: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿಯೂ ಚರ್ಚೆ
ಕಾರಣ 5: ನಾಲ್ಕು ಪರಿಷತ್ ಸ್ಥಾನಗಳ ನೇಮಕ ಕುರಿತು ಸಮಾಲೋಚನೆ

ಇನ್ನು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್​ ಜಾರಕಿಹೊಳಿ ಸಿಎಂ, ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಯಾವುದೇ ಪಟ್ಟಿ ಹಿಡಿದುಕೊಂಡು ದೆಹಲಿಗೆ ತೆರಳಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಮೊದಲಿನಿಂದಲೂ ಚರ್ಚೆ ಇದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

publive-image

‘ಅದ್ಯಾವಾಗ ಮಾಡ್ತಾರೋ ಗೊತ್ತಿಲ್ಲ’

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಿಎಂ ಅವರಿಗೆ ಈ ಅಧಿಕಾರ ಇದೆ. ನಮಗೆ ಯಾವುದೇ ಅಧಿಕಾರ ಇಲ್ಲವೇ ಇಲ್ಲ. ನಾವು ಕೇಳಿದ್ದೇವೆ. ಆದರೆ ಯಾವಾಗ ಮಾಡುತ್ತಾರೆಂದು ನಮಗೆ ಗೊತ್ತಿಲ್ಲ. ಪಟ್ಟಿ ಹಿಡಿದುಕೊಂಡು ಹೋಗಿದ್ದಾರೋ, ಹಾಗೇ ಹೋಗಿದ್ದಾರೋ ಎನ್ನುವುದು ಅವರನ್ನೇ ಕೇಳಬೇಕು.

ಸತೀಶ್​ ಜಾರಕಿಹೊಳಿ, ಸಚಿವ

ಸಿಎಂ ದೆಹಲಿ ಪ್ರವಾಸದ ಬೆನ್ನಲ್ಲೇ ಕಾಂಗ್ರೆಸ್​ನ ಸಚಿವ ಸ್ಥಾನದ ಆಕಾಂಕ್ಷಿಗಳು ಅಲರ್ಟ್​ ಆಗಿದ್ದಾರೆ. ಇಂದು ರಾತ್ರಿ ಸಿಎಂ ದೆಹಲಿಯಿಂದ ವಾಪಸ್​ ಆಗಲಿದ್ದಾರೆ. ಒಂದು ವೇಳೆ ಸಚಿವ ಸಂಪುಟ ಪುನಾರಚನೆ ಆಗಿದ್ದೇ ಆದ್ರೆ, ಯಾರಿಗೆಲ್ಲಾ ಕೊಕ್? ಯಾರಿಗೆ ಮಣೆ ಹಾಕಲಾಗುತ್ತೆ ಅನ್ನೋದೆ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment