newsfirstkannada.com

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ; ಬೆಂಗಳೂರಿಗೆ ಬಜೆಟ್‌ನಲ್ಲಿ ವಿಶೇಷ ಕೊಡುಗೆಗಳು; ಏನದು?

Share :

Published February 16, 2024 at 11:29am

Update February 16, 2024 at 2:42pm

    ಸಿಲಿಕಾನ್ ಸಿಟಿಯ ಜನರನ್ನು ದಿನ ಬೆಳಗಾದರೆ ಕಾಡುತ್ತಿರುವ ಟ್ರಾಫಿಕ್

    ಬೆಂಗಳೂರಲ್ಲಿ ಇನ್ಮುಂದೆ ರಾತ್ರಿ 1 ಗಂಟೆವರೆಗೆ ವ್ಯಾಪಾರ ಮಾಡಬಹುದಾ?

    ಟ್ರಾಫಿಕ್​ ಸಮಸ್ಯೆಗಾಗಿ ಜಪಾನ್ ತಂತ್ರಜ್ಞಾನದ ಮೊರೆ ಹೋದ ಸರ್ಕಾರ

ಬೆಂಗಳೂರು:  ಸಿಎಂ ಸಿದ್ದರಾಮಯ್ಯ ಅವರು 15ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡುತ್ತಿದ್ದಾರೆ. 2024-25ನೇ ಸಾಲಿನ ರಾಜ್ಯ ಬಜೆಟ್​ ಗಾತ್ರವು 3,71, 383 ಕೋಟಿ ರೂಪಾಯಿ ಆಗಿದೆ. ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಸಿದ್ದರಾಮಯ್ಯ ಈ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿಲಿಕಾನ್​ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆಯು ಎಡೆ ಬಿಡದೇ ಕಾಡುತ್ತಿದ್ದು ಇದಕ್ಕೆ ಜಪಾನ್ ತಂತ್ರಜ್ಞಾನದ ಮೊರೆ ಹೋಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್​ ಜಾಮ್ ಹೆಚ್ಚಾಗುತ್ತಿದ್ದು ಜನರು ಕೂಡ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಇದನ್ನು ಗಣನೆಗೆ ತೆಗೆದುಕೊಂಡಿರುವ ಸರ್ಕಾರ ರಾಜಧಾನಿಯ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನದ ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಬಳಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಸಾರಿಗೆ ವ್ಯವಸ್ಥೆಯಾದ ಬಿಎಂಟಿಸಿ ಇಲಾಖೆಗೆ 1,334 ಹೊಸ ಎಲೆಕ್ಟ್ರಿಕ್ ಬಸ್​ಗಳನ್ನ ಸೇರ್ಪಡೆ ಮಾಡಲಾಗುವುದು. ಜೊತೆಗೆ ಬಿಎಂಟಿಸಿ ಪ್ರಯಾಣಿಕರಿಗೆ ವೆಹಿಕಲ್ ಟ್ರ್ಯಾಕಿಂಗ್ ಌಪ್ ಸೌಲಭ್ಯ ಕೂಡ ಒದಗಿಸಲಾಗುತ್ತದೆ. ಇನ್ಮುಂದೆ ಬೆಂಗಳೂರಿನಲ್ಲಿ ವ್ಯಾಪಾರ, ವಹಿವಾಟು ತಡರಾತ್ರಿ 1 ಗಂಟೆವರೆಗೆ ಮಾಡಬಹುದು ಎಂದು ಸಿದ್ದರಾಮಯ್ಯ ಅವರು ಬಜೆಟ್​​ನಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ; ಬೆಂಗಳೂರಿಗೆ ಬಜೆಟ್‌ನಲ್ಲಿ ವಿಶೇಷ ಕೊಡುಗೆಗಳು; ಏನದು?

https://newsfirstlive.com/wp-content/uploads/2023/07/Traffic_1.jpg

Load More