/newsfirstlive-kannada/media/post_attachments/wp-content/uploads/2024/06/CM_SIDDU_DKS-1.jpg)
ಬೆಂಗಳೂರು: ಒಂದೆಡೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಇಷ್ಟಾರ್ಥ ಸಿದ್ಧಿಗಾಗಿ ಶತ್ರು ಸಂಹಾರದ ಪೂಜೆ ಮೊರೆ ಹೋಗಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣ ಕೂಡ ದಲಿತ ದಾಳ ಉರುಳಿಸುತ್ತಿದೆ. ಡಿನ್ನರ್ ಮೀಟಿಂಗ್ಗೆ ಹೈಕಮಾಂಡ್ ಮೂಲಕ ಬ್ರೇಕ್ ಹಾಕಿಸಿ ಮೇಲುಗೈ ಸಾಧಿಸಿದ್ದ ಡಿಕೆಶಿಗೆ ಠಕ್ಕರ್ ಕೊಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ದಲಿತ ಸಚಿವರ ಸಭೆಗೆ ಅನುಮತಿ ಕೊಡಿಸಲು ಹೈಕಮಾಂಡ್ ಭೇಟಿಗೆ ಸಜ್ಜಾಗಿದ್ದಾರೆ.
ಅನುಮತಿ ಕೊಡಿಸುವ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯ
ರಾಜ್ಯ ಕಾಂಗ್ರೆಸ್ನಲ್ಲಿ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದೆ. ಮನೆಯೊಂದು ಮೂರು ಬಾಗಿಲಾಗಿರುವ ಹಸ್ತದ ಮನೆಯೊಳಗಿನ ಕೋಲ್ಡ್ವಾರ್ ತಾರಕಕ್ಕೇರಿದೆ. ಅಧಿಕಾರ ಹಂಚಿಕೆ ಸೂತ್ರ; ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಗುಸುಗುಸು; ಸಾಲು ಸಾಲು ಡಿನ್ನರ್ ಪಾಲಿಟಿಕ್ಸ್ಗಳಿಂದ ಕಾಂಗ್ರೆಸ್ನಲ್ಲಿ ಯಾವುದು ಸರಿ ಇಲ್ಲ ಎಂಬುದನ್ನು ಬಹಿರಂಗ ಮಾಡಿದೆ. ಮೊನ್ನೆ ಸಿಎಂ ಆಪ್ತರು ಡಿನ್ನರ್ ಮೀಟಿಂಗ್ ನಡೆಸಿದ ಬೆನ್ನಲ್ಲೇ ಗೃಹಸಚಿವರು, ದಲಿತ ಸಚಿವರು, ಶಾಸಕರಿಗೆ ಔತಣಕೂಟ ಆಯೋಜಿಸಲು ನಿರ್ಧರಿಸಿದ್ರು. ಆದ್ರೆ, ಡಿಸಿಎಂ ಡಿ.ಕೆ ಶಿವಕುಮಾರ್, ಹೈಕಮಾಂಡ್ ಗಮನಕ್ಕೆ ತಂದು ಇದಕ್ಕೆ ಬ್ರೇಕ್ ಹಾಕುವಲ್ಲಿ ಪರೋಕ್ಷವಾಗಿ ಮೇಲುಗೈ ಸಾಧಿಸಿದ್ರು. ಇದು ಕಾಂಗ್ರೆಸ್ನ ದಲಿತ ಸಚಿವರ ಕಣ್ಣನ್ನು ಕೆಂಪಗಾಗಿಸಿದೆ. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ದಾಳ ಉರುಳಿಸಲು ಮುಂದಾಗಿದ್ದಾರೆ.
ಸೋಮವಾರ ದೆಹಲಿಗೆ ತೆರಳಲು ಸಿಎಂ ಸಿದ್ದರಾಮಯ್ಯ ಸಜ್ಜು
ದಲಿತ ಸಚಿವರ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ಬಳಿಕ, ಸಿದ್ದರಾಮಯ್ಯ ಬಣದವರು ಡಿಸಿಎಂ ಡಿಕೆಶಿ ಮೇಲೆ ಕೆಂಡಕಾರಲು ಶುರು ಮಾಡಿದ್ರು. ಗೃಹಸಚಿವ ಪರಮೇಶ್ವರ್ ಕೂಡ ಔತಣಕೂಟ ರದ್ದಾಗಿಲ್ಲ, ತಾತ್ಕಾಲಿಕವಾಗಿ ಮುಂದೂಡಿಕೆ ಆಗಿದೆ ಅಷ್ಟೆ ಎಂದು ಸಮಾಜಾಯಿಷಿ ನೀಡಿದ್ರು. ಬಳಿಕ ಕೆಎನ್ ರಾಜಣ್ಣ ಪರಮೇಶ್ವರ್ ಮನೆಗೆ ತೆರಳಿ ಮಾತುಕತೆ ನಡೆಸಿ ಅಸಮಾದಾನ ಹೊರಹಾಕಿದ್ದರು. ಅತ್ತ ಸಚಿವ ಸತೀಶ್ ಜಾರಕಿಹೊಳಿ ಕೂಡ ಪರೋಕ್ಷವಾಗಿ ಡಿಸಿಎಂ ನಡೆಗೆ ಗರಂ ಆಗಿದ್ದರು.
ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಹೈಕಮಾಂಡ್ ಭೇಟಿ ಬೆನ್ನಲ್ಲೇ ಇತ್ತ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ದಲಿತ ಸಚಿವರ ಸಭೆಗೆ ಅನುಮತಿ ಕೊಡಿಸುವ ಜವಾಬ್ದಾರಿ ಹೊತ್ತು, ಇದೇ ತಿಂಗಳ 13 ಅಂದ್ರೆ ಮುಂದಿನ ಸೋಮವಾರ ದೆಹಲಿಗೆ ತೆರಳಲು ಪ್ಲಾನ್ ಮಾಡಿದ್ದಾರೆ. ಈ ವೇಳೆ ಹೈಕಕಾಂಡ್ ಜೊತೆ ಮಾತುಕತೆ ನಡೆಸಿ, ಅನುಮತಿ ಕೊಡಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ರಣತಂತ್ರ ರೂಪಿಸಿದ್ದಾರೆ. ಇನ್ನು ಗೃಹಸಚಿವ ಪರಮೇಶ್ವರ್ ಡಿನ್ನರ್ ಸಭೆ ಪೋಸ್ಟ್ಪೋನ್ ಆಗಿದೆ ಎಂದು ಪುನರುಚ್ಚರಿಸಿದ್ದಾರೆ.
ಡಿಸಿಎಂಗೆ ಕೆ.ಎನ್.ರಾಜಣ್ಣ ಸಲಹೆ
ಸದ್ಯ 139 ಸ್ಥಾನ ಗೆದ್ದು ಸುಭದ್ರ ಸರ್ಕಾರ ರಚನೆ ಮಾಡಿದ್ರೂ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆಯದ್ದೇ ದೊಡ್ಡ ಚರ್ಚೆಯಾಗಿದೆ. ಈ ಬಗ್ಗೆ ಕಾಂಗ್ರೆಸ್ನಲ್ಲಿ ಪರ-ವಿರೋಧ ಮಾತುಗಳು ಕೇಳಿ ಬರುತ್ತಿವೆ. ಇದೇ ವಿಚಾರವಾಗಿ ಸಚಿವ ಕೆ.ಎನ್.ರಾಜಣ್ಣ, ಡಿಸಿಎಂ ಡಿಕೆಶಿಗೆ ಸಲಹೆಯ ನೆಪದಲ್ಲಿ ತಿರುಗೇಟು ನೀಡಿದ್ದಾರೆ. ಎರಡೂವರೆ ವರ್ಷ ಯಾಕೆ? ಮುಂದೆ 5 ವರ್ಷವೇ ಸಿಎಂ ಆಗಲಿ. ಈ ಬಾರಿ ಸಿಎಂ ಆಸೆ ಬಿಡಿ ಅಂತ ರಾಜಣ್ಣ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆಯಾದ್ರೆ, ಕೆಳವರ್ಗಕ್ಕೆ ಸಿಎಂ ಸ್ಥಾನ ಸಿಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇನ್ನು ಸಚಿವ ಎಂ.ಬಿ.ಪಾಟೀಲ್ ಕೂಡ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಸಿದ್ದು ಬೆನ್ನಿಗೆ ನಿಂತಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: R ಅಶ್ವಿನ್ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ