ಸಿಎಂ ಸಿದ್ದರಾಮಯ್ಯ ಬಜೆಟ್​ ಮೇಲೆ ಜನರಿಗಿಂತ ಸಚಿವರಿಗೆ ಹೆಚ್ಚು ನಿರೀಕ್ಷೆ.. ಯಾಕೆ?

author-image
Bheemappa
Updated On
ಸಿಎಂ ಸಿದ್ದರಾಮಯ್ಯ ಬಜೆಟ್​ ಮೇಲೆ ಜನರಿಗಿಂತ ಸಚಿವರಿಗೆ ಹೆಚ್ಚು ನಿರೀಕ್ಷೆ.. ಯಾಕೆ?
Advertisment
  • ಆಟೋ ಚಾಲಕರ ಯೂನಿಯನ್ ಬೇಡಿಕೆ ಈಡೇರಿಸ್ತಾರಾ ಸಿಎಂ?
  • ‘ಬಜೆಟ್​ನಲ್ಲಿ ನಮ್ಮ ಜಿಲ್ಲೆಗೆ ದೊಡ್ಡ ಪ್ರಾಜೆಕ್ಟ್, ಹಣ ಕೇಳಿದ್ದೇವೆ’
  • ಈ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಕೊಡುತ್ತಾರಾ ಸಿದ್ದರಾಮಯ್ಯ.?

ಒಂದು ಕಡೆ ಗ್ಯಾರಂಟಿ ಯೋಜನೆಗಳನ್ನ ಈಡೇರಿಸುವ ಸವಾಲು, ಮತ್ತೊಂದೆಡೆ ಜನಪರ ಬಜೆಟ್ ಮಂಡಿಸುವ ಸವಾಲು. ಈ ಮಧ್ಯೆ ಐತಿಹಾಸಿಕ ಬಜೆಟ್ ಮಂಡಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ದಾಖಲೆಯ 15ನೇ ಬಜೆಟ್​​​​ ಮಂಡಿಸುತ್ತಿರುವ ಭಾಗ್ಯರಾಮಯ್ಯನ ಲೆಕ್ಕಾಚಾರ ನೂರೆಂಟು ನಿರೀಕ್ಷೆಗಳನ್ನ ಮೂಡಿಸಿದೆ.

ಮಾರ್ಚ್‌ 7.. ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಐತಿಹಾಸಿಕ ದಿನ. ಅವತ್ತು ಬಜೆಟ್ ಮಂಡನೆಗೆ ಫುಲ್​ ರೆಡಿಯಾಗಿದ್ದಾರೆ. ಕರುನಾಡ ಜನತೆಗೆ ಭಾಗ್ಯಗಳನ್ನು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. 16ನೇ ಬಜೆಟ್​​​ ಮಂಡಿಸಲಿದ್ದು, ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಸಿದ್ದರಾಮಯ್ಯ ಮುಡಿಗೇರಲಿದೆ. ಡಿಸಿಎಂ ಆಗಿ 7 ಬಾರಿ ಹಾಗೂ ಸಿಎಂ ಆಗಿ 8 ಬಾರಿ ಬಜೆಟ್​ ಮಂಡಿಸಿದಂತಾಗಲಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲೆ ನೂರಾರು ನಿರೀಕ್ಷೆಗಳಿವೆ.

publive-image

ಸಿದ್ದರಾಮಯ್ಯ ಬಜೆಟ್ ಮೇಲೆ ಸಚಿವರಲ್ಲೇ ಹೆಚ್ಚಿದ ನಿರೀಕ್ಷೆ

ಕಾಂಗ್ರೆಸ್​​ನಲ್ಲಿ ಪವರ್​ ಶೇರಿಂಗ್​ ಫೈಟು, ಗೆಲುವಿನ ಪಾಲು ಬೇಕು ಅನ್ನೋ ಡಿಕೆಶಿ ಸಿಂಗಲ್​​​ ಅಜೆಂಡಾ, ಇತ್ತ ದಲಿತ ನಾಯಕತ್ವಕ್ಕೆ ಪಟ್ಟು, ಯುಗಾದಿ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಆಗೋ ಅಷ್ಟೂ ಲಕ್ಷಣಗಳು ಕಾಣಿಸ್ತಿದೆ. ಸಾಲು ಸಾಲು ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಡಿಮ್ಯಾಂಡ್​​ ಮಾಡ್ತಿರುವಾಗಲೇ ಈಗಿರೋ ಸಚಿವರು ಈ ಬಜೆಟ್​ನಲ್ಲಿ ಹೇಗಾದ್ರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಅನುದಾನ ಹೆಚ್ಚು ತಂದು ಬಿಡಬೇಕು ಅನ್ನೋ ತವಕದಲ್ಲಿದ್ದಾರೆ.

ಈ ವರ್ಷ ಬಜೆಟ್ ಗಾತ್ರ ₹4 ಲಕ್ಷ ಕೋಟಿಗೂ ಹೆಚ್ಚಾಗೋ ಸಾಧ್ಯತೆ

ಕಳೆದ ಭಾರಿ 3.7 ಲಕ್ಷ ಕೋಟಿ ಬಜೆಟ್ ಇತ್ತು.. ಈ ವರ್ಷ 4 ಲಕ್ಷ ಕೋಟಿಗೂ ಹೆಚ್ಚು ಬಜೆಟ್ ಗಾತ್ರ ಬರುವ ಸಾಧ್ಯತೆ ಇದೆ.. ಇನ್ನು ಮಾರ್ಚ್​ ಬಜೆಟ್​​ನಲ್ಲಿ ನಮಗೇನು ಸಿಗುತ್ತೆ ಅನ್ನೋ ನಿರೀಕ್ಷೆ ಸಚಿವರಲ್ಲೇ ಹೆಚ್ಚಿಗಿದೆ. ಅನುದಾನ ತರೋ ಪೈಪೋಟಿಯಲ್ಲಿ ತುಮಕೂರು ಮುಂಚೂಣಿಯಲ್ಲಿದೆ. ಇದರ ಬಗ್ಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಈ ಬಾರಿಯ ಬಜೆಟ್​ನಲ್ಲಿ ನಮ್ಮ ಜಿಲ್ಲೆಗೆ ದೊಡ್ಡ ಪ್ರಾಜೆಕ್ಟ್, ಹಣ ಕೇಳಿದ್ದೇವೆ ಎಂದು ಅನುದಾನದ ಸೀಟ್​ ಮೇಲೆ ಕರ್ಚೀಫ್​ ಹಾಕಿದ್ದಾರೆ.

ನಮ್ಮ ಜಿಲ್ಲೆಗೆ ಹೆಚ್ಚು ಪ್ರಾಜೆಕ್ಟ್, ಹಣ ಕೊಡಿ ಎಂದು ಈಗಾಗಲೇ ಕೇಳಿದ್ದೇನೆ. ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆಯೇ ಇಟ್ಟುಕೊಂಡಿದ್ದೇನೆ. ಜಿಲ್ಲೆಗೆ ಯಾವ ರೀತಿ ಅನುದಾನ ಕೊಡುತ್ತಾರೆ ನೋಡಬೇಕು.

ಜಿ.ಪರಮೇಶ್ವರ್, ಗೃಹ ಸಚಿವ

ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ಬಗ್ಗೆ ಡಿಸಿಎಂ ಅಸಹಾಯಕತೆ ಮಾತು.. ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಕೆಂಡ

publive-image

ಈ‌ ಬಾರೀ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಸಚಿವ ಎಂಸಿ ಸುಧಾಕರ್​ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜು ಆಸ್ಪತ್ರೆ, ಹೂವುಗಳ ಮಾರುಕಟ್ಟೆ, ಕೆರೆಗಳಿಗೆ ನೀರು ತುಂಬಿಸಲು ಮನವಿ ಮಾಡಿದ್ದೇನೆ. ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಶಿಡ್ಲಘಟ್ಟ ಮತ್ತು ಚಿಂತಾಮಣಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ. ಹೆಚ್​,ಎನ್​ ವ್ಯಾಲಿದನ್ನು ಇಲಾಖೆಗೆ ಕಳಿಸಿಕೊಟ್ಟಿದ್ದೇವೆ. ಏನೇ ಆಗಲಿ ಈ ಬಾರಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯಂತೂ ಕೊಟ್ಟೇ ಕೊಡ್ತಿನಿ. ಸಿಎಂ ಸಿದ್ದರಾಮಯ್ಯ ಅವರು ಭರವಸೆ ಕೊಟ್ಟಿದ್ದಾರೆ.

ಎಂಸಿ ಸುಧಾಕರ್​, ಸಚಿವ

ಇನ್ನೂ ಸಿದ್ದರಾಮಯ್ಯ ಬಜೆಟ್​ ಬಗ್ಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆ ಕೂಡ ಜಾಸ್ತಿಯಾಗಿದೆ. ಸಿಎಂಗೆ ಆಟೋ ಚಾಲಕರ ಯೂನಿಯನ್ ಬೇಡಿಕೆ ಈಡೇರಿಕೆಗೆ ಒತ್ತಾಯ ಕೇಳಿ ಬಂದಿದೆ. ಆದರ್ಶ್ ಆಟೋ ಯುನಿಯನ್ ಅಧ್ಯಕ್ಷ ಮಂಜುನಾಥ್ ಪತ್ರದ ಮೂಲಕ ಬೇಡಿಕೆ ಇಟ್ಟಿದ್ದಾರೆ. ಅದು ಏನೇ ಇರಲಿ, ಈ ವರ್ಷದ ಬಜೆಟ್​ನಲ್ಲಿ ಯಾಱರಿಗೆ ಎಷ್ಟೆಷ್ಟು ಸಿಗುತ್ತೆ ಅನ್ನೋದನ್ನ ಮಾರ್ಚ್​ 7ರವರೆಗೆ ಕಾದು ನೋಡಬೇಕಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment